ಸವಳಕ್ಯಾಂಪ್‌ನ ದಲಿತ ಕೃಷಿ ಕಾರ್ಮಿಕರಿಗೆ ಕ್ಯಾಂಪ್‌ನ ಸುತ್ತಲು ಇರುವ ಭೂಮಾಲೀಕರು ದೌರ್ಜನ್ಯ ಮಾಡುತ್ತಿರುವುದು ಕುರಿತು ಪಿಯುಸಿಎಲ್ ಸಂಘಟನೆ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿತ್ತು . ದೂರಿನನ್ವಯ ಮಾನವಹಕ್ಕುಗಳ ಅಧ್ಯಕ್ಷೀಯ ಮಂಡಳಿಯ ಸದಸ್ಯರಾದ ನ್ಯಾಯಮೂರ್ತಿಗಳಾದ ಹುನಗುಂದರವರು ಸವಳಕ್ಯಾಂಪ್ ವಿಕ್ಷಣೆ ಮಾಡಿ ಜಿಲ್ಲಾಧಿಕಾರಿಗಳಿಗೆ ಅಲ್ಲಿನ ಜನರಿಗೆ ಮೂಲಭೂತ ಸೌಕರ್ಯಗಳನ್ನು ಆರು ವಾರಗಳೊಳಗಾಗಿ ಒದಗಿಸಬೇಕೆಂದು ಆದೇಶಿಸಿದ್ದಾರೆ.
ಸವಳಕ್ಯಾಂಪಿನ ಜನರ ಸ್ಥಿತಿಯನ್ನು ಗಮನಿಸಲು ಮಾನವಹಕ್ಕುಗಳ ಆಯೋಗದ ಆದೇಶದಂತೆ ಕ್ರಮ ಜರುಗಿಸಲು ಕೊಪ್ಪಳ ಜಿಲ್ಲಾಪಂಚಾಯತ್ ಮುಖ್ಯ ಕಾರ್ಯದರ್ಶಿಗಳಾದ ಕೃಷ್ಣಾ ಉದುಪುಡಿರವರು ಸಂಬಂಧಿತ ಎಲ್ಲಾ ಅಧಿಕಾರಿಗಳೊಂದಿಗೆ ಇಂದು ಸವಳಕ್ಯಾಂಪ್‌ಗೆ ಭೇಟಿ ನೀಡಿ ಜನರ ಅಹ್ವಾಲುಗಳನ್ನು ಸ್ವೀಕರಿಸಿ ಶೀಘ್ರದಲ್ಲಿಯೇ ಅಲ್ಲಿನ ಜನರ ಬೇಡಿಕೆಗಳನ್ನು ಈಡೇರಿಸುವದಾಗಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪಿಯುಸಿಎಲ್‌ನ ಜಿಲ್ಲಾಧ್ಯಕ್ಷರಾದ ವಿಠ್ಠಪ್ಪ ಗೋರಂಟ್ಲಿ, ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘದ ಜಿಲ್ಲಾ ಸಂಚಾಲಕಿ ಶಾಂತಕುಮಾರಿ ಎ.ಐ.ಸಿ.ಸಿ.ಟಿ.ಯು.ನ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಪ್ಪ, ಅಖಿಲ ಭಾರತ ಕೃಷಿ ಕಾರ್ಮಿಕ ಸಂಘದ ತಾಲೂಕ ಅಧ್ಯಕ್ಷ ಎಂ.ಯೇಸಪ್ಪ, ರವಿರೆಡ್ಡಿ ಮತ್ತು ಕೆಂಚಪ್ಪ ಹಿರೇಖೇಡಾ ಮತ್ತೀತರ ಕೃಷಿ ಕಾರ್ಮಿಕ ಸಂಘದ ಸದಸ್ಯರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.
0 comments:
Post a Comment