ತಾಲೂಕಿನ ಶ್ರೀಕ್ಷೇತ್ರ ಕರ್ಕಿಹಳ್ಳಿ ಗ್ರಾಮದಲ್ಲಿ ಶ್ರೀ ಮೃತ್ಯುಂಜಯೇಶ್ವರನ (ಶಿವಚಿದಂಬರೇಶ್ವರ) ಜಾತ್ರೆಯ ಅಂಗವಾಗಿ ೧೧ನೇ ವರ್ಷದ ಮಹಾರಥೋತ್ಸವವು ಸಕಲ ಮಂಗಳವಾದ್ಯ ವೈಭವಗಳಿಂದ ಅತ್ಯಂತ ಸಡಗರ ಸಂಭ್ರಮದಿಂದ ವಿಜೃಂಭಣೆಯಿಂದ ಜರುಗಿತು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀಕ್ಷೇತ್ರ ಗುರ್ಲಹೊಸೂರಿನ ಶ್ರೀ ಸುಂದರೇಶ ಬಾಪು, ಶ್ರೀ ದಂಡಪಾಣಿ, ಶ್ರೀ ಮನೋಹರ ಮಲ್ಹಾರ, ಶ್ರೀಕ್ಷೇತ್ರ ಆನಂದವನದ ಶೇಷಣ್ಣ ಸೇರಿದಂತೆ ಅನೇಕ ಸ್ವಾಮಿಗಳು ವಹಿಸಿದ್ದರು.
ಜಾತ್ರೆಯ ಅಂಗವಾಗಿ ಒಟ್ಟು ಹನ್ನೊಂದು ದಿನಗಳವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳಾದ ಕಾಕಡಾರತಿ, ಅಖಂಡ ಶಿವಶಿವ ಶಿವಶಿವ ಸಾಂಬಚಿದಂಬರ ಹರಹರ ಸಾಂಬಚಿದಂಬರ ಭಜನಾ ಸಪ್ತಾಹ, ವಿಜಯೀದಾಸ ಚಿದಂಬರ ಧ್ವಜಾರೋಹಣ, ಗೋಪೂಜಾ, ಯಾಗಮಂಟಪ ಪ್ರವೇಶ, ಪುಣ್ಯಾಹವಾಚನ, ಋತ್ವಿಗ್‌ವರ್ಣನೆ, ಉದಕಶಾಂತಿ, ಸಗ್ರಹಮುಖ ಚತುರ್ದ್ರವ್ಯ ಶ್ರೀ ಮಹಾಗಣಪತಿ ಹೋಮ, ಪವಮಾನ ಹೋಮ, ಚಿಕ್ಕಯ್ಯಸ್ವಾಮಿ ಕಾರ್ಯಕ್ರಮ, ಮಲ್ಲಯ್ಯನಿಗೆ ಅಭಿಷೇಕ, ಮಲ್ಹಾರಿಹೋಮ, ರುದ್ರಸ್ವಾಹಾಕಾರ, ಪೂರ್ಣಾಹುತಿ, ದೊಡ್ಡಯ್ಯ ಕಾರ್ಯಕ್ರಮ, ಮ
ಲ್ಲಯ್ಯನಿಗೆ ಆರತಿ ನೈವೇದ್ಯ, ಪ್ರಥಮ ಏಕಾದಶಿ ಶ್ರೀ ಚೆನ್ನಕೇಶ್ವರ ಬ್ರಹ್ಮರಥೋತ್ಸವ ನಿಮಿತ್ಯ ಕ್ಷೀರಾಭಿಷೇಕ, ತುಳಸಿ ಅರ್ಚನೆ, ಸತ್ಯನಾರಾಯಣ ವ್ರತ, ಮಹಾವಿಷ್ಣುಯಾಗ, ಮೃತ್ಯುಂಜಯಹೋಮ, ಪೂರ್ಣಾಹುತಿ ಹಾಗೂ ಶ್ರೀ ಚೆನ್ನಕೇಶ್ವರನ ಬ್ರಹ್ಮ ರಥೋತ್ಸವ, ನವಗ್ರಹಹೋಮ, ಸಗ್ರಹಮುಖ ಪೌರಹೋಮ, ಪೂರ್ಣಾಹುತಿ, ವಿದ್ಯಾರ್ಥಿಗಳಿಗಾಗಿ ಧಾರಣ ಸರಸ್ವತಿಹೋಮ, ಧನ್ವಂತರಿಹೋಮ, ಸಗ್ರಹಮುಖ ಚಂಡಿಕಾ ಹೋಮ, ಕಳಸದ ಜಲಾಧಿವಾಸ, ಪೂರ್ಣಾಹುತಿ, ಕುಮಾರಿಕಾ ಪೂಜೆ, ಮಹಾಪ್ರಸಾದ ವಿನಿಯೋಗ, ೧೦೦೦೧ ಕುಂಬಮೇಳ, ಶ್ರೀ ಮೃತ್ಯುಂಜಯೇಶ್ವರ ಪ್ರಾಥಮಿಕ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಕಳಸಕ್ಕೆ ಧಾನ್ಯಾಧಿವಾಸ, ಸಯ್ಯಾಧಿವಾಸ, ಉಛ್ರಾಯ ಕಾರ್ಯಕ್ರಮ, ಚಿದಂಬರೇಶ್ವರ ವಂಶಭೂಷಣರಿಂದ ಹಾಗೂ ಶೇಷಾಚಲ ವಂಶೀಯ ಪರಿವಾರದಿಂದ ಕರ್ಕಿಹಳ್ಳಿ ಹಾಗೂ ಬೇರೆ ಕಡೆಗಳಿಂದ ಆಗಮಿಸಿದ ಭಕ್ತಸಾಗರದ ಮಧ್ಯದಲ್ಲಿ ವೇದಘೋಷದಿಂದ ದಿಂಡಿ ಭಜನೆಯಿಂದ, ಮಂಗಳವಾದ್ಯಗಳಿಂದ ಮತ್ತು ಗಜರಾಜನಿಂದ ಚೌರಿಬೀಸುವುದರೊಂದಿಗೆ ಸ್ವಾಮಿಗೆ ಪುಷ್ಪವೃಷ್ಟಿಗೈಯುತ್ತ ಮಹಾದ್ವಾರದ ಉದ್ಘಾಟನೆ ನೆರವೇರಿಸಲಾಯಿತು. ಚಿದಂಬರೇಶ್ವರನಿಗೆ ಮೃತ್ಯುಂಜಯೇಶ್ವರನಿಗೆ ಸುವರ್ಣಲೇಪಿತ ಕಳಸಾರೋಹಣವನ್ನು ಶ್ರೀ ಬ್ರಹ್ಮಾನಂದತೀರ್ಥ ಭಿಕ್ಷು, ಯತಿಗಳು, ಸದ್ಗುರು ದಿವ್ಯಾಶ್ರಮ ಭರಮಸಾಗರ ಇವರ ಅಮೃತಹಸ್ತದಿಂದ ನೆರವೇರಿಸಿದರು. ಅಲ್ಲದೇ ಮೃತ್ಯುಂಜಯೇಶ್ವರನಿಗೆ ಬುತ್ತಿಪೂಜೆ, ಅವಭೃತಸ್ನಾನ, ಮಹಾನೈವೇದ್ಯ, ಮಹಾಮಂಗಳಾರತಿಯೊಂದಿಗೆ ಯಶಸ್ವಿಯಾಗಿ ಜರುಗಿತು. ಅಲ್ಲದೇ ಯೋಗಾಚಾರ್ ಹನುಮಂತ ಟಕ್ಕಳಕಿ ಇವರಿಂದ ಯೋಗ ಶಿಕ್ಷಣ ತರಬೇತಿಯು ಪ್ರತಿದಿನ ಬೆಳಿಗ್ಗೆ ೬ ರಿಂದ ೭ ಹಾಗೂ ಸಂಜೆ ೫ ರಿಂದ ೬ ರವರೆಗೆ, ಅವಧೂತ ಶಾಸ್ತ್ರಿಗಳವರಿಂದ ನಗೆಹಬ್ಬ ಹಾಗೂ ಉಪನ್ಯಾಸ ಕಾರ್ಯಕ್ರಮ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ಈ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು, ಗಣ್ಯವ್ಯಕ್ತಿಗಳು, ಸುತ್ತಮುತ್ತಲಿನ ಗ್ರಾಮಸ್ಥರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿದ್ದರು.
0 comments:
Post a Comment