ಕನ್ನಡ ಸಾಹಿತ್ಯ ಅಕಾಡೆಮಿಯಿಂದ ಪ್ರಸಕ್ತ ಸಾಲಿನಲ್ಲಿ ಗಿರಿಜನ ಉಪಯೋಜನೆಯಡಿಯಲ್ಲಿ 4 ಜನರಿಗೆ ತಲಾ ರೂ.1 ಲಕ್ಷದಂತೆ ಫೆಲೋಶಿಪ್ ನೀಡಲು ಉದ್ದೇಶಿಸಿದ್ದು, ಫೆಲೋಶಿಪ್‍ಗಾಗಿ ಅರ್ಹತೆಯುಳ್ಳವರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವವರು ಪರಿಶಿಷ್ಟ ಪಂಗಡ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದಾಗಿದ್ದು (ಸಂಬಂಧಿಸಿದ ಜಾತಿ ಪ್ರಮಾಣ ಪತ್ರದ ದೃಢೀಕೃತ ಪ್ರತಿಯನ್ನು ಲಗತ್ತಿಸಬೇಕು) ಯಾವುದೇ ಪದವಿ ಪಡೆದಿರಬೇಕು. ನಿಗದಿತ ಅರ್ಜಿಯನ್ನು ಸ್ವವಿಳಾಸವಿರುವ ಅಂಚೆ ಲಕೋಟೆ ಇಟ್ಟು ಅಕಾಡೆಮಿಯಿಂದ ಪಡೆಯಬಹುದು. ನಿರ್ದಿಷ್ಟ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದವರು, ಪದವಿ ಪಡೆಯದಿದ್ದರೂ ಅರ್ಜಿ ಹಾಕಬಹುದು. 20 ರಿಂದ 50 ವರ್ಷದವರು ಅರ್ಜಿ ಸಲ್ಲಿಸಬಹುದಾಗಿದೆ. ಗಿರಿಜನರ ವೈದ್ಯಪದ್ಧತಿಗಳು, ಗಿರಿಜನರ ಆಚರಣೆಗಳ ಸಾಂಸ್ಕøತಿಕ ನೆಲೆ, ಗಿರಿಜನರ ಪರಿಸರದ ವೈವಿಧ್ಯತೆ-ಸಾಂಸ್ಕøತಿಕ ಅಧ್ಯಯನ, ಪ್ರಾಣಿಗಳ ವರ್ತನೆಯ ಅಧ್ಯಯನ-ಗಿರಿಜನರ ಸಾಂಸ್ಕøತಿಕ ನೆಲೆಗಳಲ್ಲಿ, ಕುವೆಂಪು ಅವರ ಸಾಹಿತ್ಯ ಮತ್ತು ಗಿರಿಜನ ಸಂಸ್ಕøತಿ ವೈವಿಧ್ಯ, ಗಿರಿಜನ ಮಹಿಳೆಯರ ಸಾಂಸ್ಕøತಿಕ ಕಥನಗಳ ಅಧ್ಯಯನ, ಈ ವಿಷಯಗಳ ಪೈಕಿ ಯಾವುದಾದರೂ ಒಂದು ವಿಷಯವನ್ನು ಆಯ್ಕೆ ಮಾಡಿಕೊಂಡು ಸಾರಲೇಖವನ್ನು 4-5 ಪುಟಗಳವರೆಗೆ ಸಿದ್ಧಪಡಿಸಿ ಆಗಸ್ಟ್ 15 ರೊಳಗಾಗಿ ಅಕಾಡೆಮಿಗೆ ಸಲ್ಲಿಸಬಹುದಾಗಿದೆ. ಪಿ.ಎಚ್.ಡಿ. ಅಥವಾ ಎಂ.ಫಿಲ್.ಗೆ ಸಲ್ಲಿಸಿದ ಸಂಶೋಧನಾ ವಿಷಯವಾಗಿರಬಾರದು.
can i have some documents about the above subjects?
ReplyDelete