PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ,೨೧,ಜು. ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗದವರ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ವಿವಿಧ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು, ಅಂತಹ ಯೋಜನೆಗಳ ಸದುಪಯೋಗವನ್ನು ಪಡಿಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ರಾಜ್ಯ ಕಾಂಗ್ರೆಸ್ ಎಸ್.ಸಿ ಘಟಕದ ಸಂಚಾಲಕ ಎಂ.ರಾಮಪ್ಪ ಅವರು ಸಲಹೆ ನೀಡಿದರು.
ಇಲ್ಲಿಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಅವರು ರವಿವಾರದಂದು ಜಿಲ್ಲೆಗೆ ಆಗಮಿಸಿದ ರಾಜ್ಯ ವೀಕ್ಷಕರ ತಂಡದ ನೇತೃತ್ವದಲ್ಲಿ ಜರುಗಿದ ಸಭೆಯಲ್ಲಿ ಮಾತನಾಡುತ್ತಿದ್ದರು.
ಗ್ರಾಮೀಣ ಭಾಗದಲ್ಲಿ ಪ.ಜಾ. ಮತ್ತು ಪ.ಪಂ ದ ಬಡವರಿಗೆ ಸರ್ಕಾರಿ ಯೋಜನೆಗಳು ಸಿಗುವಂತೆ ಆಗಬೇಕು. ಕಾಂಗ್ರೆಸ್ ಪಕ್ಷದ ಬ್ಲಾಕ್ ಅಧ್ಯಕ್ಷರು ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ನಿಜವಾದ ಬಡವರಿಗೆ ಯೋಜನೆಗಳ ಲಾಭ ಸಿಗುವಂತೆ ಮಾಡಬೇಕು ಜೊತೆಗೆ ಪಕ್ಷದ ಸಂಘಟನೆಯ್ನು ಬಲಗೊಳಿಸಿ, ಏಳ್ಗೆಗೆ ಶ್ರಮಿಸಿಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪಕ್ಷದ ಪ.ಜಾ. ಜಿಲ್ಲಾ ಘಟಕದ ಅಧ್ಯಕ್ಷ ಗಾಳೆಪ್ಪ ಪೂಜಾರ, ಜಿಲ್ಲೆಯ ಎಲ್ಲಾ ವಿಧಾನಸಭೆ ಕ್ಷೇತ್ರಗಳಲ್ಲಿ ವಿವಿಧ ಯೋಜನೆಗಳ ಅಡಿಯಲ್ಲಿ ಪರಿಶಿಷ್ಟರ ಕಾಲೋನಿಗಳಲ್ಲಿ ಸಿ.ಸಿ ರಸ್ತೆ, ಚರಂಡಿ, ಅಂಬೇಡ್ಕರ, ಬಾಬು ಜಗಜೀವನ್ ಭವನಗಳು ನಿರ್ಮಾಣವಾಗುತ್ತಿದ್ದು, ದಲಿತರ ಜಮೀನುಗಳಿಗೆ ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಕೊಳವೆ ಭಾವಿಗಳನ್ನು ಕೊರಿಸಲಾಗುವುದು ಎಂದು ಸಭೆಯ ಗಮನಕ್ಕೆ ತಂದರು.
ಉಪಾಧ್ಯಕ್ಷ ಮರಿಯಪ್ಪ ದದೇಗಲ್, ಆರ್ ಲೋಕೇಶ್, ಕುಮಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ ದೊಡ್ಡಮನಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ನಿಂಗಪ್ಪ ದೊಡ್ಡಮನಿ, ಮುಖಂಡರಾದ ಮರಿಯಪ್ಪ ಯತ್ನಟ್ಟಿ, ಓಬಳೇರ್ಶ ಹಿರೇಸಿಂದೋಗಿ, ರಮೇಶ್ ಓಜನಹಳ್ಳಿ, ಕೆ.ಸಿದ್ದು, ವೆಂಕಟೇರ್ಶ ಇಂಗಳಗಿ, ಪ್ರಕಾಶ್ ದಾಸರ ಹನುಮಂತಪ್ಪ ಮತ್ತೂರ, ಕನಕಪ್ಪ ಚಿಕ್ಕೇನಕೊಪ್ಪ, ಚಂದ್ರಶೇಖರ ಕುಷ್ಟಗಿ, ಬಸವರಾಜ ಹಿರೇಮನಿ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ ದೊಡ್ಡಮನಿ  ಸೇರಿದಂತೆ ಅನೇಕರು ಭಾಗವಹಿಸಿದ್ದರು .

Advertisement

0 comments:

Post a Comment

 
Top