ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾvಯತ್ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ವಾರ್ತಾ ಇಲಾಖೆ , ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೊಪ್ಪಳ ಇವುಗಳ ಸಂಯುಕ್ತಾಶ್ರಯದಲ್ಲಿ ರಾಷ್ಠ್ರೀಯ ಆರೋಗ್ಯ ಅಭಿಯಾನದಡಿ ಜಿಲ್ಲಾ ಮಟ್ಟದ ವಿಶ್ವ ಜನಸಂಖ್ಯಾ ದಿನಾಚರಣೆ -೨೦೧೪ ಜನಜಾಗೃತಿಯ ಜಾಥಾ ಚಾಲನೆ ಹಾಗೂ ಸಮಾರಂಭದ ಕಾರ್ಯಕ್ರಮ
ವು ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಧ್ಯಾಹ್ನ ೧೧ ಗಂಟೆಗೆ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ವಿಶೇಷ ಉಪನ್ಯಾಸವನ್ನು ಸುರೇಶಕುಮಾರ ಸೊನ್ನದ ನೆರವೇರಿಸಿದರು. ನಂತರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಆಶೋಕ ವೃತ್ತ ಮಾರ್ಗವಾಗಿ ಜವಾಹರ ರಸ್ತೆಯವರೆಗೆ ಜಾಥಾ ಹೊರಟಿತು.ಕಾರ್ಯಕ್ರಮದಲ್ಲಿ ಶ್ರೀಮತಿ ಚನ್ನಮ್ಮ ವಿರುಪಾಕ್ಷಗೌಡ ಹೇರೂರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀಕೃಷ್ಣ ಉದುಪಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಶ್ರೀಕಾಂತ ಬಾಸೂರ, ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ ಲೋಕೇಶ,ಡಾ.ದಾನರೆಡ್ಡಿ ಭಾಗವಹಿಸಿದ್ದರು.. ಅಧ್ಯಕ್ಷತೆಯನ್ನು ಪ್ರಾಚಾರ್ಯ ತಿಮ್ಮಾರೆಡ್ಡಿ ಮೇಟಿ ವಹಿಸಿದ್ದರು. ಇದರಲ್ಲಿ ಉಪನ್ಯಾಸಕರಾದ ಗಾಯತ್ರಿ ಭಾವಿಕಟ್ಟಿ, ಶ್ರೀಮತಿ ಶುಭಾ, ಶೋಭಾ, ದಾರುಕಾಸ್ವಾಮಿ, ಮಹೇಶಮಮದಾಪುರ, ಆದಿಬಾಬು, ರವಿಕುಮಾರ ಹಿರೇಮಠ ಭಾಗವಹಿಸಿದ್ದರು.
0 comments:
Post a Comment