ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನೂರರ ಸಂಭ್ರಮ
ಕೊಪ್ಪಳ,ಜು.೧೧: ಕನ್ನಡ ಸಾಹಿತ್ಯ ಪರಿಷತ್ತಿಗೆ ನೂರು ವರ್ಷಗಳು ತುಂಬಿರುವ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ನೂರರ ಸಂಭ್ರಮ- ನೂರು ಕಾರ್ಯಕ್ರಮ ಹಾಗೂ ಕೃತಿಗಳ ಲೋಕಾರ್ಪಣೆ ಸಮಾರಂಭವನ್ನು ಇದೇ ಜುಲೈ ೧೩ ರಂದು ಬೆ.೧೦.೩೦ ಕ್ಕೆ ಸ್ಥಳೀಯ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದೆ.
ಜಿಲ್ಲಾ ಕ.ಸಾ.ಪ, ಬೆರಗು ಪ್ರಕಾಶನ ಹಾಗೂ ಬಾಲಕಿಯರ ಸ.ಪ.ಪೂ ಕಾಲೇಜಿನ ಕನ್ನಡ ಸಂಘದ ಸಂಯುಕ್ತ ಆಶ್ರಯದಲ್ಲಿ ಜರುಗಲಿರುವ ಕಾರ್ಯಕ್ರಮವನ್ನು ಸಾಹಿತಿ ಹಾಗೂ ಪ್ರಾಚಾರ್ಯ ಡಾ.ವ್ಹಿ.ಬಿ.ರಡ್ಡೇರ್ ಉದ್ಘಾಟಿಸಲಿದ್ದಾರೆ. ಜಿಲ್ಲಾ ಕ.ಸಾ.ಪ ಅದ್ಯಕ್ಷ ವೀರಣ್ಣ ನಿಂಗೋಜಿ ಅದ್ಯಕ್ಷತೆ ವಹಿಸುವರು. ಲೇಖಕ ಈರಪ್ಪ ಕಂಬಳಿ ರವರ ಯಲಬುರಗಿಯಿಂದ ಹಿಮಗಿರಿಯವರೆಗೆ ಹಾಗೂ ತಾಲೂಕಾ ಕ.ಸಾ.ಪ ಅದ್ಯಕ್ಷ ಶಿ.ಕಾ.ಬಡಿಗೇರ ರ ವರ ಕವಿತೆ ಅಚ್ಚಾಗುವುದಿಲ್ಲ ಎಂಬ ಕೃತಿಗಳನ್ನು ಸಾಹಿತಿಗಳಾದ ರವೀಂದ್ರನಾಥ ದೊಡ್ಡಮೇಟಿ ಹಾಗೂ ಎ.ಎಸ್.ಮಕಾನದಾರ್ ಲೋಕಾರ್ಪಣೆಗೊಳಿಸಲಿದ್ದಾರೆ. ಸಾಹಿತಿ ಎ.ಎಮ್.ಮದರಿ, ಕವಯಿತ್ರಿ ಸರೋಜಾ ಬಾಕಳೆ, ಅರುಣಾ ನರೇಂದ್ರ, ವಿಜಯಲಕ್ಷ್ಮಿ ಕೊಟಗಿ ಸೇರಿದಂತೆ ಜಿಲ್ಲೆ ನಾನಾ ಹಿರಿಯ ಸಾಹಿತಿಗಳು ಸಂದರ್ಭದಲ್ಲಿ ಉಪಸ್ಥಿತರಿರುವ ಈ ಕಾರ್ಯಕ್ರಮಕ್ಕೆ ಸಂಘಟಿಕರಾದ ಅಕ್ಬರ್ ಸಿ.ಕಾಲಿಮಿರ್ಚಿ, ಅಲ್ಲಮಪ್ರಭು ಬೆಟ್ಟದೂರ, ಡಿ.ಎಮ್.ಬಡಿಗೇರ, ಶಿವಾನಂದ ಮೇಟಿ, ಆರ್.ಎಸ್.ಸರಗಣಾಚಾರ್ ಸ್ವಾಗತ ಕೋರಿದ್ದಾರೆ.
0 comments:
Post a Comment