ಕೊಪ್ಪಳ : ನಗರದ ೧೮ನೇ ವಾರ್ಡಿನ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ಮತ್ತು ಪೆನ್ನುಗಳನ್ನು ನಗರಸಭಾ ಸದಸ್ಯ ಚನ್ನಪ್ಪ ಕೋಟ್ಯಾಳ ಉಚಿತವಾಗಿ ವಿತರಿಸಿದರು. ಮನೆ ಮನೆಗೆ ತೆರಳಿ ಶಾಲೆ ಮತ್ತು ಕಾಲೇಜು ಕಲಿಯುತ್ತಿರುವ ವಾರ್ಡಿನ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ಹಂಚಲಾಯಿತು. ನಿರಂತರವಾಗಿ ನಿಸ್ವಾರ್ಥದಿಂದ ಪ್ರತಿವರ್ಷ ಒಂದಿಲ್ಲೊಂದು ಸಮಾಜಸೇವೆಯ ಕಾರ್ಯದಲ್ಲಿ ತೊಡಗುವ ನಗರಸಭಾ ಸದಸ್ಯ ಚನ್ನಪ್ಪ ಕೋಟ್ಯಾಳ ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕಗಳನ್ನು ಹಂಚಿದ್ದು ಪ್ರಶಂಸೆಗೆ ಪಾತ್ರವಾಯಿತು. ಈ ಸಂದರ್ಭದಲ್ಲಿ ವಾರ್ಡಿನ ಗುರುಹಿರಿಯರು ಹಾಗೂ ಕಾರ‍್ಯಕರ್ತರು ಉಪಸ್ಥಿತರಿದ್ದರು.
Home
»
»Unlabelled
» ಉಚಿತವಾಗಿ ನೋಟ್ಬುಕ್ಗಳ ವಿತರಣೆ
Subscribe to:
Post Comments (Atom)
0 comments:
Post a Comment