PLEASE LOGIN TO KANNADANET.COM FOR REGULAR NEWS-UPDATES

ಸರಕಾರಿ ಪ್ರೌಢಶಾಲೆ ಕವಲೂರ ವಿಶ್ವ ಪರಿಸರ ದಿನಾಚರಣೆ
ಕೊಪ್ಪಳ : ದಿ ೦೫-೦೬-೨೦೧೪ ರಂದು ತಾಲೂಕಿನ ಕವಲೂರು ಗ್ರಾಮದ ಪ್ರೌಢ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು. 
ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಶಾಲಾ ಪ್ರಾರಂಭದಿಂದ ಆವರಣದಲ್ಲಿರುವ ಗಿಡಗಳಿಗೆ ಪಾತಿ ಮಾಡಿಸಿ ನೀರು ಹಾಕುವ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗಿತು.  
ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮುಖ್ಯೋಪಾದ್ಯಾಯ ವಿ ವಿ ಗೊಂಡಬಾಳ ಮಾತನಾಡಿ, ಇಂದಿನ ದಿನಗಳಲ್ಲಿ ಪರಿಸರ ರಕ್ಷಣೆಯ ಅಗತ್ಯ ಮತ್ತು ಅನಿವಾರ್ಯತೆ ಬಗ್ಗೆ ಮಕ್ಕಳಿಗೆ  ವಿವರಿಸಿದರು. ಮುಖ್ಯ ಅತಿಥಿಗಳಾಗಿ ಎಸ್.ಡಿ.ಎಂ. ಸಿ ಅಧ್ಯಕ್ಷ ಸಿದ್ದಪ್ಪ ಗಿಣಗೇರಿ ಉಪಸ್ಥಿತರಿದ್ದರು.
ವಿಜ್ಞಾನ ಶಿಕ್ಷಕರಾದ ಯಮನೂರಪ್ಪ ಇವರು ೨೦೧೪ ರ ವಿಶ್ವಸಂಸ್ಥೆಯ ಘೋಷವಾಕ್ಯ ದ್ವನಿ ಎತ್ತರಿಸಿ, ಸಮುದ್ರ ಮಟ್ಟವನ್ನಲ್ಲ ಇದರ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು,
ಶಿಕ್ಷಕರುಗಳಾದ ಅಡಿವೆಪ್ಪ ಗುಣಾರಿ ಸ್ವಾಗತಿಸಿದರು. ತೋಟಪ್ಪ ಮಟ್ಟಿ ನಿರೂಪಿಸಿದರು, ಅಶೋಕ ಅಕ್ಕಸಾಲಿಗರ ವಂದಿಸಿದರು. 

ಚಿಕ್ಕಬಗನಾಳ : ವಿಶ್ವ ಪರಿಸರ ದಿನಾಚರಣೆ ಯಶಸ್ವಿ
ಕೊಪ್ಪಳ,ಜೂ.೦೫: ತಾಲೂಕಿನ ಚಿಕ್ಕಬಗನಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಗುರುವಾರದಂದು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶಾಲಾ ಆವರಣದಲ್ಲಿ ಸಸಿಗಳ ನೆಡುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು, ಗ್ರಾಮದ ಯುವಕರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ವಿದ್ಯಾರ್ಥಿಗಳು ಹಾಜರಿದ್ದರು.

