ಜೈನ ಸಮಾಜದ ಅಧ್ಯಕ್ಷರಾದ ರಾಮಲಾಜಿ ಭಾಗರೇಚಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮಣಿ ಕಂಚನ ಪ್ರಗ್ಗ್ಯಾಜಿ ಅವರು ಅಣುವ್ರತ ನಿಯಮಗಳ ಕುರಿತು ಉಪನ್ಯಾಸ ನೀಡುತ್ತಾ. ಮಾನವನು ಮಾನವೀಯತೆಯನ್ನು ಬೆಳೆಸಿಕೊಳ್ಳಬೇಕು, ಪರಿಸರವನ್ನು ಸಂರಕ್ಷಿಸಬೇಕು. ಭ್ರ್ರೂಣ ಹತ್ಯೆಯನ್ನು ತಡೆಗಟ್ಟಬೇಕು, ಸಮಾಜದಲ್ಲಿ ಸಾಮರಸ್ಯತೆಯನ್ನು ಬೆಳೆಸಬೇಕು ಎಂದರು.
ಜೈನ ಸಂಘದ ಯುವ ಪರಿಷತ್ ಅಧ್ಯಕ್ಷರಾದ ದಿನೇಶ ಜೈನ್ ಅವರು ಮಾತನಾಡುತ್ತಾ, ವ್ಯಸನಮುಕ್ತ ಜೀವನದಿಂದ ಬಿಡುಗಡೆ ಹೊಂದಿದಾಗ ಮಾತ್ರ ಆರೋಗ್ಯವಂತ ದೇಹ ಹೊಂದಲು ಸಾಧ್ಯ ಎಂದರು.
ಜೈನ ಸಮಾಜದ ಮಹಿಳಾ ಮಂಡಳದ ಕಾರ್ಯದರ್ಶಿಗಳಾದ ಅಮೃತಾಬಾಯಿ ಹಾಗೂ ಸಂಗಡಿಗರು ಅಣುವ್ರತ ಕುರಿತು ಗೀತೆ ಹಾಡಿದರು.ಜೈನ ಸಮಾಜದ ಹಿರಿಯರಾದ ಭವರಲಾಲ್ ಜೈನ್, ನೈನ್‌ಸುಖ್, ಅಭಯಕುಮಾರ ಮೆಹತಾ, ಸುಗಂಧಚಂದ, ಮೋಹನಲಾಲ್ ಜೈನ್, ರಮೇಶ ಜೈನ್, ಮಹೇಂದ್ರ ಜೈನ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಶೃತಿ ಜೈನ್ ಪ್ರಾರ್ಥಿಸಿದರು. ಜೈನ ಸಮಾಜದ ಕಾರ್ಯದರ್ಶಿಗಳಾದ ರಾಜೇಂದ್ರ ಜೈನ್ ಕಾರ್ಯಕ್ರಮ ನಿರೂಪಿಸಿದರು. ಮನೋಜ ಜೈನ್ ಸ್ವಾಗತಿಸಿದರು. ಪ್ರವೀಣ ಜೈನ್ ವಂದಿಸಿದರು .
0 comments:
Post a Comment