ಪದವಿ ಪ್ರವೇಶಕ್ಕಾಗಿ ಬರುವ ಎಲ್ಲಾ ವಿದ್ಯಾರ್ಥಿಗಳಿಗೆ ದಾಖಲಾತಿ ಮಾಡಿಕೊಡಲು ಮತ್ತು ಕಾಲೇಜು ಅಭಿವೃದ್ಧಿ
ಹೆಸರಲ್ಲಿ ವಸೂಲಿ ಮಾಡಿರುವ ರೂ.೪೦೦/- ಶುಲ್ಕ ಕೈಬಿಡಲು ಒತ್ತಾಯಿಸಿ ಪ್ರತಿಭಟನಾ ಧರಣಿ.
ಭಾರತ ವಿದ್ಯಾರ್ಥಿ ಫೆಡರೇಷನ್ (Sf
I) ಜಿಲ್ಲಾ ಸಮಿತಿಯು ಪ್ರತಿಭಟನಾ ಧರಣಿ ಮೂಲಕ ಆಗ್ರಹಿಸುವುದೇನೆಂದರೆ, ಕೊಪ್ಪಳ ನಗರವು ಜಿಲ್ಲಾ ಕೇಂದ್ರವಾದ ಕಾರಣ ಅನೇಕ ಹಾಸ್ಟೇಲುಗಳ ಸೌಲಭ್ಯ ಹೊಂದಿದ್ದುಕ್ಕಾಗಿ ಗ್ರಾಮೀಣ ಪ್ರದೇಶದ ವಿವಿಧ ತಾಲೂಕಿನ ಬಡ, ದಲಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗದ ವಿದ್ಯಾರ್ಥಿಗಳು, ಉನ್ನತ ಶಿಕ್ಷಣ ವ್ಯಾಸಂಗ ಮಾಡಲು ದಿನನಿತ್ಯ ಪದವಿ ದಾಖಲಾತಿಗಾಗಿ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಬರುತ್ತಿದ್ದು, ನಿರಾಶೆಯಿಂದ ಮರಳಿ ಹೋಗುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲ ತಾಂತ್ರಿಕ ತೊಂದರೆಗಳಿಂದ ವಿದ್ಯಾರ್ಥಿಗಳಿಗೆ ನೀವುಗಳು (ಪ್ರಾಚಾರ್ಯರು) ದಾಖಲಾತಿಗೆ ಅನುಮತಿ ಕೊಟ್ಟಿರುವುದಿಲ್ಲ. ಆದರೆ, ನೀವು ಹಚ್ಚಿದ ಆಯ್ಕೆ ಪಟ್ಟಿಯಲ್ಲಿ ವಿವಿಧ ಬೇರೆ ತಾಲೂಕಿನ ಸುಮಾರು ೫೦ ವಿದ್ಯಾರ್ಥಿಗಳು ಆಯ್ಕೆಯಾಗಿರುತ್ತಾರೆ. ಆರ್ಥಿಕವಾಗಿ ತೀರಾ ಹಿಂದುಳಿದ ವಿದ್ಯಾರ್ಥಿಗಳಾದ ಕಾರಣ ಖಾಸಗಿ ಕಾಲೇಜುಗಳ ಶುಲ್ಕ ನೀತಿಗೆ, ಡೊಣೆಶನ್‌ಗೆ ಹೆದರಿ ಹಲವಾರು ವಿದ್ಯಾರ್ಥಿಗಳು ಸರಕಾರಿ ಕಾಲೇಜಿಗೆ ಬರುತ್ತಿದ್ದು, ಎಲ್ಲರನ್ನೂ ದಾಖಲಾತಿ ಮಾಡಿಕೊಳ್ಳಿ.
