ಕೊಪ್ಪಳ ನಗರದ ಸರಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಮೂಲಬೂತ ಸೌಕರ್ಯಗಳಿಂದ ವಂಚಿತರಾಗಿರುವ ವಿದ್ಯಾರ್ಥಿಗಳಿಗೆ ಅವಶ್ಯವಿರುವ ಶುದ್ದ ಕುಡಿಯುವ ನೀರು, ಶೌಚಾಲಯ, ಕೊಠಡಿಗಳು, ಹಾಗೂ ಹೆಚ್ಚುವರಿ ಉಪನ್ಯಾಸಕರು ಇಲ್ಲದಿರುವುದನ್ನು ಖಂಡಿಸಿ ಈ ಹಿಂದೆ ದಿನಾಂಕ ೧೭-೦೭-೨೦೧೪ ರಂದು ಗುರುವಾರದಂದು ಎಬಿವಿಪಿ ಹೋರಾಟವನ್ನು ಮಾಡಿತ್ತು. ಆದರೆ ಸಂಬಂದಪಟ್ಟ ಅಧಿಕಾರಿಗಳು ಒಂದುವಾರದ ಸಮಯ ಕೊಟ್ಟರು ಸ್ಥಳ ವೀಕ್ಷಣೆಗಾಗಿ ಬರದ ಕಾರಣ ಆಕ್ರೋಶಗೊಂಡ ವಿದ್ಯಾರ್ಥಿಗಳು ರಸ್ತೆಗಿಳಿದು ಅಶೋಕ ವೃತ್ತದಲ್ಲಿ ಸುಮಾರು ೨೦ ನಿಮಿಷಗಳ ಕಾಲ ರಸ್ತೆತಡೆ ಮಾಡುತ್ತಿದ್ದಾಗ ಕಾರ್ಯಕರ್ತರು ಮತ್ತು ಪೋಲಿಸರ ಮದ್ಯೆ ಮಾತಿನ ಚಕಮುಖಿ ನಡೆತು ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಪೋಲಿಸರ ವಿರುದ್ದ ಘೋಷಣೆ ಕೂಗಿದರು. ನಂತರ ತಹಶಿಲ್ದಾರ ಕಛೇರಿ ಎದುರುಗಡೆ ಧರಣಿ ಕೂರಲಾಯಿತು. ಸ್ಥಳಕ್ಕೆ ಡಿಡಿಪಿಐ ಅಧಿಕಾರಿಗಳು ಮನವಿ ಸ್ವೀಕರಿಸುವವರೆಗೂ ಧರಣಿ ಕೂರಲಾ
ಯಿತು.
ಬೇಡಿಕೆಗಳು: ೧] ಕೊಠಡಿಗಳ ವ್ಯವಸ್ಥೆ ಮಾಡಬೇಕು.
೨] ಶುದ್ದ ಕುಡಿಯುವ ನೀರಿನ ವ್ಯಸಸ್ಥೆ ಮಾಡಬೇಕು.
೩] ಹೆಚ್ಚುವರಿ ಉಪನ್ಯಾಸಕರ ನೇಮಕ ಮಾಡಬೇಕು.
೪] ಶೌಚಾಲಯ ವ್ಯವಸ್ಥೆ ಮಾಡಬೇಕು.
೫] ಗ್ರಂಥಾಲಯ ವ್ಯವಸ್ಥೆ ಮಾಡಬೇಕು.
ಈ ಪ್ರತಿಭಟನೆಯ ನೇತೃತ್ವವನ್ನು ಭಾಗಣ್ಣ ಎಸ್. ಹೆಚ್ ನಗರ ಸಂಘಟನೆ ಕಾರ್ಯದರ್ಶಿಗಳು, ರಾಜ್ಯ ಸಹ ಕಾರ್ಯದರ್ಶಿ ರಾಕೇಶ ಪಾನಘಂಟಿ, ಜಿಲ್ಲಾ ಸಂಚಾಲಕ ಮೌನೇಶ ಕಮ್ಮಾರ ವಹಿಸಿದ್ದರು. ಈ ಸಂದರ್ಬದಲ್ಲಿ ಲಿಂಗರಾಜ ಶಿರಿಗೇರಿ, ಮಂಜುನಾಥ ಮಳ್ಳಿ, ದೀಪಕ ಕುಮಾರ, ಮಂಜುನಾಥ ಬದಿ, ದೊಡ್ಡ ಬಸುವ, ಬಸವರಾಜ, ಜ್ಞಾನೇಶ, ಮಹೇಂದ್ರ, ನಾರಾಯಣ, ನಾಗರಾಜ ಮುಂತಾದವರು ಉಪಸ್ಥಿತರಿದ್ದರು.
0 comments:
Post a Comment