ಮಾಸ್ತಿ ಪಬ್ಲಿಕ್ ಸ್ಕೂಲ್‌ : ವಿಶ್ವ ಪರಿಸರ ದಿನಾಚರಣೆ

ಕೊಪ್ಪಳ-೦೫ 
         ಸಕಲ ಜೀವರಾಶಿಗಳಿಗೆ ಯಾವುದೇ ಫಲಾಪೇಕ್ಷೆಯಿಲ್ಲದೆ ಪರಿಸರವು ಸಂರಕ್ಷಣೆ ನೀಡುತ್ತದೆ. ಹಾಗೆಯೇ ಪರಿಸರ ರಕ್ಷಿಸುವ ಮೂಲಕ ನಾವು ಅದರ ಋಣ ತೀರಿಸುವ ಕಾರ್ಯ ಮಾಡಬೇಕಾಗಿದೆ ಎಂದು ಕೊಪ್ಪಳ ತಾಲೂಕು ೪ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯೇಕ್ಷೆ, ಹಿರಿಯ ಸಾಹಿತಿ ಶ್ರೀಮತಿ ಶಾಂತಾದೇವಿ ಹಿರೇಮಠ ಕರೆ ನೀಡಿದರು.
        ಅವರು ನಗರದ ಗವಿಮಠ ರಸ್ತೆಯಲ್ಲಿರುವ ಮಾಸ್ತಿ ಪಬ್ಲಿಕ್ ಸ್ಕೂಲ್‌ನಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆಯ ನಿಮಿತ್ಯ ಸಸಿಗಳನ್ನು ನೆಡುವ ಮೂಲಕ ಮಾತನಾಡುತ್ತಿದ್ದರು.
        ಶಾಲೆಯ ಪ್ರತಿ ಮಗು ಸಸಿಗಳನ್ನು ನೆಟ್ಟು ತಾನು ಬೆಳೆಯುವದರ ಜೊತೆಗೆ ಮರವನ್ನು ಬೆಳೆಸುವದರ ಮೂಲಕ ಸಾಮಾಜಿಕ ಜವಾಬ್ದಾರಿ ನಿರ್ವಹಿಸಿ ಉತ್ತಮ ನಾಗರಿಕರಾಗಬೇಕೆಂದು ಕರೆ ನೀಡಿದರು.
        ಶಾಲಾ ಪಾಲಕರ ಪ್ರತಿನಿಧಿ ಶರಣಪ್ಪ ತುಮ್ಮರಗುದ್ದಿ,  ಶಾಲಾ ಸಹಶಿಕ್ಷಕಿ ಹೀನಾ ಕೌಸರ್ ವೇದಿಕೆಯಲ್ಲಿ ಇದ್ದರು. 
        ಶಾಲಾ ಮುಖ್ಯೋಪಾಧ್ಯಾಯರಾದ ಪರಶುರಾಮ ಮ್ಯಾಳಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಶಾಲಾ ವಿದ್ಯಾರ್ಥಿಗಳಾದ ಈಶ್ವರಿ ಮತ್ತು ಐಶ್ವರ್ಯ ಪ್ರಾರ್ಥಿಸಿದರು, ಶಿಕ್ಷಕಿ ಪಾರ್ವತಿ ನಿಡಶೇಸಿ ಸ್ವಾಗತಿಸಿದರು, ವಿನಿತಾ ಬೆಟಗೇರಿ ನಿರೂಪಿಸಿದರು, ರೇಖಾ ರಕರಡ್ಡಿ ವಂದಿಸಿದರು ಹಾಗೂ ಶಾಲಾ ಅಧ್ಯಕ್ಷರಾದ ಹುಲಗಪ್ಪ ಕಟ್ಟಿಮನಿ ಉಪಸ್ಥಿತರಿದ್ದರು.


ಜ್ಞಾನ ಭಾರತಿ ಪ್ರಾಥಮಿಕ ಹಾಗೂ ಮುದ್ದಾಬಳ್ಳಿ ಪ್ರೌಢಶಾಲೆ  ವಿಶ್ವ ಪರಿಸರ ದಿನಾಚರಣೆ
ಜೂನ್ ೦೫ ರಂದು  ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಸಿರೇ ಜೀವದ ಉಸಿರು ಎಂಬ ನಾಣ್ಣುಡಿಯಂತೆ ಶಾಲಾ ಮುದ್ದು ಮಕ್ಕಳಿಂದ ಸಸಿ ನೆಡುವುದರ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಅದ್ದೂರಿಯಿಂದ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಸರ್ವ ಸದಸ್ಯರು, ಹಾಗೂ ಶಾಲಾ ಶಿಕ್ಷಕ ವೃಂದದವರು ಪಾಲ್ಗೊಂಡಿದ್ದರು. ಕಾರ್ಯದರ್ಶಿಗಳಾದ ಶ್ರೀ ಶೇಖರಯ್ಯ ಹಿರೇಮಠ, ಮಾತನಾಡಿ ಹಸಿರೇ ನಮ್ಮ ಜೀವದ ಉಸಿರು ಎಂದು ಹೇಳಿ ಮನೆಗೊಂದು ಮರ ಬೆಳಸಿ ಎಂಬ ಕರೆ ಕೊಟ್ಟರು. ಶಿಕ್ಷಕರಾದ ಕೊಟ್ರಯ್ಯ ಗುಡ್ಲಾನೂರ, ಭಗವಂತ ರಡ್ಡಿ ಮುಂಡರಗಿ, ಚೆನ್ನಪ್ಪ ಕಾಮನೂರ, ಗಾಯತ್ರಿ ಕೋಳೂರ, ಗಂಗು ಮಾದಿನೂರ, ಫಕ್ಕೀರಮ್ಮ ಬಿ, ನಜೀಮಾ ಎಸ್, ರೇಣುಕಾ ಗೊಂದಿ, ಮಂಜುಳಾ ಇವರುಗಳು ಮಾತನಾಡಿ ವಿದ್ಯಾರ್ಥಿಗಳಲ್ಲಿ ಪರಿಸರದ  ಮೌಲ್ಯವನ್ನು ಹಾಗೂ ಪರಿಸರದ ಬಗ್ಗೆ ಜಾಗೃತಿಯನ್ನು ಉಂಟು ಮಾಡಿದರು.
ಪ್ರಾರ್ಥನೆಯನ್ನು ರೇಖಾ ಸಂಗಡಿಗರು ನೇರವೇರಿಸಿದರು. ಚನ್ನಪ್ಪ ಕಾಮನೂರ ಸ್ವಾಗತಿಸಿದರು. ಕೊಟ್ರಯ್ಯ ಗುಡ್ಲಾನೂರ ನಿರೂಪಿಸಿರು. ಭಗವಂತರಡ್ಡಿ ಮುಂಡರಗಿ ವಂದಿಸಿದರು. 

Advertisement

0 comments:

Post a Comment

 
Top