PLEASE LOGIN TO KANNADANET.COM FOR REGULAR NEWS-UPDATES


ಜಮಾಅತೆ ಇಸ್ಲಾವಿ ಹಿಂದ್ ಕೊಪ್ಪಳ ಘಟಕದ ವತಿಯಿಂದ ದಿ
೧೫ ಮಂಗಳವಾರ ಸಂಜೆ ೬.೦೦ ಗಂಟೆಗೆ ಮಸ್ಜಿದ್-ಎ-ಆಲಾ ದಲ್ಲಿ ಇಫ್ತಾರ್ ಕೂಟವನ್ನು ಯಶಸ್ವಿಯಾಗಿ ಆಚರಿಸಲಾಯಿತು. ಇದರಲ್ಲಿ ಪ್ರಥಮವಾಗಿ ಕುರ್‌ಆನ್ ಪಠಣದೊಂದಿಗೆ ಜನಾಬ್ ಫಹೀಮುದ್ದೀನ್ ರವರು ಪ್ರಾಸ್ತಾವಿಕವಾಗಿ ರಮಝಾನ್ ಉಪವಾಸದ ಪ್ರಯುಕ್ತ ಮಾತನಾಡಿ ಎಲ್ಲಾ ಸಭಿಕರಿಗೆ ಸ್ವಾಗತಿಸಿದರು. ಜನಾಬ್ ಕೆ.ಐ.ಶೇಕ್ ವಿಭಾಗೀಯ ಸಂಚಾಲಕರು ಜಮಾಅತೆ ಇಸ್ಲಾವಿ ಹಿಂದ್ ಗದಗ್ ರವರು ಮಾತನಾಡಿ ರಮಝಾನ್ ತಿಂಗಳಿನಲ್ಲಿ ಆಚರಿಸುವ ಉಪವಾಸ ವೃತವು ಮಾನವನಿಗೆ ನೈತಿಕವಾಗಿ ಉತ್ತುಂಗಕ್ಕೆ ಏರಿಸುತ್ತದೆ ಅಲ್ಲದೆ ಕಾಮ, ಕ್ರೋಧ, ಮೋಹ, ಮದ ಮತ್ತು ಮತ್ಸರಗಳೆಂಬ ಅರಿಷಡ್ವರ್ಗಗಳನ್ನು ನಿಯಂತ್ರಿಸಲು ತರಬೇತಿಯಾಗಿ ಪರಿಗಣಿಸಲ್ಪಡುತ್ತದೆ. ಮಲ್ಲಯುದ್ಧದಲ್ಲಿ ಎದುರಾಳಿಗೆ ಮಣ್ಣು ಮುಕ್ಕಿಸುವವನು ಶೂರ-ಧೀರನಲ್ಲ ಬದಲಾಗಿ ಯಾರು ಕ್ರೋಧವನ್ನು ನೆತ್ತಿಗೇರಿದಾಗ ತನ್ನನ್ನು ನಿಯಂತ್ರಿಸಿಕೊಳ್ಳುವವನೋ ಅವನೇ ನಿಜವಾದ ಜಟ್ಟಿಗನಾಗುತ್ತಾನೆ ಎಂದು ಹೇಳಿದರು. ಈ ಸಭೆಯಲ್ಲಿ  ಪ್ರಭು ಹೆಬ್ಬಾಳ ಉದ್ಯಮಿಗಳು ಕೊಪ್ಪಳರವರು ಮಾತನಾಡಿ ಮುಸ್ಲಿಂ ಸಮುದಾಯದಲ್ಲಿ ರಮಝಾನ್ ತಿಂಗಳಿನಲ್ಲಿ ಆಚರಿಸುವ ಉಪವಾಸ ವೃತ ಹಾಗೂ ಪ್ರಾರ್ಥನೆಗಳಿಗೆ ಸಾಲು ಸಾಲಾಗಿ ಸಣ್ಣ ಮಕ್ಕಳು ಹಾಗೂ ವಯೋವೃದ್ಧರು ಆ ದೇವನಲ್ಲಿ ಪ್ರಾರ್ಥಿಸುತ್ತಿರುವುದನ್ನು, ಅವರ ಉತ್ಸಾಹವನ್ನು ನೋಡಿ ಮನಸ್ಸಿಗೆ ಬಹಳ ಹೆಮ್ಮೆ ಎನಿಸುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ   ಕೆ. ರಾಘವೇಂದ್ರ ಮಾಜಿ ಪ್ರಾಚಾರ್ಯರು, ಶ್ರೀ ಗವಿಸಿದ್ಧೇಶ್ವರ ಮಹಾವಿದ್ಯಾಲಯ ಕೊಪ್ಪಳರವರು ಮಾತನಾಡಿ ರಮಝಾನ್ ತಿಂಗಳಿನಲ್ಲಿ ಆಚರಿಸುವ ಉಪವಾಸ ವೃತ, ಪ್ರಾರ್ಥನೆ ಮುಂತಾದವುಗಳ ಬಗ್ಗೆ ಇಡೀ ಮುಸ್ಲಿಂ ಸಮುದಾಯಕ್ಕೆ ಇದರ ಶುಭವನ್ನು ಕೋರಿದರು. ಜನಾಬ್ ಸೈಯ್ಯದ್ ಜುಲ್ಲುಖಾದರ್ ಖಾದ್ರಿಯವರು ಕಾರ್ಯಕ್ರಮಕ್ಕೆ ಗಣ್ಯರಿಗೆ ಸ್ವಾಗತಿಸುತ್ತಾ, ಮಸ್ಜಿದ್-ಎ-ಆಲಾ (ಸ್ಟೇಷನ್ ಮಸ್ಜಿದ್) ನೂತನ ಕಟ್ಟಡವನ್ನು ಅವರಿಗೆ ಪರಿಚಯಿಸಿದರು. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದೇಶಬಾಂಧವರು ಪಾಲ್ಗೊಂಡಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರೂ ಸೇರಿ ಸಮಯ ೭.೦೪ ನಿಮಿಷಕ್ಕೆ ಸರಿಯಾಗಿ ಹಣ್ಣು ಹಂಪಲಗಳನ್ನು ಸೇವಿಸಿ ಉಪವಾಸ ವೃತವನ್ನು ಪಾರಾಯಣ ಮಾಡಿದರು. 
ಇದೇ ರೀತಿಯಾಗಿ ದಿನಾಂಕ: ೨೧-೦೭-೨೦೧೪ ರ ಸೋಮವಾರ ಸಂಜೆ : ೫.೩೦ ಗಂಟೆಗೆ ಪೊಲೀಸ್ ಭವನ, ಹಳೇ ಡಿ.ಸಿ. ಆಫೀಸ್ ಹತ್ತಿರ ಕೊಪ್ಪಳ ಹಾಗೂ ದಿನಾಂಕ : ೨೨-೦೭-೨೦೧೪ ರ ಮಂಗಳವಾರ ಸಂಜೆ : ೫.೩೦ ಗಂಟೆಗೆ ಜಾಮಿಯಾ ಮಸ್ಜಿದ್ ಬಹಾದ್ದೂರಬಂಡಿ ಗ್ರಾಮದಲ್ಲಿ ಇಫ್ತಾರ್‌ಕೂಟವನ್ನು ಆಯೋಜಿಸಲಾಗುವುದು. ದೇಶಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಈ ಸಮಾರಂಭದಲ್ಲಿ ಪಾಲ್ಗೊಳ್ಳಬೇಕೆಂದು ಜಮಾಅತೆ ಇಸ್ಲಾವಿ ಹಿಂದ್ ಘಟಕ ಅಧ್ಯಕ್ಷರು ಜನಾಬ್ ಅಬ್ದುಲ್ ಶುಕೂರ್‌ಸಾಬ್ ಕೋರಿದ್ದಾರೆ.

Advertisement

0 comments:

Post a Comment

 
Top