ಕಾಲೇಜು ಅಭಿವೃದ್ಧಿ ಹೆಸರಿನಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯಿಂದ ರೂ.೪೦೦/- ಗಳನ್ನು ಸುಮಾರು ೧೨೦೦ ವಿದ್ಯಾರ್ಥಿಗಳಿಂದ ಒಟ್ಟು ರೂ.೪,೮೦,೦೦೦/- ಹಣವನ್ನು ಸಂಗ್ರಹ ಮಾಡಿದ್ದೀರಿ. ಆದರೆ ವಾಸ್ತವದಲ್ಲಿ ಕಾಲೇಜು ಏನು ಅಭಿವೃದ್ಧಿಯಾಗಿರುವುದಿಲ್ಲ. ಕಾಲೇಜು ಅಭಿವೄದ್ಧಿ ಸಮಿತಿಯವರೇ ಈ ಶೈಕ್ಷಣಿಕ ವರ್ಷ ಸಹ ಕಾಲೇಜಿನ ಎಸ್.ಸಿ.ಎಸ್.ಟಿ., ಓಬಿಸಿ ಮತ್ತು ಎಲ್ಲಾ ಮಹಿಳಾ ವಿದ್ಯಾರ್ಥಿನಿಯರಿಂದ ಕಾಲೇಜು ಅಭಿವೄದ್ಧಿ ಹೆಸರಿನಲ್ಲಿಮತ್ತೆ ರೂ.೪೦೦/- ವಸೂಲಿ ಮಾಡುತ್ತಿದ್ದನ್ನು ಕೂಡಲೇ ಕೈಬಿಡಬೇಕು. ಏಕೆಂದರೆ, ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶಾಸಕರು ಇರುವ ಸರಕಾರಿ ಪ್ರಥಮ ದರ್ಜೆ ಕಾಲೇಜು ಇರುವ ಹಿಟ್ನಾಳ ಮತ್ತು ಹೊಸಬಂಡಿಹರ್ಲಾಪೂರಗಳಲ್ಲಿ ಮಾತ್ರ ಕೇವಲ ರೂ.೨೫೦/- ಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಅಲ್ಲದೇ ವಿದ್ಯಾರ್ಥಿಗಳ ಸಂಖ್ಯೆಯೂ ಕೂಡ ಅಲ್ಲಿ ಕಡಿಮೆ ಇದೆ. ಜಿಲ್ಲೆಯಲ್ಲಿ ಅತಿ ಹೆಚ್ಚು ಸರಕಾರಿ ಪದವಿ ಕಾಲೇಜುಗಳಿಗೆ ದಾಖಲಾತಿ ಹೊಂದುವ ಗಂಗಾವತಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೇವಲ ರೂ.೨೦೦/- ಮಾತ್ರ ತೆಗೆದುಕೊಳ್ಳಲಾಗುತ್ತಿದೆ. ನೀವು ಏಕೆ ರೂ.೪೦೦/- ಪಡೆಯುತ್ತಿದ್ದೀರಿ. ಕಾಲೇಜು ಅಭಿವೃದ್ಧಿ ಸಮಿತಿ ಇರುವುದು ಸರಕಾರದಿಂದ ಮತ್ತು ದಾನಿಗಳಿಂದ ಕಾಲೇಜಿಗೆ ಮೂಲಭೂತ ಸೌಲಭ್ಯ ಪಡೆಯಲು ಮತ್ತು ಇತರೆ ವಿಷಯದಲ್ಲಿ ಸಹಾಯ ಮಾಡುವುದಕ್ಕಾಗಿ ವಿನಹ ವಿದ್ಯಾರ್ಥಿಗಳಿಂದ ಹಣ ಸಂಗ್ರಹ ಮಾಡುವುದಕ್ಕಾಗಿ ಅಲ್ಲ. ರೂ.೫೦/- ಪರೀಕ್ಷಾ ಶುಲ್ಕ ಕಟ್ಟಲು ಹಿಂದು-ಮುಂದು ನೋಡುವ ವಿದ್ಯಾರ್ಥಿಗಳಿಗೆ ರೂ.೪೦೦/- ಹೊರೆ ಆಗುವುದಿಲ್ಲವೇ? ಇದು ನಿಮ್ಮ ಸಾಮಾಜಿಕ ನ್ಯಾಯವೇ? ಸಾಮಾಜಿಕ ನ್ಯಾಯದ ಉಳಿವಿಗಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಲು ಕೂಡಲೇ ಕಾಲೇಜು ಅಭಿವೄದ್ಧಿ ಶುಲ್ಕದ ಹಣವನ್ನು ಕೈಬಿಡಬೇಕೆಂದು ಒತ್ತಾಯಿಸಿ, ಪ್ರತಿಭಟನಾ ಧರಣಿ
ಅಮರೇಶ ಕಡಗದ ಸುಭಾನ್ ಸೈಯದ ಬಾಳಪ್ಪ ಹುಲಿಹೈದರ್
ಜಿಲ್ಲಾಧ್ಯಕ್ಷರು ಜಿಲ್ಲಾ ಸಹಕಾರ್ಯ ಜಿಲ್ಲಾ ಕಾರ್ಯದರ್ಶಿ ಹಾಗೂ ಪರಶುರಾಮ ರಾಠೋಡ, ವಿರೇಶ ಕುದರಿ ಮೋತಿ, ಆನಂದ, ಶ್ರೀಕಾಂತ, ಹನುಮಂತ ಮುಕ್ಕುಂಪಿ, ಸಿದ್ದು ವಿರೇಶ, ಯಮನೂರ, ಶಾಂತಕುಮಾರ, ಹನುಮಂತ ಭಜಂತ್ರಿ, ಮರಿ ನಾಗಪ್ಪ ಇತರರು ಹಾಜರಿದ್ದರು
0 comments:
Post a Comment