ಹೊಸದಿಲ್ಲಿ, ಜು.10: 2014-15ನೆ ಸಾಲಿನ ಕೇಂದ್ರ ಬಜೆಟ್‌ನ್ನು ಇಂದು ಕೇಂದ್ರ ಹಣಕಾಸು ಸಚಿವ ಸಚಿವ ಅರುಣ್ ಜೇಟ್ಲಿ ಮಂಡನೆ ಮಾಡಿದರು. ಸಬ್ ಕಾ ಸಾತ್... ಸಬ್‌ಕಾ ವಿಕಾಸ್ ಎಂಬ ಮಂತ್ರ ಘೋಷಣೆಯ ಮೂಲಕ ಬಜೆಟ್ ಮಂಡನೆ ಆರಂಭಿಸಿದರು.
ಬಜೆಟ್‌ನ ಮುಖ್ಯಾಂಶಗಳು...
* ಹಣದುಬ್ಬರ ಇಳಿಕೆಗೆ ಮೊದಲ ಆದ್ಯತೆ
ವಿಶ್ವದ ಆರ್ಥಿಕ ಕುಸಿತವೇ ದೇಶದ ಆರ್ಥಿಕ ಕುಸಿತಕ್ಕೆ ಕಾರಣ
* ಕಪ್ಪು ಹಣ ನಿಯಂತ್ರಿಸಲು ಕಠಿಣ ಕ್ರಮ
* ಹೊಸ ಯೂರಿಯಾ ನೀತಿ ಜಾರಿಗೆ
* ಇಂಧನ, ಆಹಾರದಲ್ಲಿ ಸಬ್ಸಿಡಿ ಕಡಿತ
* ಹೊಸ ಯೂರಿಯಾ ನೀತಿ ಜಾರಿ ಗೊಬ್ಬರ ಬೆಲೆ ಹೆಚ್ಚಳ ಸಾಧ್ಯತೆ
* ತೆರಿಗೆ ವ್ಯಾಜ್ಯಗಳ ಅಧ್ಯಯನಕ್ಕೆ ಹೊಸ ಸಮಿತಿ ರಚನೆ
* ತೈಲ ಎಲ್‌ಪಿಜಿ ಸಬ್ಸಡಿ ಸುಧಾರಣೆ
* ದೇಶಾದ್ಯಂತ 100 ಸ್ಮಾರ್ಟ್ ಸಿಟಿಗಳ ನಿರ್ಮಾಣಕ್ಕೆ ಒತ್ತು
* ಟೂರಿಸಂಗೆ ಇ- ವಿಸಾ ಯೋಜನೆ ಜಾರಿ
* ಹೂಡಿಕೆ ಸ್ನೇಹಿ ತೆರಿಗೆ ಪದ್ಧತಿ ಜಾರಿಗೆ ಸರಕಾರ ಬದ್ಧ
* ಬಡತನ ನಿರ್ಮೂಲನೆಗೆ ನೂತನ ಯೋಜನೆ ಜಾರಿ
* ವಿತ್ತೀಯ ಕೊರತೆಯನ್ನು 4.1 ರ ಇಳಿಕೆಗೆ ಕ್ರಮ
*. ವೆಚ್ಚ ನಿರ್ವಹಣಾ ಆಯೋಗ ಸ್ಥಾಪನೆಗೆ ನಿರ್ಧಾರ
* ವಿದೇಶಿ ನೇರ ಬಂಡವಾಳ ಹೂಡಿಕೆಗೆ ಉತ್ತೇಜನಕ್ಕೆ ಕ್ರಮ
* ನಿರ್ದಿಷ್ಟ ಕ್ಷೇತ್ರಗಳಲ್ಲಿ ವಿದೇಶಿ ಹೂಡಿಕೆ
* ರಕ್ಷಣಾ ಕ್ಷೇತ್ರದಲ್ಲಿ ಶೇ.49 ರಷ್ಟು ವಿದೇಶಿ ಬಂಡವಾಳ
* ವಿಮಾ ಕ್ಷೇತ್ರದಲ್ಲಿ ವಿಮಾ ಬಂಡವಾಳ ಹೂಡಿಕೆಗೆ ಕ್ರಮ
* ನೀರಾವರಿ ಯೋಜನೆಗೆ ಒಂದು ಸಾವಿರ ಕೋಟಿ ರೂ. ಮೀಸಲು
* ಪ್ರಧಾನಿ ನೀರಾವರಿ ಯೋಜನೆ ಶೀಘ್ರ ಜಾರಿ
* ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ ರಚನೆ
* ಪ್ರತಿ ಮನೆಯಲ್ಲೂ ಶೌಚಾಲಯ ನಿರ್ಮಾಣದ ಗುರಿ
* ಸರ್ದಾರ್ ಪುಸ್ಥಳಿಗೆ 200 ಕೋಟಿ ನಿಗದಿ
* ಗ್ರಾಮ ಜ್ಯೋತಿ ಯೋಜನೆಗೆ 500 ಕೋಟಿ ನಿಗದಿ
* ಆದಿವಾಸಿಗಳ ಅಭಿವೃದ್ಧಿಗೆ 100 ಕೋಟಿ ಮೀಸಲು
* ಪರಿಶಿಷ್ಟ ಅಭಿವೃದ್ಧಿಗೆ 500 ಕೋ.ರೂ.
* ಹಳೆ ಸಾಲಗಳ ಮನ್ನಾ ಇಲ್ಲ
* ಹಿರಿಯ ನಾಗರಿಕರ ಕಲ್ಯಾಣಕ್ಕೆ 6 ಸಾವಿರ ಕೋ.ರೂ.
