PLEASE LOGIN TO KANNADANET.COM FOR REGULAR NEWS-UPDATES

 ಕನ್ನಡ ಸಾಹಿತ್ಯ ಅಕಾಡೆಮಿಯಿಂದ ಪ್ರಸಕ್ತ ಸಾಲಿನಲ್ಲಿ 5 ಜನರಿಗೆ ತಲಾ ರೂ.1 ಲಕ್ಷದಂತೆ ಫೆಲೋಶಿಪ್ ನೀಡಲು ಉದ್ದೇಶಿಸಿದ್ದು, ಫೆಲೋಶಿಪ್‍ಗಾಗಿ ಅರ್ಹತೆಯುಳ್ಳವರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. 
ಅರ್ಜಿ ಸಲ್ಲಿಸುವವರು ಯಾವುದೇ ಪದವಿ ಪಡೆದಿರಬೇಕು. ನಿಗದಿತ ಅರ್ಜಿಯನ್ನು ಸ್ವವಿಳಾಸವಿರುವ ಅಂಚೆ ಲಕೋಟೆ ಇಟ್ಟು ಅಕಾಡೆಮಿಯಿಂದ ಪಡೆಯಬಹುದು. ನಿರ್ದಿಷ್ಟ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದವರು, ಪದವಿ ಪಡೆಯದಿದ್ದರೂ ಅರ್ಜಿ ಹಾಕಬಹುದು. 20 ರಿಂದ 50 ವರ್ಷದವರು ಅರ್ಜಿ ಸಲ್ಲಿಸಬಹುದಾಗಿದೆ. (ಸಂಬಂಧಿಸಿದ ಎಸ್.ಎಸ್.ಎಲ್.ಸಿ. ದೃಢೀಕೃತ ಅಂಕಪಟ್ಟಿಯನ್ನು ಲಗತ್ತಿಸಿರಬೇಕು).  ಕನ್ನಡದಲ್ಲಿ ವೈದ್ಯ ಸಾಹಿತ್ಯ, ವಿಜ್ಞಾನ ಸಾಹಿತ್ಯ-ಸಮಸ್ಯೆಗಳು ಹಾಗೂ ಸವಾಲುಗಳು, ಶಿಕ್ಷಣ ಮಾಧ್ಯಮವಾಗಿ ಕನ್ನಡ-ಸಮಸ್ಯೆಗಳು, ಸವಾಲುಗಳು ಹಾಗೂ ಪರಿಹಾರೋಪಾಯಗಳು, ಕನ್ನಡ ಸಾಹಿತ್ಯದಲ್ಲಿ ಜಾಗತೀಕರಣದ ಸ್ವರೂಪ, ಜ್ಞಾನಯುಗದ ಒಳಮರ್ಮಗಳು ಮತ್ತು ಕನ್ನಡ ಸಮುದಾಯಗಳ ಮೇಲಿನ ಪ್ರಭಾವಗಳು, ಸ್ಥಳೀಯ ಜ್ಞಾನೋತ್ಪಾದನೆಯ ಹೊಸ ಮಾರ್ಗಗಳು ಮತ್ತು ಕಾವ್ಯಮೀಮಾಂಸೆ-ಒಂದು ಅನ್ವೇಷಣೆ, ಬೆಂಗಳೂರಿನ ಕೆ.ಆರ್.ಮಾರುಕಟ್ಟೆಯ ಸಾಮಾಜಿಕ ಸಂಸ್ಕøತಿಯ ಅಧ್ಯಯನ, ಸ್ಲಮ್‍ಗಳಲ್ಲಿ ಬದುಕುವ ಮಹಿಳೆಯರ ಅಧ್ಯಯನ, ಕರ್ನಾಟಕದಲ್ಲಿ ಸಮುದಾಯನಿಷ್ಟ ಆರೋಗ್ಯ ಪ್ರಯೋಗಗಳು, ಸ್ಥಳೀಯ ಬೇಸಾಯ ಪರಂಪರೆಗಳ ಅಧ್ಯಯನ, ಸ್ಥಳೀಯ ಪಶುಸಂಗೋಪನೆ ವಿಧಾನಗಳ ಅಧ್ಯಯನ, ಮುಸ್ಲಿಂ ಸಮುದಾಯದೊಳಗಿನ ಜನಪದೀಯ ನಂಬಿಕೆಗಳು, ನವ ಅಧ್ಯಾತ್ಮಿಕತೆಯ ಸಾಂಸ್ಕøತಿಕ ಅಧ್ಯಯನ, ಕನ್ನಡ ಇ-ಪತ್ರಿಕೆಗಳ ಅಧ್ಯಯನ, ಕರ್ನಾಟಕದಲ್ಲಿ ಕ್ರೈಸ್ತ ಸಮುದಾಯದ ಮಹಿಳೆಯರ ಆಚರಣೆಗಳು.  ಈ ವಿಷಯಗಳ ಪೈಕಿ ಯಾವುದಾದರೂ ಒಂದು ವಿಷಯವನ್ನು ಆಯ್ಕೆ ಮಾಡಿಕೊಂಡು ಸಾರಲೇಖವನ್ನು 4-5 ಪುಟಗಳವರೆಗೆ ಸಿದ್ಧಪಡಿಸಿ ಆಗಸ್ಟ್ 15 ರೊಳಗಾಗಿ ಅಕಾಡೆಮಿಗೆ ಸಲ್ಲಿಸಬಹುದಾಗಿದೆ. ಪಿ.ಎಚ್.ಡಿ. ಅಥವಾ ಎಂ.ಫಿಲ್.ಗೆ ಸಲ್ಲಿಸಿದ ಸಂಶೋಧನಾ ವಿಷಯವಾಗಿರಬಾರದು.
  ಹೆಚ್ಚಿನ ಮಾಹಿತಿಗಾಗಿ ಅಕಾಡೆಮಿಯ ದೂರವಾಣಿ ಸಂಖ್ಯೆ: 080-22211730/22106460 ಸಂಪರ್ಕಿಸಬಹುದಾಗಿದೆ 

Advertisement

0 comments:

Post a Comment

 
Top