PLEASE LOGIN TO KANNADANET.COM FOR REGULAR NEWS-UPDATES

  ಪವಿತ್ರ ಶ್ರಾವಣ ಮಾಸದ ಪ್ರಯುಕ್ತವಾಗಿ ಪ್ರತಿ ವರ್ಷದಂತೆ ನಗರದ ರಾಷ್ಟ್ರೀಯ ಬಸವದಳ, ಲಿಂಗಾಯತ ಧರ್ಮ ಮಹಾಸಭಾ, ಹಾಗೂ ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾ ಗಣ ಇವುಗಳ ಆಶ್ರಯದಲ್ಲಿ ದಿನಾಂಕ: ೨೭/೦೭/೨೦೧೪ರ ದೇವವಾರ (ರವಿವಾರ) ದಿಂದ ಒಂದು ತಿಂಗಳ ಪರ್ಯಂತ ಪ್ರತಿ ದಿನ ಬೆಳಿಗ್ಗೆ ೦೫:೦೦ ಗಂಟೆಗೆ ಬಸವ ಚಿಂತನ ಪ್ರಭೆ ಹಾಗೂ ಸಾಯಂಕಾಲ ೦೭:೦೦ ಗಂಟೆಗೆ ಬಸವಜ್ಯೋತಿ ಕಾರ್ಯಕ್ರಮಗಳು ಜರುಗುವವು.
ಇವನಾರವ... ಇವರನಾರವ ಎಂದೇನಿಸದೆ, ಇವ ನಮ್ಮವ ಇವ ನಮ್ಮವ ಎಂದೆನಿಸುತ್ತಾ ಯಾರು ಕರೆದರೂ ಅವರ ಮನೆ-ಮನಗಳ ಬಾಗಿಲಿಗೆ ಯಾವುದೆ ಖರ್ಚು ನಿಯಮಗಳ ಕಟ್ಟುಪಾಡುಗಳಿಲ್ಲದೆ ಬಸವಧರ್ಮದ ಸಂಚಾರ ನಡೆಯಲಿದೆ. 
ಹಸಿವಿಗೆ ಅಂಬಲಿ ಮುದ್ದು, ಬಿಸಿಲಿಗೆ ಕೊಡೆ ಮುದ್ದು 
ಬಸುರಲ್ಲಿ ಬಂದ ಶಿಶು ಮುದ್ದು | ಲೋಕಕ್ಕೆ 
ಬಸವಣ್ಣನೆ ಮುದ್ದು ಸರ್ವಜ್ಞ --
               ಎನ್ನುವ ಸರ್ವಜ್ಞನ ವಾಣಿಯಂತೆ ಬಸವನಾಮ ಸ್ಮರಣೆ ಮಾಡುತ್ತಾ ಈ ಪವಿತ್ರ ಆಚರಣೆಯನ್ನು ಶ್ರವಣ ಮಾಡುತ್ತಾ ಧರ್ಮ ಸಂಸ್ಕಾರವನ್ನು ಹೊಂದಿ ಮುಂಬರುವ ಪಿಳಿಗೆಯಲ್ಲಿ ನಿಜ ತತ್ವಗಳನ್ನು ನೆಲೆಗೊಳಿಸಿ ಜೀವನದ ಸಾರ್ಥಕತೆಯನ್ನು ಗಳಿಸುವಲ್ಲಿ ಯಶಸ್ವಿಯಾಗೊಣ. ಸೃಷ್ಠಿಕರ್ತನ ಕರುಣೆ ಪಡೆಯೋಣವೆಂದು ಆಶಿಸುತ್ತಾ ದಿನಾಂಕ:೨೭/೦೭/೨೦೧೪ ರ ಬೆಳಿಗ್ಗೆ ೦೫:೦೦ ಗಂಟೆಗೆ ನಗರದ ಬಸವ ಮಂಟಪದಲ್ಲಿ ಬಸವೇಶ್ವರ ಪೂಜಾವೃತ ಮತ್ತು ಸಾಮೂಹಿಕ ಇಷ್ಟಲಿಂಗ ಪೂಜೆ ಮಾಡುವುದರ ಮೂಲಕ ಉದ್ಘಾಟನೆಗೊಂಡು ಅಂದು ಸಾಯಂಕಾಲ ೦೭:೦೦ಗಂಟೆಗೆ ಶರಣ ಚಂದ್ರಶೇಖರ ಕೊಟಗಿ ಧನ್ವಂತರಿ ಕಾಲೋನಿ ಭಾಗ್ಯನಗರ ಇವರ ಮನೆಯಲ್ಲಿ ಬಸವಜ್ಯೋತಿ ಕಾರ್ಯಕ್ರಮ ಜರುಗುವುದು.

Advertisement

0 comments:

Post a Comment

 
Top