PLEASE LOGIN TO KANNADANET.COM FOR REGULAR NEWS-UPDATES


ಸಿಂಧನೂರು ತಾಲೂಕಿನ ಹುಡಾ ಗ್ರಾಮದಲ್ಲಿ ಲೋಕಸಭಾ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಮಂಜೂರು ಮಾಡಿದ್ದ ರೂ.: ೦೬.೦೦ ಲಕ್ಷ ಅನುದಾನದಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡ ಬಯಲು ರಂಗ ಮಂದಿರವನ್ನು   ಮಾಜಿ ಲೋಕಸಭಾ ಸದಸ್ಯ ಶಿವರಾಮಗೌಡ ಉದ್ಘಾಟಿಸಿ  ಗ್ರಾಮಸ್ಥರು ಇದರ ಸದುಪಯೋಗ ಪಡಿಸಿಕೊಳ್ಳಲು ಕರೆ ನೀಡಿದರು.
       ಅತೀ ಹೆಚ್ಚು ಕಲಾವಿದರನ್ನು ಹೊಂದಿರುವ ಹುಡಾ ಗ್ರಾಮಸ್ಥರ ಕಲಾ ಪ್ರದರ್ಶನಕ್ಕೆ ಒಂದು ವೇದಿಕೆಯ ಅವಶ್ಯಕವಿದ್ದುದನ್ನು ಮನಗಂಡು ಅನುದಾನ ನೀಡಿದ್ದು, ಸದರಿ ಬಯಲು ರಂಗ ಮಂದಿರವು ಸುಸಜ್ಜಿತವಾಗಿ ನಿರ್ಮಾಣಗೊಂಡಿದ್ದು, ಅದರ ನಿರ್ವಹಣೆಯು ಗ್ರಾಮಸ್ಥರ ಜವಾಬ್ದಾರಿಯಾಗಿದ್ದು, ಉದ್ಘಾಟನೆಯ ದಿನದಂದೇ ನಾಟಕ ಪ್ರದರ್ಶನ ಹಮ್ಮಿಕೊಂಡಿರುವುದು ಉತ್ತಮ ಬೆಳವಣಿಗೆಯಾಗಿದ್ದು, ನನ್ನ ಅವಧಿಯಲ್ಲಿ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಅನುದಾನವನ್ನು ಕಲಾವಿದರ ಕಲೆ ಪ್ರದರ್ಶನಕ್ಕೆ ಸದುಪಯೋಗಪಡಿಸಿಕೊಂಡಿದ್ದು ಸಂತಸ ತಂದಿದೆ.
       ಸ್ಥಳೀಯ ಸಮಸ್ಯೆಯಾಗಿದ್ದ ಸಾವರಿನ್ ಡಿಸ್ಟಿಲರಿ ಕಾರ್ಖಾನೆಯ ದುಷ್ಪರಿಣಾಮಗಳ ಕುರಿತು ಸಂಸತ್ತಿನಲ್ಲಿ ಪ್ರಸ್ತಾವಿಸಿ, ಸಂಬಂಧಿಸಿದ ಸಚಿವರಿಗೆ ಮನಮುಟ್ಟುವಂತೆ ಸಮಸ್ಯೆಯನ್ನು ವಿವರಿಸಿ ಆ ಕಾರ್ಖಾನೆಯನ್ನು ಮುಚ್ಚಲಾಗಿದೆ. ಅದೇ ರೀತಿ, ಸಿಂಧನೂರು ನಗರದಲ್ಲಿರುವ ಮುನಿರಾಬಾದ-ಮೆಹಬೂಬನಗರ ರೈಲ್ವೆ ನಿರ್ಮಾಣ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿಗಳ ಕಚೇರಿಯನ್ನು ರಾಜ್ಯ ಸರ್ಕಾರವು ಗದಗ-ವಾಡಿ ರೈಲ್ವೆ ನಿರ್ಮಾಣ ಯೋಜನೆಗಾಗಿ ಯಲಬುರ್ಗಾ ನಗರಕ್ಕೆ ಸ್ಥಳಾಂತರಗೊಳಿಸಿತ್ತು, ನಾನು ಸರ್ಕಾರದ ಮೇಲೆ ಒತ್ತಡ ಹೇರಿ ಈ ಕಚೇರಿಯನ್ನು ಸಿಂಧನೂರು ನಗರದಲ್ಲಿಯೇ ಮುಂದುವರೆಯುವಂತೆ ಹಾಗೂ ಗದಗ-ವಾಡಿ ರೈಲ್ವೆ ಯೋಜನೆಯನ್ನು ಕೊಪ್ಪಳದ ಸಹಾಯಕ ಆಯುಕ್ತರು ಕಾರ್ಯಗತಗೊಳಿಸುವಂತೆ ಮಾಡಿದ್ದೇನೆ. ಜನರ ಸೇವೆಗೆ ನಾನು ಸದಾ ಸಿದ್ಧ ಎಂದು ಇದೇ ಸಂದರ್ಭದಲ್ಲಿ ಹೇಳಿದರು.

       ಆತ್ಮೀಯ ಸನ್ಮಾನ : ಇದೇ ವೇಳೆ ಗ್ರಾಮಸ್ಥರು ಮಾಜಿ ಸಂಸದರನ್ನು  ಆತ್ಮೀಯವಾಗಿ ಸನ್ಮಾನಸಿದರು. ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಪರಿಷತ್ ಸದಸ್ಯರಾದ  ಶಿವಬಸನಗೌಡ, ಮಾಜಿ ಶಾಸಕರಾದ   ವೆಂಕಟರಾವ್ ನಾಡಗೌಡ, ಬಿಜೆಪಿ ಮುಖಂಡರಾದ   ರಾಮಾನಾಯ್ಕ ಗಂಗಾವತಿ,   ಶಿವನಗೌಡ ಗೊರೇಬಾಳ,   ದೊಡ್ಡಬಸವರಾಜ,   ಕೆ. ಕರಿಯಪ್ಪ ಸೇರಿದಂತೆ ಇತರರಿದ್ದರು.

Advertisement

0 comments:

Post a Comment

 
Top