ರಾಜ್ಯ ಸರ್ಕಾರವು ಬಡ ಮಕ್ಕಳ ಉನ್ನತ ಅಭ್ಯಾಸಕ್ಕಾಗಿ ಯಲಬುರ್ಗಾ ತಾಲೂಕಿನ ಮಂಗಳೂರು ಗ್ರಾಮಕ್ಕೆ ಈಗಾಗಲೇ ಪದವಿ ಕಾಲೇಜು ಮಂಜುರಾತಿ ಮಾಡಿದ್ದು ಸಂತಸದ ವಿಷಯವಾಗಿದೆ. ಈ ಪದವಿ ಕಾಲೇಜು ಎಲ್ಲ ಮೂಲ ಸೌಕರ್ಯಗಳನ್ನು ಪಡೆದುಕೊಂಡಿದ್ದು, ತಾತ್ಕಾಲಿಕವಾಗಿ ಮಂಗಳೂರು ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಟ್ಟಡದಲ್ಲಿ ಕಾರ್ಯಾಲಯವನ್ನು ಆರಂಭಿಸಲಾಗಿರುತ್ತದೆ ಹಾಗೂ ಇದೇ ಕಟ್ಟಡಗಳ ಕೋಣೆಗಳಲ್ಲಿಯೇ ತರಗತಿಗಳು ನಡೆಯಲಿವೆ. ಪ್ರಸಕ್ತ ಸಾಲಿನಲ್ಲಿ ಬಿ.ಎ ವಿಭಾಗದಲ್ಲಿ ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, / ಇತಿಹಾಸ,ಅರ್ಥಶಾಸ್ತ್ರ, ಐಚ್ಚಿಕ ಕನ್ನಡ,/ ಇತಿಹಾಸ,ಅರ್ಥಶಾಸ್ತ್ರ,ಸಮಾಜಶಾಸ್ತ್ರ ಈ ವಿಷಯಗಳಿಗೆ ಸಂಲಗ್ನತೆ ( ಅನುಮತಿ) ಪಡೆದುಕೊಂಡಿದೆ. ಇದರ ಜೊತೆಗೆ ಐಚ್ಚಿಕ ಇಂಗ್ಲೀಷ್ ವಿಷಯದ ಪ್ರಾರಂಭಿಸಲು ಚಿಂತನೆ ಇದೆ. ಇವುಗಳ ಜೊತೆಗೆ ಇಂಗ್ಲೀಷ್ ಭಾಷಾ ಕೌಶಲ್ಯ ತರಬೇತಿ, ಕಂಪ್ಯುಟರ ಕೌಶಲ್ಯ ತರಬೇತಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾರ್ಗದರ್ಶನ ಮಾಡುವ ಹಲವು ನವೀನ ಯೋಜನೆಗಳನ್ನು ಹಮ್ಮಿಕೊಂಡಿದೆ.
ಮಂಗಳೂರು ಹೋಬಳಿ ಮತ್ತು ಸುತ್ತಲಿನ ಹಿರೇಬೀಡನಾಳ್,ಚಿಕ್ಕಬೀಡನಾಳ್, ಶಿರೂರು, ಕಿನ್ನಾಳ, ರ‍್ಯಾವಣಕಿ, ಮುತ್ತಾಳ, ಹೊನ್ನುಂಚಿ, ವಣಗೇರಿ, ಬೇವುರು, ಬೈರನಾಯಕನಹಳ್ಳಿ, ಕದ್ರಳ್ಳಿ, ಕುದರಿಮೋತಿ, ಬೂದುಗುಂಪಾ, ಗುತ್ತುರು, ನೆಲಜೇರಿ, ಮಾದ್ನೂರು, ಮುದ್ಲಾಪುರು, ಅರಿಕೇರಿ, ಕವಳಕೇರಿ, ಮುರಡಿ, ವಟ್ಪರವಿ, ಬುಡಶೆಟ್ನಾಳ್, ವೀರಾಪುರ ಈ ಮೊದಲಾದ ಗ್ರಾಮಗಳ ವಿದ್ಯಾರ್ಥಿಗಳಿಗೆ ಕಾಲೇಜಿಗೆ ಬರಲು ಬಸ್ಸಿನ ವ್ಯವಸ್ಥೆಯನ್ನು ಮಾಡಿಕೊಡಲಾಗುವದು. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ನೂತನ ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯರಾ ಡಾ.ಡಿ.ಎಚ್.ನಾಯಕ್ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ. ಪ್ರವೇಶಾತಿ ಪ್ರಕ್ರಿಯೆಯ ಮಾಹಿತಿಗಾಗಿ ಪ್ರಾಚಾರ್ಯರ ಮೊಬೈಲ್ ಸಂಖ್ಯೆ ೯೪೪೮೮೭೭೦೮೫ ಸಂಪರ್ಕಿಸಬಹುದು.
0 comments:
Post a Comment