ಹೈದ್ರಾಬಾದ ಕರ್ನಾಟಕ ಹೋರಾಟ ಸಮಿತಿ
ಮ.ಸಂ.೧-೯-೮೮/೧, ಆಝಾದ ನಗರ, ರಾಯಚೂರು-೫೮೪೧೦೧
ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಯಲ್ಲಿ ಹೈದ್ರಾಬಾದ ಕರ್ನಾಟಕದ ಅಭ್ಯರ್ಥಿಗಳಿಗೆ
೩೨೦ ಪೌರಕಾರ್ಮಿಕರ ಹುದ್ದೆಗಳನ್ನು ಮೀಸಲಿಟ್ಟು ನೇಮಕಾತಿ ನಡೆಸುತ್ತಿರುವ ಮಾಹಿತಿ
ಕರ್ನಾಟಕ ಸರಕಾರ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಯಲ್ಲಿ ಘನತಾಜ್ಯ ಸಂಗ್ರಹಣೆ, ರಸ್ತೆಗುಡುಸುವಿಕೆ, ಚರಂಡಿ ಸ್ವಚ್ಚಗೊಳಿಸುವಿಕೆ ಹಾಗೂ ನೈರ್ಮಲ್ಯಕ್ಕಾಗಿ ಹಮ್ಮಿಕೊಳ್ಳುವ ಸ್ವಚ್ಚತಾ ಕಾರ್ಯಗಳಿಗೆ ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ೪೦೦೦ ಪೌರಕಾರ್ಮಿಕರ ಹುದ್ದೆಗಳ ನೇರ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದು, ಅದರಲ್ಲಿ ೩೨೦ ಹುದ್ದೆಗಳನ್ನು ಸಂವಿಧಾನದ ೩೭೧(ಜೆ) ಪ್ರಕಾರ ಹೈದ್ರಾಬಾದ ಕರ್ನಾಟಕದ ಅಭ್ಯರ್ಥಿಗಳಿಗೆ ಮೀಸಲಿಟ್ಟಿದೆ. ಸದರಿ ಹುದ್ದೆಗಳಿಗೆ ಯಾವುದೇ ವಿದ್ಯಾರ್ಹತೆ ನಿಗದಿಗೊಳಿಸಿರುವದಿಲ್ಲ ಆದರೆ ಕನಿಷ್ಠ ೧೦ ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಿರುವ ಈ ಭಾಗದ ಅಭ್ಯರ್ಥಿಗಳು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಿದ್ದು, ತಕ್ಷಣ ಸೂಕ್ತ ಮಾಹಿತಿ ಪಡೆದು ಅರ್ಜಿಯನ್ನು ಆಯುಕ್ತರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಸಹಾಯಕ ಆಯುಕ್ತರು (ನೇಮಕಾತಿ)ರವರ ಕಛೇರಿ, ಎನ್.ಆರ್.ಚೌಕ, ಬೆಂಗಳೂರು-೫೬೦೦೦೨ ರವರಿಗೆ ದಿನಾಂಕ:೩೧/೦೭/೨೦೧೪ ರೊಳಗಾಗಿ ಸಲ್ಲಿಸಲು ಕೋರಿದೆ.
(ಡಾ.ರಝಾಕ ಉಸ್ತಾದ)
ರಾಜ್ಯ ಉಪಾಧ್ಯಕ್ಷರು
0 comments:
Post a Comment