PLEASE LOGIN TO KANNADANET.COM FOR REGULAR NEWS-UPDATES

ನರೇಂದ್ರ ಮೋದಿಯವರು ಈ ದೇಶಕ್ಕೆ ಪ್ರಧಾನಿಯಾಗಬೇಕು. ಮತ್ತು ಕೊಪ್ಪಳ ಲೋಕಸಭಾ ಕ್ಷೇತ್ರ ದಿಂದ ಸ್ಪರ್ಧಿಸಿದ್ಧ ಕರಡಿ ಸಂಗಣ್ಣ ನವರು ಸಂಸದರಾಗಬೇಕು ಎಂದು ತಾಲೂಕಿನ ಕಾತರಕಿ ಗಡ್ಲಾನುರ ಗ್ರಾಮದ ನೂರಾರು ಬಿಜೆಪಿ ಯುವ ಕಾರ್ಯಕರ್ತರು ಊರಿನ ಆರಾಧ್ಯ ದೇವಿ ದ್ಯಾಮವ್ವ ದೇವಿಗೆ ಹರಕಿ ಕಟ್ಟಿಕೊಂಡಿದ್ದರು. 
ಚುನಾವಣೆಯ ಫಲಿತಾಂಶ ಬಂದು ದೇಶದಲ್ಲಿ ಬಿಜೆಪಿ ಅಭೂತಪೂರ್ವ ಜಯ ಸಾಧಿಸಿ   ನರೇಂದ್ರ ಮೋದಿ ಪ್ರಧಾನಿಯಾಗಿ ಮತ್ತು ಕೊಪ್ಪಳ ಕ್ಷೇತ್ರದ ಕರಡಿ ಸಂಗಣ್ಣ ಸಂಸದರಾಗಿ ಆಯ್ಕೆಗೊಂಡ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ಗ್ರಾಮದ ಬಿಜೆಪಿ ಯುವ ಮೋರ್ಚ ಉಪಾಧ್ಯಕ್ಷ ಬಸವರಾಜ ಪಟ್ಟಣಶೆಟ್ಟಿ ಮತ್ತು ಸಂಗಡಿಗರಿಂದ ದ್ಯಾಮವ್ವ ದೇವಿಗೆ ದೀಡ ನಮಸ್ಕಾರ ಹಾಕಿ ೧೦೧ ಟೆಂಗಿನ ಕಾಯಿ ಹೊಡೆಯುವುದರ ಮೂಲಕ ಮಾಡಿಕೊಂಡ ಹರಕೆಯನ್ನು ತೀರಿಸಲಾಯಿತು. 
ಈ ಹರಕೆ ತೀರಿಸುವ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ದೊಡ್ಡನಗೌಡ ಪಾಟೀಲ, ಶಿದ್ಲಿಂಗಪ್ಪ ಉಳ್ಳಾಗಡ್ಡಿ, ಬಸವರಾಜ ಅಂಗಡಿ, ಶಂಕ್ರಪ್ಪ ಹಾದರಮಗ್ಗಿ, ಶೇಖರಪ್ಪ ಅಂಗಡಿ, ಮುದೇಗೌಡ ಮಾಲಿಪಾಟೀಲ, ಶಿವಪ್ಪ ಉಳ್ಳಾಗಡ್ಡಿ, ಶರಣಪ್ಪ ತೇವರಮನಿ, ನಜೀರಸಾಬ, ಸೇರಿದಂತೆ ಗ್ರಾಮದ ಬಜೆಪಿ ಮುಖಂಡರು, ನೂರಾರು ಯು ಕಾರ್ಯಕರ್ತರು ಪಾಲ್ಗೊಂಡಿದ್ದರು ಎಂದು ಮಾದ್ಯಮ ಸಹ ವಕ್ತಾರ ಪರಮಾನಂದ ಯಾಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Advertisement

0 comments:

Post a Comment

 
Top