PLEASE LOGIN TO KANNADANET.COM FOR REGULAR NEWS-UPDATES

 ಕನಕಗಿರಿ ವಿಧಾಸಭಾ ಕ್ಷೇತ್ರದ ವ್ಯಾಪ್ತಿಯ ಮರಕುಂಬಿ ಗ್ರಾಮದಲ್ಲಿ ಕ್ಷೌರ ವಿವಾದದಿಂದ ಗ್ರಾಮದಲ್ಲಿ ಭೀತಿಯ ವಾತಾವರಣ ಸೃಷ್ಠಿಯಾಗಿದೆ. ಮಾದಿಗ ಜನಾಂಗದವರು ಭಯಭೀತರಾಗಿ ಜೀವಿಸುತ್ತಿದ್ದಾರೆ. ಕನಕಗಿರಿ ವಿಧಾನಸಭಾ ಕ್ಷೇತ್ರ ದಲಿತರಿಗಾಗಿ ಮೀಸಲು ಕ್ಷೇತವಾಗಿದೆ. ಕ್ಷೇತ್ರದ ಶಾಸಕರಾದ ಶಿವರಾಜ್ ತಂಗಡಗಿಯವರು ಜಿಲ್ಲಾಉಸ್ತುವಾರಿ ಸಚಿವರಾಗಿದ್ದಾರೆ. ಇವರು ಶಾಸಕರಾಗಿದ್ದಾಗಿನಿಂದಲೂ ಕಳೆದ ಆರು ವರ್ಷಗಳಿಂದ ಈ ಕ್ಷೇತ್ರದಲ್ಲಿ ದಲಿತರ ಮೇಲೆ ಅನೇಕ ಊರುಗಳಲ್ಲಿ ದೌರ್ಜನ್ಯಗಳು ನಡೆದರೂ ಉಸ್ತುವಾರಿ ಸಚಿವರು ಸಂಘರ್ಷಕ್ಕೊಳಗಾದ ಊರುಗಳಿಗೆ ಭೇಟಿ ನೀಡದೇ ದಲಿತರ ಪರ ನಿಲ್ಲದೇ ಸವರ್ಣೀಯರ ಪರ ವರ್ತಿಸುತ್ತಿರುವುದರಿಂದ ಕನಕಗಿರಿ ಪರಿಶಿಷ್ಠ ವರ್ಗಕ್ಕೆ ಮೀಸಲು ಕ್ಷೇತ್ರವಾಗಿದ್ದು, ಮೀಸಲಾತಿಯ ಅರ್ಥವನ್ನು ಕಳೆದುಕೊಂಡಿದೆ. ದಲಿತರಿಗೆ ನ್ಯಾಯಕೊಡಿಸುವಲ್ಲಿ ವಿಫಲರಾದ ತಂಗಡಗಿಯವರು ಕೂಡಲೇ ರಾಜೀನಾಮೆ ಕೊಡಬೇಕೆಂದು ಸಿ.ಪಿ.ಐ.ಎಂ.ಎಲ್. ಲಿಬರೇಷನ್ ರಾಜ್ಯ ಕಾರ್ಯದರ್ಶಿ ಭಾರದ್ವಾಜ್   ಒತ್ತಾಯಿಸಿದ್ದಾರೆ. 

ಸಚಿವರು ಈಗಲಾದರೂ ಮರಕುಂಬಿ ಗ್ರಾಮಕ್ಕೆ ಭೇಟಿ ನೀಡಿ ಎಲ್ಲಾ ವರ್ಗಗಳೊಂದಿಗೆ ಶಾಂತಿಸಭೆ ನಡೆಸಿ, ದಲಿತರಿಗೆ ಧೈರ್ಯ ತುಂಬಬೇಕು ಮತ್ತು ಊರಿನಲ್ಲಿ ಶಾಂತಿ ನೆಲೆಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು.  ಜಾಗತೀಕರಣದ ಯುಗದಲ್ಲಿಯೂ ಕೂಡಾ ಅಸ್ಪಸೃತೆ ಮತ್ತು ಸಾಂಘೀಕ ಅಸಮಾನತೆ ಮುಂದುವರೆದಿರುವುದು ದೇಶದ ಅಭಿವೃದ್ಧಿಗೆ ಮಾರಕವಾಗಿದೆ. ಸಚಿವರು ಕೂಡಲೇ ಮರಕುಂಬಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದಲ್ಲಿ ಶಾಂತಿ ನೆಲೆಸಲು ಕ್ರಮಗಳನ್ನು ಜರುಗಿಸಬೇಕು ಇಲ್ಲದಿದ್ದಲ್ಲಿ ಸಿ.ಪಿ.ಐ.ಎಂ.ಎಲ್. ಪಕ್ಷ ಪ್ರಗತಿಪರ ಸಂಘಟನೆಗಳೊಂದಿಗೆ ಕೂಡಿಕೊಂಡು ಉಗ್ರವಾದ ಹೋರಾಟವನ್ನು ಮಾಡುತ್ತದೆ ಎಂದು  ಎಚ್ಚರಿಸಿದೆ.

Advertisement

0 comments:

Post a Comment

 
Top