
ಅವರು ರವಿವಾರದಂದು ರೆಡ್‌ಕ್ರಾಸ್ ಸಂಸ್ಥೆಯ ಬ್ಲಡ ಬ್ಯಾಂಕ್‌ನಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು.
ಜಿಲ್ಲೆಗೆ ಬ್ಲಡ್ ಬ್ಯಾಂಕ್ ಸೇವೆ ಅವಶ್ಯಕವಾಗಿದೆ. ರಾಜ್ಯದಲ್ಲಿ ಕೊಪ್ಪಳ ಜಿಲ್ಲೆಗೆ ಅತಿ ಹೆಚ್ಚು ರಕ್ತ ಹಾಗೂ ಬಿಳಿ ರಕ್ತ ಕಣಗಳು ಬೇಕು. ನಮ್ಮ ನಗರದಲ್ಲಿ ಅತ್ಯಾಧುನಿಕ ಬ್ಯಾಂಕ್ ನೀಡಿರುವ ರೆಡ್‌ಕ್ರಾಸ್ ಸಂಸ್ಥೆಯ ಸೇವೆ ಶ್ಲಾಘನೀಯ ಎಂದರು.
ಸನ್ಮಾನ : ಈ ಸಂದರ್ಭದಲ್ಲಿ ರೆಡ್‌ಕ್ರಾಸ್‌ನಿಂದ ಸಂಸದರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಅಪ್ಪಣ್ಣ ಪದಕಿ, ರೆಡ್‌ಕ್ರಾಸ್ ಉಪಾಧ್ಯಕ್ಷ ಡಾ|| ಕರಮುಡಿ, ಕಾರ್ಯದರ್ಶಿ ಡಾ|| ಶ್ರೀನಿವಾಸ ಹ್ಯಾಟಿ, ನಿರ್ದೇಶಕ ಸೋಮರಡ್ಡಿ ಅಳವಂಡಿ, ಸುಧೀರ, ಸಂತೋಷ ದೇಶಪಾಂಡೆ, ರಾಜೇಶ, ಮಂಜು ನಾಥ ಸಜ್ಜನ್, ಬಿ.ಕೆ. ಸಾಲಿ ಇತರರು ಉಪಸ್ಥಿತರಿದ್ದರು.
0 comments:
Post a Comment