ಗಂಗಾವತಿ: ಕೊಪ್ಪಳ ಜಿಲ್ಲೆಯಾದ್ಯಂದ ಮರಳು ಮಾಫಿಯಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮರಳು ಕಳವು ಸಾಗಾಣಿಕೆಯನ್ನು ತಡೆದು,ಅಧಿಕಾರಿಗಳಿಗೆ ವಿಷಯ ತಿಳಿಸಲು ಮುಂದಾದ ಸಾರ್ವಜನಿಕರ ಮೇಲೆ ಮರಳು ಕಳ್ಳರು ದೌರ್ಜನ್ಯ ಮಾಡುತ್ತಿರುವ ಘಟನೆಗಳು ದಿನದಿಂದಿನಕ್ಕೆ ಹೆಚ್ಚಾಗುತ್ತಿವೆ. ವಿಷೇಶವಾಗಿ ಗಂಗಾವತಿ ತಾಲೂಕಿನ ನಂದಿಹಳ್ಳಿಯಿಂದ ಮರಳನ್ನು ಕಳ್ಳು ಸಾಗಾಣಿಕೆ ಮಾಡುತ್ತಿರುವ ಶಿವಮೂರ್ತಿ ಬರ್ಶಿ ಎಂಬವರು ತನ್ನ ನೂರಾರು ಬೆಂಬಲಿಗರಿಂದ ಮರಳು ಕಳ್ಳ ಸಾಗಾಣಿಕೆಯನ್ನು ಪ್ರಶಸ್ನಿಸಿದ ಸಾರ್ವಜನಿಕರ ಮೇಲೆ ಗೂಂಡಾಗಿರಿ ಮಾಡಿ, ಮಾಜಿ ಸಚಿವರೊಬ್ಬರ ಹೆಸರೇಳಿಕೊಂಡು ದೌರ್ಜಜನ್ಯ ಮಾಡುತ್ತಿದ್ದಾರೆ ಎಂದು ಸಿರಿಗನ್ನಡ ಸಂಘಟನೆಯ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನಗೌಡ ಹೊಸಮನಿ ಆರೋಪಿಸಿದ್ದಾರೆ.
ಈ ಕುರಿತು ಹಲವಾರು ಬಾರಿ ಹೊಬಳಿ ಮತ್ತು ತಾಲೂಕಾ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಕಾನೂನು ಕ್ರಮ ಕೈಗೊಳ್ಳದೇ ಮೌನವಾಗಿದ್ದು, ಮರಳು ಕಳ್ಳರ ಬೆಂಬಲಕ್ಕೆ ನಿಂತಂತ್ತೆ ವರ್ತಿಸುತ್ತಿದ್ದಾರೆ. ಅಲ್ಲದೇ ಹೊಬಳಿ ಹಾಗೂ ತಾಲೂಕಾ ಮಟ್ಟದಲ್ಲಿರುವ ಕೆಲ ಅಧಿಕಾರಿಗಳು ಮರಳು ಕಳ್ಳ ಸಾಗಾಣಿಕೆಯ ಅಧಿಕೃತ ಮಾಹಿತಿ ಸಿಕ್ಕರು ನಮಗೆ ಸಂಬಂಧ ಇಲ್ಲಾ ಎಂಬಂತೆ ಸುಮ್ಮನಿರುವುದು ಮರಳು ಮಾಫಿಯಾಕ್ಕೆ ಪುಷ್ಟಿನೀಡಿದೆ. ಇನ್ನು ಮರಳು ಕಳವು ಮಾಡಿ ತಿಮಿಂಗಲಂತೆ ಬೆಳೆದ ಶಿವಮೂರ್ತಿ ಬರ್ಶಿ ನಾನು ಎಲ್ಲಾ ಅಧಿಕಾರಿಗಳಿಗೆ ಎಲ್ಲಾ ಹಂತಗಳಲ್ಲಿ ಏನೆನು ಕೊಡಬೇಕೋ ಅದೆಲ್ಲವನ್ನು ಕೊಟ್ಟು ಸುಮ್ಮನಿರಿಸಿದ್ದೇನೆ ನನ್ನನ್ನು ಯಾರು ಏನು ಮಾಡಿಕೊಳ್ಳುವುದಕ್ಕಾಗಲ್ಲ ಎಂದು ಸಾರ್ವಜನಿಕರ ಮೇಲೆ ದೌರ್ಜನ್ಯ ಮಾಡುತ್ತಾ ಬೀಗುತ್ತಿದ್ದಾನೆ. ಇದರಿಂದಾಗಿ ಜಿಲ್ಲೆಯಲ್ಲಿರುವ ಅನೇಕ ನಿಷ್ಠಾವಂತ ಅಧಿಕಾರಿಗಳಿಗೆ ಕೆಟ್ಟ ಹೆಸರು ಬರುವಂತಾಗಿದೆ. ಈಗಾಲಾದರು ಜಿಲ್ಲೆಗೆ ನೂತನವಾಗಿ ಬರುತ್ತಿರುವ ಜಿಲ್ಲಾಧಿಕಾರಿಗಳು ಹಾಗೂ ನಿಷ್ಠೆಗೆ ಹೆಸರುವಾಸಿಯಾಗಿರುವ ಸಹಾಯಕ ಆಯುಕ್ತರು ಹಾಗೂ ಗಂಗಾವತಿಯ ಲೋಕೋಪಯೋಗಿ ಇಲಾಖೆಯ ವೆಂಕಟುರಾಜುರವರು ಮರಳು ಮಾಫಿಯಾದಲ್ಲಿ ಶ್ಯಾಮೀಲಾಗಿರುವ ಕೆಲ ಅಧಿಕಾರಿಗಳ ವಿರುದ್ಧ ಮತ್ತು ಸಾರ್ವಜನಿಕರ ಮೇಲೆ ದೌರ್ಜನ್ಯ ಮಾಡುತಿರುವ ಮರಳು ದಂಧೆ ಕೋರರ ಮೇಲೆ ಸೂಕ್ತ ಕಾನೂಕ್ರಮ ಜರುಗಿಸಿ, ಸಾರ್ವಜನಿಕರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಸಿರಿಗನ್ನಡ ಸಂಘಟನೆಯ ಕಾರ್ಯಕರ್ತರು ಆಗ್ರಹಿಸಿದ್ದಾರೆ.
0 comments:
Post a Comment