PLEASE LOGIN TO KANNADANET.COM FOR REGULAR NEWS-UPDATES

ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣ ತಡೆಯುವಲ್ಲಿ ರಾಜ್ಯಸರ್ಕಾರ ವಿಫಲ

ಕೊಪ್ಪಳ ಜು-೧೮    ರಾಜ್ಯದ ನಾನಾ ಕಡೆಗಳಲ್ಲಿ ಸರಣಿ ಅತ್ಯಾಚಾರ ಪ್ರಕರಣಗಳು ನಡೆಯುತ್ತಿದ್ದರೂ ಸಹ ಅತ್ಯಾಚಾರಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಲು ಆಗದ ದುರ್ಬಲ ಗೃಹ ಸಚಿವ ಕೆ,ಜೆ, ಜಾರ್ಜ ಕೂಡಲೇ ರಾಜಿನಾಮೆ ನೀಡಬೇಕೆಂದು ಒತ್ತಾಯಿಸಿ ಕೊಪ್ಪಳ ಜಿಲ್ಲಾ ಮಹಿಳಾ ಮೋಚಾ ಪದಾಧೀಕಾರಿಗಳು ಹಾಗೂ ಕಾರ್ಯಕರ್ತರು ಇಂದು ನಗರದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದರು
ನಗರದ  ಬಜೆಪಿ ಕಾರ್ಯಲಯದಿಂದ ಮೆರವಣಿಗೆ ಹೊರೆಟು ಅಶೋಕ ಸರ್ಕಲ್‌ನಲ್ಲಿ ಪ್ರತಿಭಟಿಸಿದ ಕಾರ್ಯಕರ್ತರು  ತಹಶಿಲ್ದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಅರ್ಪಿಸಿ,  ಇಡೀ ದೇಶಕ್ಕ ಹೋಲಿಸಿದರೆ ಕರ್ನಾಟಕವು ಸುರಕ್ಷಿತ ತಾಣವೇಂದು ಹೇಸರಾಗಿತ್ತು ಆದರೆ ಈಗ ನಡೆಯುತ್ತಿರುವ ಸರಣಿ ಅತ್ಯಾಚಾರ ಪ್ರಕರಣದಿಂದ ಇಡೀ ದೇಶದಲ್ಲಿ ಕರ್ನಾಟಕ ತಲೆ ಎತ್ತದ ಪರಸ್ಥಿತಿ ನಿರ್ಮಾಣವಾಗಿದೆ, ಹಿಂದೆ ಇಂತಹ ಪ್ರಕರಣಗಳು ನಡೆದಾಗ ಅತ್ಯಾಚರಿಗಳ ವಿರುದ್ದ ಕಠಿಣ ಕ್ರಮ  ಕೈಗೊಂಡಿದ್ದರೆ  ಪುನಃ ಇಂತಹ  ಘಟನೆಗಳು ಮರುಕಳಿಸುತ್ತಿರಲಿಲ್ಲಾ,  ಇದು ಸರ್ಕಾರದ ಮತ್ತು ಗೃಹ ಸಚಿವರ ಬೇಜವಾಬ್ದಾರಿಯಾಗಿದೆ. ರಾಜ್ಯದ ನಾನಾ ಕಡೆಗಳಲ್ಲಿ ಇಂತಹ ಘಟನೆಗಳು ಮರುಕಳಿಸುತ್ತಿರುವದು ದುರಂತವೇ ಸರಿ, ಇಂತಹ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದೇ ಇರುವದು ರಾಜ್ಯದಲ್ಲಿ ಸರ್ಕಾರ ಇದೇಯೋ ಇಲ್ಲವೋ ಎಂಬ ಅನುಮಾನ ಮೂಡುತ್ತದೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಬಿಜೆಪಿ ಸದಸ್ಯರು ಪ್ರಶ್ನೆ ಕೇಳಿದಾಗ ಇದಕ್ಕೆ ನಗುತ್ತಾ ಉತ್ತರ ಕೊಡಲು ಮುಂದಾಗಿರುವದು ಇದು ಮಹಿಳೆಯರಿಗೆ ಗೃಹ ಸಚಿವರು ಮಾಡಿದ ಅವಮಾನವಾಗಿದೆ.
ತಕ್ಷಣವೇ  ಮುಖ್ಯಮಂತ್ರಿಗಳು ಗೃಹಸಚಿವ ಕೆ.ಜೆ.ಜಾರ್ಜರವರ ರಾಜಿನಾಮೆ ಪಡೆದು ಅತ್ಯಾಚಾರಿಗಳ ಮೇಲೆ ಮೊಕದ್ದಮೆ ದಾಖಲಿಕೊಂಡು ಕಠಿಣ ಕ್ರಮ ಕೈಗೊಳ್ಳಬೇಕು. 
