ತುಂಗಭದ್ರಾ ಬೋರ್ಡ್‌ನ್ನು ರದ್ದು ಮಾಡಿ ಬಚಾವತ್ ಆಯೋಗದ ತೀರ್ಪಿನಂತೆ ಜಲಾಶಯ ನಿರ್ವಹಣೆಯನ್ನು ಕರ್ನಾಟಕ ಸರ್ಕಾರಕ್ಕೆ ಒಪ್ಪಿಸಬೇಕೆಂದು ಕೇಂದ್ರ ಸರಕಾರವನ್ನು ಸಿ.ಪಿ.ಐ.ಎಂ.ಎಲ್. ಲಿಬರೇಷನ್ ಆಗ್ರಹಿಸಿದೆ.
ಕಳೆದ ೬೦ ವರ್ಷಗಳಿಂದ ಆಂಧ್ರದ ರಾಜಕಾರಣಿಗಳು ತುಂಗಭದ್ರಾ ಬೋರ್ಡ್ ಮುಖಾಂತರ ದೌರ್ಜನ್ಯದಿಂದ ತಮ್ಮ ಪಾಲಿಗಿಂತಲೂ ಹೆಚ್ಚಿನ ನೀರು ಪಡೆಯುತ್ತಿದ್ದು, ಕರ್ನಾಟಕದ ರೈತರು ಹೋರಾಟಗಳನ್ನು ಅನೇಕ ವರ್ಷಗಳಿಂದ ಮಾಡುತ್ತಾ ಬಂದಿರುವುದು ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ.
ಆಂಧ್ರ ಇಬ್ಭಾಗವಾಗಿ ತೆಲಂಗಾಣ ಮತ್ತು ಸೀಮಾಂದ್ರ ರಾಜ್ಯಗಳಾಗಿ ಅಸ್ತಿತ್ವಕ್ಕೆ ಬಂದಿರುವದರಿಂದ ಸೀಮಾಂಧ್ರದ ಮುಖ್ಯಮಂತ್ರಿ ಚಂದ್ರುಬಾಬುನಾಯ್ಡು ಕೇಂದ್ರ ಸರಕಾರದ ಮೇಲೆ ಪ್ರಭಾವ ಬೀರಿ ತುಂಗಭದ್ರಾ ಬೋರ್ಡ್‌ನ ಮೇಲೆ ಹಿಡಿತ ಸಾಧಿಸಲಿದ್ದಾರೆ. ಬೋರ್ಡ್‌ನಿಂದ ಕರ್ನಾಟಕದ ರೈತರಿಗೆ ಪೆಟ್ಟುಬೀಳಲಿದೆ.
ಬಚಾವತ್ ಆಯೋಗದ ತೀರ್ಪುನಲ್ಲಿ ಜಲಾಶಯದ ಎಡ, ಬಲ ಮತ್ತು ಮೇಲ್ಕಾಲುವೆಗಳ ನೀರಿನ ಪಾಲಿನ ಪ್ರಮಾಣ ಮತ್ತು ಆಂಧ್ರ ಕರ್ನಾಟಕ ಪಾಲುಗಳು ಸ್ಪಷ್ಟವಾಗಿ ಹೇಳಲಾಗಿದೆ. ಈ ಹಂಚಿಕೆಯು ತುಂಗಭದ್ರಾ ಬೋರ್ಡ್ ಮುಖಾಂತರ ನಡೆಯುತ್ತಿತ್ತು, ಆಂಧ್ರ ಇಬ್ಬಾಗವಾದ್ದರಿಂದ ತೆಲಂಗಾಣ ಮತ್ತು ಆಂದ್ರರಾಜ್ಯಗಳ ಜಗಳದಲ್ಲಿ ಕರ್ನಾಟಕದ ರೈತರನ್ನು ಬಲಿಪಶು ಮಾಡುತ್ತಾರೆ ಎಂದು ಭಾರದ್ವಾಜ್ ತಿಳಿಸಿದ್ದಾರೆ.
0 comments:
Post a Comment