PLEASE LOGIN TO KANNADANET.COM FOR REGULAR NEWS-UPDATES

 ಲೋಕಸಭಾ ಕ್ಷೇತ್ರದ ಕೇಂದ್ರ ಸ್ಥಳವಾದ ಕೊಪ್ಪಳ ಜಿಲ್ಲಾ ಕೇಂದ್ರ ಕೊಪ್ಪಳದಲ್ಲಿ ಅಜಮೀರ -ಯಶವಂತಪೂರ. ಜೋದಪೂರ ಯಶವಂತಪೂರ. ಹೌರಾ-ವಾಸ್ಕೋ ಎಕ್ಸಪ್ರೆಸ್ ರೈಲುಗಳ ಕೊಪ್ಪಳ ರೈಲು ನಿಲ್ದಾಣದಲ್ಲಿ ನಿಲ್ಲುಗಡೆ ರದ್ದಾಗಿ ಕೊಪ್ಪಳದ ಪ್ರಯಾಣಿಕರು ಬಹಳಷ್ಟು ತೊಂದರೆಯಾಗುತಿರುವುದನ್ನು ಗಮನಿಸಿದ  ಕೊಪ್ಪಳ ಕ್ಷೇತ್ರ ಸಂಸದ ಸಂಗಣ್ಣ ಕರಡಿಯವರ ಒತ್ತಾಯದ ಮೇರೆಗೆ ಪುನಃ ಈ ಎಲ್ಲಾ ರೈಲುಗಳ ನಿಲುಗಡೆಯಾಗುತ್ತಿರುವದು ಉತ್ತಮ ಬೆಳವಣಿಗೆಯಾಗಿದೆ 
ಕೇಂದ್ರದ ರೈಲ್ವೆ ಸಚಿವ ಡಿ.ವಿ ಸದಾನಂದಗೌಡ ಮತ್ತು ರೈಲ್ವೆಯ ಹಿರಿಯ ಅಧಿಕಾರಿಗಳಿಗೆ ಭೇಟಿ ಮಾಡಿ ಮನವಿ ಸಲ್ಲಿಸಿದ ಸಂಸದ ಸಂಗಣ್ಣ ಕರಡಿಯವರ ಮನವಿಗೆ ಸ್ಪಂದಿಸಿದ ಸಚಿವರು ಕೂಡಲೇ ರೈಲ್ವೆಗಳು ಕೊಪ್ಪಳದಲ್ಲಿ ನಿಲುಗಡೆಗೆ ಆದೇಶ ಮಾಡಿ ನೈರುತ್ಯ ರೈಲ್ವೆ ವಲಯ ಅಧಿಕಾರಿಗಳಿಗೆ ಸೂಚನೆ ನೀಡಿದ ಬೆನ್ನಲ್ಲೆ ಕೊಪ್ಪಳದಲ್ಲಿ ಈ ಎಕ್ಸಪ್ರೆಸ್ ರೈಲುಗಳ ನಿಲುಗಡೆ ಪ್ರಾರಂಭಗೊಂಡಿದ್ದು ಇದಕ್ಕೆ ಈ ಭಾಗದ ಪ್ರಯಾಣಿಕರು ಸಂತಸಗೊಂಡು ಸಂಸದ ಸಂಗಣ್ಣ ಕರಡಿಯವರಿಗೆ ಅಭಿನಂದಿಸಿದ್ದಾರೆ.
ಕೌಂಟರ ಪ್ರಾರಂಬಿಸಲು ಸೂಚನೆ : ಕ್ಷೇತ್ರದ ಗಂಗಾವತಿ ಮತ್ತು ಸಿಂಧನೂರ ಅಂಚೆ ಕಛೇರಿಗಳಲ್ಲಿ ರೈಲ್ವೆ ಪ್ರಯಾಣಿಕರ ಮುಂಗಡ ಟೀಕೆಟ ಕೌಂಟರ್‌ಗಳನ್ನು ಕೆಲವು ದಿನಗಳ ಹಿಂದೆ ಸ್ಥಗಿತಗೊಳಿಸಲಾಗಿತ್ತು ಇದನ್ನು ಕೂಡ ಪುನಃ ಮುಂಗಡ ಟೀಕೆಟ ಕೌಂಟರ ಈ ಕೂಡಲೇ ಪ್ರಾರಂಬಗೊಳಿಸಲು ಸಂಸದರ ಮನವಿ ಮೇರೆಗೆ ಸಂಬಂಧಿಸಿದ ಅಂಚೆ ಇಲಾಖೆಯ ಅಧಿಕಾರಿಗಳಿಗೆ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ದಿ: ೪ರಂದು ಬುಧವಾರ ಆದೇಶ ಹೋರಡಿಸಿದ್ದಾರೆ.
ಕಬ್ಬು ಬೆಳೆಗಾರರಿಗೆ ಹಣ ಪಾವತಿಸಲು ಮನವಿ: ಕಬ್ಬ್ಬು ಬೆಳದ ರೈತರು ತೀವ್ರ ಸಂಕಷ್ಠದಲ್ಲಿದ್ದು ಕಬ್ಬು ಬೆಳೆದ ರೈತರಿಗೆ ರಾಜ್ಯಸರಕಾರ ನಿಗದಿ ಪಡಿಸಿದ ಪ್ರೋತ್ಸಹಧನ ನೀಡುವಲ್ಲಿ ನಿರ್ಲಕ್ಷ ಮತ್ತು ವಿಳಂಬವನ್ನು ಅನುಸರಿಸುತ್ತಿರುವುದನ್ನು ಕೈಬಿಟ್ಟು ಕೂಡಲೇ ರಾಜ್ಯ ಸರಕಾರ ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಯ ಕಬ್ಬು ಬೆಳೆಗಾರಿಗೆ ಪ್ರೋತ್ಸಹಧನ ಕೂಡಲೇ ಬಿಡುಗಡೆ ಮಾಡಬೇಕು ಎರಡು ಜಿಲ್ಲೆಗಳ  ರೈತರಿಗೆ ಸುಮಾರು ೧.೫೦ಕೋಟಿ ಬಾಕಿ ಹಣ ನೀಡಬೇಕಾಗಿದ್ದು  ಇದನ್ನು ತ್ವರಿತಗತಿಯಲ್ಲಿ  ರಾಜ್ಯ ಸರಕಾರ  ಕೂಡಲೇ ಮಂಜೂರು ಮಾಡಲು  ಆಯಾ ಜಿಲ್ಲಾಧಿಕಾರಿಗಳು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಹಣ ಬಿಡುಗಡೆ ಮಾಡಿಸಿ ರೈತಾಪಿ ಕುಟುಂಬಕ್ಕೆ ವಿತರಿಸಿ ಅವರ  ಸಮಸ್ಯೆಳನ್ನು ಪರಿಹರಿಸಲು ಮುಂದಾಗುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ. ಎಂದು ಮಾಧ್ಯಮ ಸಹ ವಕ್ತಾರ ಪರಮಾನಂದ ಯಾಳಗಿ   ತಿಳಿಸಿದ್ದಾರೆ.

Advertisement

0 comments:

Post a Comment

 
Top