ಬೆಂಗಳೂರಿನ ಶಾಲೆಯ ವಿಧ್ಯಾರ್ಥಿನಿ ಮೇಲೆ ಲೈಂಗಿಕ ಪ್ರಕರಣ ಹಾಗೂ ಕೋಲಾರದ ಮಾಲೂರಿನಲ್ಲಿ ಬುದ್ದಿಮಾಂದ್ಯ ಯುವತಿಯ ಮೇಲೆ ಅತ್ಯಾಚಾರ ನಡೆದಿರುವದು ಗೃಹ ಇಲಾಖೆಯ ನಿಷ್ಕ್ರಿಯವಾಗಿದ್ದು ೨೦೧೪ ಜೂನ ರಿಂದ ಈ ವರಗೆ ರಾಜ್ಯದಲ್ಲಿ ೮೧೪ ಪ್ರಕರಣಗಳು ನಡೆದಿದ್ದು ೬೧೪ ಮಂದಿಯನ್ನು ಬಂಧಿಸಲಾಗಿದೆ ಈವರಗೆ ಯಾರೊಬ್ಬರಿಗು ಶಿಕ್ಷೆ ವಿಧಿಸಿಲ್ಲದಿರುವದು ನಾಗರಿಕರನ್ನು ಆತಂಕ ಪಡುವಂತೆ ಮಾಡಿದೆ ಮಹಿಳಿಯರ ವಿರುದ್ದ ಅಪರಾಧಿಕರಣದ ಸಮಸ್ಯಗಳಿಗೆ ಸರ್ಕಾರ ತಕ್ಷಣವೇ ಗಂಭೀರವಾದ ಕ್ರಮ ಜರಗಿಸಲು ಕೊಪ್ಪಳ ಜಿಲ್ಲಾ ಮಹಿಳಾ ಮೋರ್ಚಾದ ಎಲ್ಲಾ ಘಟಕಗಳು ಸರ್ಕಾರವನ್ನು ಒತ್ತಾಹಿಸಿದೆ.
ಇಂದು ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ರಾಷ್ಟ್ರಿಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಜ್ಯೋತಿ ಪುತ್ತುರಾಯ್, ಜಿಲ್ಲಾ ಅಧ್ಯಕ್ಷೆ ಹೇಮಲತಾ ನಾಯಕ್, ಶಾಮಲಾ ಕೊನಾಪುರ, ಪ್ರದಾನ ಕಾರ್ಯದರ್ಶಿ ಮದುರಾ ಕರುಣಂ, ಶೋಭಾ ನಗರಿ, ವಾಣಿಶ್ರೀ ಹಿರೇಮಠ,  ಹೇಮಕ್ಕ ಮಂಗಳೂರು, ಪೂರ್ಣಿಮಾ ಶೆಟ್ಟರ, ಶೀವಲೀಲಾ ದಳವಾಯಿ, ಅನ್ನಪೂರ್ಣ ವಸ್ತ್ರದ, ಸುವರ್ಣ ನಿರಲಗಿ, ಜನ್ನಾಭಾಯಿ ಜಕ್ಕಲಿ, ಅಕ್ಕಮಹಾದೇವಿ, ಗಿರಿಜಮ್ಮ, ನೀಲಮ್ಮ ಕುಂಭಾರ, ಚೆನ್ನಮ್ಮ ಶೆಟ್ಟರ, ಶಾಂತಕ್ಕ ಹಿರೇಮಠ,  ಬಸ್ಸಮ್ಮ ದಿವಟರ್, ಶಿಲ್ಪಾ ಮಂಗಳೂರು, ಜ್ಯೋತಿ ಮಲ್ಲಿಕಾರ್ಜುನ, ಅನ್ನಾಪೂರ್ಣ ಮಠಪತಿ, ಪ್ರೇಮಾ ಓಲಿ,ರಾಘವೇಂದ್ರ ಪಾನಘಂಟಿ, ಪೀರಾಹುಸೇನ್ ಹೊಸಳ್ಳಿ. ಡಾ|| ಕೊಟ್ರೇಶ ಶೇಡಮಿ, ರಾಜು ಭಾಕಳೆ, ಪ್ರಾಣೇಶ ಮಹೇಂದ್ರಕರ್, ಗವಿಸಿದ್ದಪ್ಪ ಚಿನ್ನೂರು, ಬಸವರಾಜ ನಿರಲಗಿ, ಮಂಜುನಾಥ ಹಂದ್ರಾಳ, ಉಮೇಶ ಕುರಡಗಿ, ಪರಮಾನಂದ ಯಾಳಗಿ, ಮಲ್ಲಪ್ಪ ಬೇಲೇರಿ, ದೇವರಾಜ ಹಾಲಸಮುದ್ರ, ಡಿ. ಮಲ್ಲಣ್ಣ ಡಾ|| ಜ್ಞಾನಸುಂದರ, ನಾಮದೇವ ಜಕ್ಕಲಿ, ಮುದಿಯಪ್ಪ ತಿಗರಿ, ಸೇರಿದಂತೆ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೋಂಡಿದ್ದರು,

Advertisement

0 comments:

Post a Comment

 
Top