PLEASE LOGIN TO KANNADANET.COM FOR REGULAR NEWS-UPDATES

 ಶೈಕ್ಷಣಿಕ ಪ್ರಗತಿಯಲ್ಲಿ ಶಿಕ್ಷಕರ ಪಾತ್ರ ಮಹತ್ವದಾಗಿದೆ ಎಂದು ಕೊಪ್ಪಳ ತಾಲೂಕ ಕ್ಷೇತ್ರಶಿಕ್ಷಣಾಧಿಕಾರಿಗಳಾದ ಉಮೇಶ ಪೂಜಾರಹೇಳಿದರು.
ಅವರು ತಾಲೂಕಿನ ಕವಲೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಿಶೇಷ ದಾಖಲಾತಿ ಅಭಿಯಾನವನ್ನು ಉದ್ದೇಶಿಸಿ ಮಾತನಾಡುತ್ತ,ಶೈಕ್ಷಣಿಕವಾಗಿ ಅಭಿವೃದ್ದಿಯನ್ನು ಹೊಂದಬೇಕಾದರೆ ಶಿಕ್ಷಕರ ಪಾತ್ರ ಮಹತ್ವವಾಗಿದೆ.ಶಿಕ್ಷಕರು ತಮ್ಮ ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸಬೇಕು ಜೊತೆಯಲ್ಲಿ ಮಕ್ಕಳ ಮಾನಸಿಕ ಮಟ್ಟಕ್ಕೆ ಅನುಗುಣವಾಗಿ ಪಾಠ ಬೋಧನೆಯಲ್ಲಿ ಅನೇಕ ವಿಭಿನ್ನವಾದ ಚಟುವಟಿಕೆಗಳನ್ನು ಕೈಗೊಳ್ಳುವುದರ ಮೂಲಕ ಸಂತಸದಾಯಕ ಕಲಿಕೆಯ ವಾತಾವರಣವನ್ನು ನಿರ್ಮಿಸಬೇಕು.ಅನೇಕ ಕಾರಣಗಳಿಂದ ಮಕ್ಕಳು ಶಾಲೆಯನ್ನು ಬಿಡುತ್ತಾರೆ.ಅಂತಹ ಮಕ್ಕಳ ಮನೆಗೆ ಶಿಕ್ಷಕರ ಆ ಗ್ರಾಮದ ಪ್ರಮುಖರು ಹಾಗೂ ಜನಪ್ರತಿನಿಧಿಗಳೊಂದಿಗೆ ಭೇಟಿ ನೀಡಿ ಅವರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನವನ್ನು ಮಾಡಬೇಕು.ಗುಣಾತ್ಮಕ ಶಿಕ್ಷಣವನ್ನು ನೀಡುವುದರ ಮೂಲ ಶೈಕ್ಷಣಿಕ ಪ್ರಗತಿಗೆ ಪ್ರತಿಯೊಬ್ಬ ಶಿಕ್ಷಕರು ಪ್ರಮಾಣಿಕ ಪ್ರಯತ್ನವನ್ನು ಮಾಡಬೇಕು ಎಂದು ಹೇಳಿದರು.
  ನಂತರ ಕ್ಷೇತ್ರ ಸಮನ್ವಾಧಿಕಾರಿಗಳಾದ ಶರಣಪ್ಪ ಗೌರಿಪುರ ಮಾತನಾಡಿ,೨೦೧೪ನೇ ವರ್ಷವನ್ನು ಶಿಕ್ಷಣ ಗುಣವರ್ಧನ ವರ್ಷ ವನ್ನಾಗಿ ಆಚರಿಸಲಾಗುತ್ತಿದೆ.ಹಾಕಿಕೊಂಡಿದರುವ ೧೦ ಹಂತಗಳ ಚಟುವಟಿಕೆಯನ್ನು ಸರ್ಮಕವಾಗಿ ಎಲ್ಲಾ ಶಿಕ್ಷಕರು ಅಳವಡಿಸಿಕೊಂಡು ಹಾಕಿಕೊಂಡ ಯೋಜನೆಯ ಯಶಸ್ವಿಗೆ ಪ್ರತಿಯೊಬ್ಬರು ಶಿಕ್ಷಕರು ಶ್ರಮಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎ.ಪಿ.ಎಂ.ಸಿ.ಯ ಉಪಾಧ್ಯಕ್ಷರಾದ ಮಾಯಪ್ಪ ಭಾವಿಕಟ್ಟಿ,ಬಿ.ಆರ್.ಪಿ.ವಿಜಯಕುಮಾರ ಕುರಗೋಡ,ಮುಖ್ಯ ಶಿಕ್ಷಕರಾದ ಶಂಕ್ರಪ್ಪ ಲಮಾಣಿ,ಭೋಜಪ್ಪ,ಶರಣಪ್ಪ ಹಾಗೂ ಶಿಕ್ಷಕರಾದ ಸಂಗನಗೌಡ ಪಾಟೀಲ ಇತರರಿದ್ದರು.
ಕೊನೆಯಲ್ಲಿ ಜನಪ್ರತಿನಿಧಿಗಳೊಂದಿಗೆ ಶಾಲೆ ಬಿಟ್ಟ ಮಕ್ಕಳ ಮನೆಗೆ ಭೇಟಿ ನೀಡಿ ಪೋಷಕರಿಗೆ ಶಿಕ್ಷಣದ ಬಗ್ಗೆ ಅರಿವು ಮೂಡಿಸಲಾಯಿತು.

Advertisement

0 comments:

Post a Comment

 
Top