ಮಹಿಳೆಯರ ಸುರಕ್ಷತೆಗಾಗಿ ಆಗ್ರಹಿಸಿ ವಿವಿಧ ಮಹಿಳಾ ಸಂಘಟನೆಗಳಿಂದ ರಸ್ತೆ ತಡೆ, ಪ್ರತಿಭಟನೆ.
ಕೊಪ್ಪಳ ಜು:-೨೫ ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲದಂತಾಗಿದೆ, ಹಗಲು ಹೊತ್ತಿನಲ್ಲು ಸಹ ಮಹಿಳೆಯರು ಬಾಲಕಿಯರು ಓಡಾಡಲಾಗದ ಪರಸ್ಥತಿ ನಿರ್ಮಣವಾಗಿದೆ ಕಾರಣ ಮಹಿಳೆಯರ ಸುರಕ್ಷತೆಗಾಗಿ ವಿವಿಧ ಕಾನೂನು ಕ್ರಮಗಳನ್ನು ಕೈಗೊಳ್ಳಲು ಆಗ್ರಹಿಸಿ ಕೊಪ್ಪಳದ ವಿವಿಧ ಪ್ರಗತಿಪರ ಮಹಿಳಾ ಸಂಘಟನೆಗಳಿಂದ ಶುಕ್ರವಾರ ನಗರದ ಅಶೋಕ ವೃತ್ತದಲ್ಲಿ ಕೆಲಕಾಲ ರಸ್ತೆತಡೆ ನಡೆಸಿ ಪ್ರತಿಭಟನೆ ಅಮ್ಮಿಕೊಂಡು ತಹಶಿಲ್ದಾರರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಅರ್ಪಿಸಿದರು.
ಇತ್ತೀಚೆಗೆ ಮಹಿಳೆಯರ ಮೇಲಿನ ಅತ್ಯಾಚಾರ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿದ್ದು ೨೦೧೩ರಲ್ಲಿ ೧೦೩೦ ಅತ್ಯಾಚಾರ ಪ್ರಕರಣಗಳು ೧೮೩೬ ಅಪಹರಣ ಪ್ರಕರಣಗಳು ಪ್ರಸಕ್ತ ೨೦೧೪ರಲ್ಲಿ ಜನವರಿಯಿಂದ ಜೂನ ರವರಗೆ ೫೨೫ ಅತ್ಯಾಚಾರ ಪ್ರಕರಣಗಳು ೨೩೫೭ ಲೈಂಗಿಕ ದೌರ್ಜನ್ಯ ಪ್ರಕರಣಗಳು ೧೫೨೨ ವರದಕ್ಷಣೆ ಪ್ರಕರಣಗಳು ದಾಖಲಾಗಿರುವದು ನೋಡಿದರೆ ಮಹಿಳೆಯರ ಮೇಲಿನ ದೌರ್ಜನ್ಯ ಅನ್ಯಾಯವು ಎಷ್ಟು ಪ್ರಮಾಣದಲ್ಲಿ ನಡೆಯುತ್ತಿದೆ ಎಂದು ವೇದ್ಯವಾಗುತ್ತದೆ. ಇತ್ತೀಚೆಗೆ ಬಳ್ಳಾರಿ ಜಿಲ್ಲೆಯ ಕೂಡ್ಲಗಿ ಲಾಡ್ಜನಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಪ್ರಕರಣ, ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮುಷ್ಠೂರಿನ ಡಿಂಗ್ಲಿ ಕ್ಯಾಂಪಿನಲ್ಲಿ ಎರಡು ಹುಡಿಗಿಯರ ಅತ್ಯಾಚಾರ ಪ್ರಕರಣ ಕೊಪ್ಪಳದ ಭಾಗ್ಯನಗರದಲ್ಲಿ ತಂದೆಯಿಂದಲೆ ಮಗಳ ಮೇಲೆ ಅತ್ಯಾಚಾರ ಉಡುಪಿಯಲ್ಲಿ ಕಾಲೇಜ್ ಹುಡಗಿಯನ್ನು ಅಪಹರಸಿ ಅತ್ಯಾಚಾರ ವೆಸಗಿ ಕೊಲೆಮಾಡಿ ಊರಿನ ಹೊರವಲಯದಲ್ಲಿ ಬಿಸಾಕಿ ಹೊಗಲಾಗಿದೆ, ಔರಾದನಲ್ಲಿ ೧೮ವರ್ಷದ ಯುವತಿಯ ಮೇಲೆ ಅತ್ಯಾಚಾರ ದಂಥಹ ಪ್ರಕರಣಗಳನ್ನು ಗಮನಿಸಿದರೆ ಮಹಿಳೆಯರು ದೈರ್ಯವಾಗಿ ಹೊರಬರುವದಕ್ಕು ಯೋಚಿಸುವ ಸಂದರ್ಭ ವದಗಿ ಬಂದಿರುವದು ವಿಪರ್ಯಾಸವೆ ಸರಿ.
