ನನ್ನನ್ನು ಕೊಪ್ಪಳ ಜಿಲ್ಲಾ ೬ನೇ ಚುಟುಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಸನ್ಮಾನಿಸಿದಕ್ಕೆ ನಾನೂ ಚುಟುಕು ಸಾಹಿತ್ಯ ಪರಿಷತ್ತಿಗೆ ಋಣಿಯಾಗಿದ್ದೇನೆ. ನಾನೂ ಇನ್ನಷ್ಟು ಸಾಹಿತ್ಯ ಸೇವೆ ಮಾಡಲು ಅಣಿಯಾಗುತ್ತೇನೆ.ಈ ಸಾಹಿತ್ಯ ಕ್ಷೇತ್ರಕ್ಕೆ ನನ್ನನ್ನು ಇನ್ನೂ ಹೆಚ್ಚೆಚ್ಚು ತೊಡಗಿಸಿಕೊಳ್ಳುಲು ಪ್ರಯತ್ನಿಸುತ್ತೇನೆ ಎಂದು ಕೊಪ್ಪಳ ಜಿಲ್ಲಾ ೬ನೇ ಚುಟುಕು ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷರಾದ ಈಶ್ವರ ಹತ್ತಿ ಹೇಳಿದರು.
ಅವರು ಭಾನುವಾರ ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಸಮ್ಮೇಳನಕ್ಕೆ ಅಧಿಕೃತ ಆಹ್ವಾನವನ್ನು ಸ್ವೀಕರಿಸಿ ಮಾತನಾಡಿದರು.
ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಪ್ರಾಸ್ತಾವಿಕವಾಗಿ ಮಾತನಾಡುವುದರ ಜೊತೆಗೆ ನಿಯೋಜಿತ ಸಮ್ಮೇಳನಾಧ್ಯಕ್ಷರನ್ನು ಸನ್ಮಾನಿಸಿದರು. ಕಾರ್ಯಕ್ರಮದ ಕುರಿತು ಹಿರಿಯ ಸಾಹಿತಿಗಳಾದ ಎಚ್.ಎಸ್.ಪಾಟೀಲ, ಡಾ.ಮಹಾಂತೇಶ ಮಲ್ಲನಗೌಡರ, ಪತ್ರಕರ್ತರ ವೇದಿಕೆಯ ರಾಜ್ಯಾಧ್ಯಕ್ಷರಾದ ಮಹೇಶಬಾಬು ಸುರ್ವೇ,ಸಾಹಿತಿಗಳಾದ ವಿಜಯ ಲಕ್ಷ್ಮೀ ಹಿರೇಮಠ,ಅನಸೂಯಾ ಜಾಗಿದಾರ ಮಾತನಾಡಿದರು.
ಕಾರ್ಯಕ್ರಮದಲ್ಲಿ ವೀರಕನ್ನಡಿಗ ಯುವಕ ಸಂಘದ ಅಧ್ಯಕ್ಷರಾದ ಶಿವಾನಂದ ಹೊದ್ಲೂರ,ಸರ್ಕಾರಿ ಅಂಗವಿಕಲ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ,ವಾಯ್.ಬಿ.ಜುಡಿ,ಹನಿ, ಜ್ಯೋತಿಹತ್ತಿ,ಲಕ್ಷ್ಮೀಶ ಬಡಿಗೇರ,ಬಿ.ಎ.ಆಡೂರ,ಶಿವಕುಮಾರ ಹತ್ತಿಎನ್.ಎಂ.ಸವದತ್ತಿ, ಶ್ರೀನಿವಾಸ ಚಿತ್ರಗಾರ,ಸ್ನೇಹಲತಾ ಜೋಶಿ,ಕಲ್ಲಪ್ಪ ತೋಂಡಿಹಾಳ,ಕಳಕಮ್ಮ ಹತ್ತಿ,ಶಿವಕುಮಾರ ಹತ್ತಿ,ಪಾರ್ವತಮ್ಮ ಕಲ್ಲಪ್ಪ ಮುಂತಾದವರು ಹಾಜರಿದ್ದರು.
0 comments:
Post a Comment