* ವಿಕಲ ಚೇತನರಿಗೆ ನೀಡುವ ಆರ್ಥಿಕ ಸಹಾಯಧನ ಹೆಚ್ಚಳ
* ವರ್ಷಾಂತ್ಯದ ವೇಳೆ ಸರಕು ಮತ್ತು ಸೇವೆ ತೆರಿಗೆ ಜಾರಿ
* ಹೊರ ಉದ್ದಿಮೆ ಆರಂಭಿಸುವ ಎಸ್ಸಿ-ಎಸ್ಟಿಗಳಿಗೆ 200 ಕೋ.ರೂ.
*ಸಮುದಾಯ ರೇಡಿಯೋ ಕೇಂದ್ರಕ್ಕೆ 100 ಕೋ.ರೂ. ಮೀಸಲು
* ಬಡವರಿಗೆ ನಗರಗಳಲ್ಲಿ ಕಡಿಮೆ ವೆಚ್ಚದಲ್ಲಿ ಮನೆ ನಿರ್ಮಾಣ
* ಅಸ್ಸಾಂ, ಝಾರ್ಖಂಡ್‌ಗಳಲ್ಲಿ ಕೃಷಿ ಸಂಶೋಧನಾ ಕೇಂದ್ರ ಸ್ಥಾಪನೆಗೆ 100 ಕೋ.ರೂ.
* ಕಾರ್ಪೊರೇಟ್ ಸಹ ಭಾಗಿತ್ವದಲ್ಲಿ ಸ್ಲಂಗಳ ಅಭಿವೃದ್ಧಿ
* ಇಪ್ಪತ್ತು ಲಕ್ಷ ಜನ ಸಂಖ್ಯೆ ಇರುವ ನಗರಗಳಿಗೆ ಮೆಟ್ರೋ ರೈಲು ಸಂಪರ್ಕ
*ಅಹಮದಾಬಾದ್- ಲಕ್ನೋ ನಗರಗಳಿಗೆ ಮೆಟ್ರೋ ರೈಲು ಸಂಪರ್ಕ
* ಪಶು ತಳಿ ಅಭಿವೃದ್ಧಿಗೆ 50 ಕೋ.ರೂ.
* ಹೈನುಗಾರಿಕೆ, ಮೀನುಗಾರಿಕೆಗೆ 50 ಕೋ.ರೂ.
* ವಿವಿಧ ಬ್ಯಾಂಕ್ ಮುಖಾಂತರ 8 ಲಕ್ಷ ಕೋ. ಸಾಲದ ಗುರಿ
* ಮಣ್ಣಿನ ಸವಕಳಿ ತಡೆ ಯೋಜನೆಗೆ 100 ಕೋ.ರೂ.
* ಮಣ್ಣಿನ ಗುಣ ಮಟ್ಟ ಪರೀಕ್ಷೆಗೆ ಮೊಬೈಲ್ ಲ್ಯಾಬೊರೇಟರಿ
* ಹಳ್ಳಿಗಳಲ್ಲಿ ವಿದ್ಯುತ್ ಸಂಪರ್ಕಕ್ಕೆ ಗ್ರಾಮ ಯೋಜನೆ ಜಾರಿ
* ದೃಷ್ಟಿಹೀನರಿಗೆ ಅನುಕೂಲವಾಗಲು ಹೊಸ ನೋಟುಗಳ ಮುದ್ರಣ
* ನೋಟುಗಳಲ್ಲಿ ಬ್ರೈಲ್ ಲಿಪಿ ಅಳವಡಿಕೆ
*ಹವಾಮಾನ ಬದಲಾವಣೆಗೆ ಅದ್ಯಯನ ಸಂಸ್ಥೆ ಸ್ಥಾಪನೆ
*ಡಿಜಿಟಲ್ ಇಂಡಿಯಾ ಯೋಜನೆ ಜಾರಿ
* ಬೆಲೆಯೇರಿಕೆ ನಿಯಂತ್ರಣಕ್ಕೆ 500 ಕೋಟಿ ಮೀಸಲು
* ಕೃಷಿ ಸಾಲಕ್ಕೆ 8 ಲಕ್ಷ ಕೋ. ರೂ. ಮೀಸಲು
* ಕೃಷಿ ಕ್ಷೇತ್ರದ ಮೂಲ ಸೌಕರ್ಯ ಅಭಿವೃದ್ಧಿಗಾಗಿ 100 ಕೋ.ರೂ.
* ಗ್ರಾಮೀಣ ಉದ್ಯಮಕ್ಕೆ ಉತ್ತೇಜನ ನೀಡಲು 100 ಕೋ.ರೂ.
* ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ 14.389 ಕೋ.ರೂ.
* ನೂತನ 4 ಏಮ್ಸ್ ಆಸ್ಪತ್ರೆಗಳ ನಿರ್ಮಾಣ
* 12 ಮೆಡಿಕಲ್ ಕಾಲೇಜುಗಳ ಸ್ಥಾಪನೆ
* 5 ಐಐಎಂಗಳ ಸ್ಥಾಪನೆ
* ಗ್ರಾಮಗಳಲ್ಲಿ ಇ- ಕ್ರಾಂತಿಗಾಗಿ 500 ಕೋ.ರೂ.
* ಹೊಸ ಸಾಫ್ಟ್‌ವೇರ್ ಕಂಪೆನಿಗಳ ಸ್ಥಾಪನೆ
* ಮದ್ರಸಗಳ ಆಧುನೀಕರಣಕ್ಕೆ 100 ಕೋ.ರೂ.
0 comments:
Post a Comment