ಇತ್ತೀಚೆಗೆ ಯುವಕರು ಅಂತರರ್ಜಾಲಗಳ ಮೂಲಕ ಅಶ್ಲೀಲ ಚಿತ್ರ ವೀಕ್ಷಣೆಯಿಂದ ಸಮಾಜದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ ಆದಕಾರಣ ಸೈಬರ ಕ್ರೈಂನ ಅಪರಾಧಗಳಿಗೆ ಕಠಿಣ ಶೀಕ್ಷೆ ವಿದಿಸಬೇಕು, ಅತ್ಯಾಚಾರ ಪ್ರಕರಣಗಳು ನಡೆದ ತಕ್ಷಣವೇ ಕ್ರಮ ಕೈಗೊಳ್ಳಲು ಅತ್ಯಾಧುನಿಕ ವಿಧಿ-ವಿಜ್ಞಾನ ಕೇಂದ್ರಗಳನ್ನು ಪ್ರತಿ ಜಿಲ್ಲೆಗೆ ಒಂದರಂತೆ ಸ್ಥಾಪಿಸಬೇಕು ಅತ್ಯಾಚಾರ ಪ್ರಕರಣಗಳಲ್ಲಿ ಅಪರಾಧ ಎಸಗಿದವರಿಗೆ ಶಿಕ್ಷೆಗೆ ಗುರಿಪಡಿಸಲು ವಿಶೇಷ ತ್ವರಿತ ನ್ಯಾಯಲಯಗಳನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಇಷ್ಟೆಲ್ಲ ಘಟನೆಗಳು ನಡೆದರೂ ಸರಕಾರ ಸರಿಯಾದ ತ್ವರಿತಗತಿಯ ಕಾನೂನು ಕ್ರಮಗಳನ್ನು ಕೈಗೊಳ್ಳದೆ ಇರುವದು ಖಂಡನೀಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇಂದು ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಕೆಲ ಕಾಲ ಪೋಲಿಸರೊಂದಿಗೆ ಮಹಿಳೆಯರು ಮಾತಿನ ಚಕಮುಖಿ ನಡೆಸಿದರು.
ಇಂದು ನಡೆದ ಪ್ರತಿಭಟನೆಯಲ್ಲಿ ಹೇಮಲತಾ ನಾಯಕ್, ಡಾ|| ರಾಧ ಕುಲಕರ್ಣಿ. ವಾಣಿಶ್ರೀ ಹಿರೇಮಠ, ಶೋಭಾ ಅಗಡಿ, ಅನುರಾಧ ಬಿಜಕಲ್, ನಿರ್ಮಾಲ ಬಳ್ಳೂಳ್ಳಿ, ರತ್ನಾ ಪಾಟೀಲ್, ಶಾಮಲಾ ಕೋನಾಪುರ, ರಮಾ ಉಡಪಿ, ಶಾಂತಕ್ಕ ಹಿರೇಮಠ, ಸುಬಾಂಗಿ ಎಸ್.ಎ. ಸುಮಾ ಸರೋಜಾ ತಪಾಡಿಯಾ, ಕವಿತಾ ಶೆಟ್ಟರ್, ವಿಜಯಾ ಕೊರ್ಲಹಳ್ಳಿ, ಸುನಂದ ಅಳವಂಡಿ, ಸುಧಾ ಶೆಟ್ಟರ್, ಉಮಾ ಬಂಗಾರಶೆಟ್ಟರ್, ತ್ರೀಶಾಲ ಪಾಟೀಲ್, ಶೋಭಾ ಉಕ್ಕಲಿಮಠ, ಕಿಶೋರಿ ಬಿ, ಶಾರದಾ ಪಾನಘಂಟಿ, ಶಶಿಕಲಾ ಸಜ್ಜನ್, ವಿಧ್ಯಾ ಉಕ್ಕಲಿಮಠ, ಸುಮಾ ಹೇಜೀಬ್, ಗಿರಿಜಮ್ಮ ಬಂಡಾರಿ. ವಿ.ಕೆ. ಹಿರೇಮಠ, ವಿವಿಧ ಸಂಘಟನೆಗಳಾದ ಕದಳಿ ಮಹಿಳಾ ವೇದಿಕೆ, ಗೌರಿಶಂಕರ ಮಹಿಳಾ ಮಂಡಳ, ಇನ್ನರವ್ಹೀಲ್ ಕ್ಲಬ್ - ೩೧೬, ವೀರಮಹೇಶ್ವರಿ ಮಹಿಳಾ ಮಂಡಳ. ಪ್ರಗತಿ ಮಹಿಳಾ ಮಂಡಳ, ಅಕ್ಕಮಾಹದೇವಿ ಮಹಿಳಾ ಮಂಡಳ, ಸೇರಿದಂತೆ ಇನ್ನಿತರ ಸಂಘಟನೆಗಳು ಪಾಲ್ಗೋಂಡಿದ್ದವು
0 comments:
Post a Comment