PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ : ಸಮಾಜದಲ್ಲಿನ ಕುಂದುಕೊರತೆಗಳನ್ನು ಒತ್ತಡಗಳನ್ನು ಅನಾವರಗಣಗೊಳಿಸುವುದೇ ಕಾವ್ಯ. ಸಾಹಿತ್ಯ ಲೋಕದಲ್ಲೂ ಸಹ ಮಹಿಳೆಯರಿಗೆ ಸೂಕ್ತ ಅವಕಾಶಗಳು ಸಿಕ್ಕಿಲ್ಲ.ಅನಸೂಯ ಜಹಗೀರದಾರರು ತಡಮಾಡಿ ಪ್ರಕಟಿಸಿದರೂ ಸಾಹಿತ್ಯ ಲೋಕಕ್ಕೆ ಅತ್ಯುತ್ತಮವಾದ ಕೊಡುಗೆಯನ್ನೇ ನೀಡಿದ್ದಾರೆ. ಅನಸೂಯಾ ಜಹಗೀರದಾರರ ಕವನಗಳು ಸ್ತ್ರೀ ವಾದಿ ನೆಲೆಯಲ್ಲಿ ಅಸಮಾನತೆ ಮತ್ತು ಶೋಷಣೆಯ ವಿರುದ್ದದ ಧ್ವನಿಯಾಗಿವೆ ಎಂದು ಡಾ.ವಿಶ್ವನಾಥ ವಂಶಾಂಕೃತಮಠ ಹೇಳಿದರು.
       ಅವರು ನಗರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಗುರುಪ್ರಕಾಶನ ಕೊಪ್ಪಳ ಕವಿಸಮಯದ ಸಹಕಾರದೊಂದಿಗೆ ಹಮ್ಮಿಕೊಂಡಿದ್ದ ಒಡಲಬೆಂಕಿ ಕವನಸಂಕಲನ ಬಿಡುಗಡೆ ಕಾರ್‍ಯಕ್ರಮದಲ್ಲಿ ಕವನಸಂಕಲನ ಲೋಕಾರ್ಪಣೆ ಮಾಡಿ ಮಾತನಾಡುತ್ತಿದ್ದರು.  ನಮ್ಮ ಸಂಪದ್ಬರಿತ ನಾಡಿನಲ್ಲಿ ಇನ್ನೂ ಅವಕಾಶಗಳಿಗಾಗಿ ಕಾಯುವುದು ತಪ್ಪಿಲ್ಲ  ಕೆಲವೊಂದು ಜಿಲ್ಲಾ ಘಟಕಗಳನ್ನು ಹೊರತುಪಡಿಸಿದರೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಸಹ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಸಾಹಿತ್ಯದ ಗಂಧ ಗಾಳಿ ಗೊತ್ತಿಲ್ಲದವರು ಅಧ್ಯಕ್ಷರಾಗಿರುವುದು ವಿಷಾಧಕರ ಸಂಗತಿ ಎಂದರು. 
ಒಡಲಬೆಂಕಿ ಕವನಸಂಕಲನದ ಕುರಿತು ಡಾ.ಜಾಜಿ ದೇವೇಂದ್ರಪ್ಪ ಮಾತನಾಡಿ ಅನಸೂಯಾ ಜಹಗೀರದಾರರ ಕವಿತೆಯ ಮೇಲಿನ ಕಾಳಜಿ ಮೆಚ್ಚುವಂತಹದ್ದು. ಹೈದ್ರಾಬಾದ್ ಕರ್ನಾಟಕ ಕನೆನೆಲವಾಗಿದೆ. ಇಲ್ಲಿ ಇನ್ನೂ ಉತ್ತಮ ಕಾವ್ಯ ಮತ್ತು ಕೃತಿಗಳು ಹೊರಬರಬೇಕಿದೆ.  ನಮ್ಮ ಸಾಹಿತ್ಯದ ಯಾವುದೇ ಪ್ರಕಾರದಲ್ಲೂ ಸಹ ಹೆಣ್ಣು ಸಂಪೂರ್ಣವಾಗಿ ವ್ಯಕ್ತವಾಗಿಲ್ಲ. ಅಲ್ಲಿ ಹೆಣ್ಣಿನ ಜಗತ್ತು ಗೈರಾಗಿದೆ. ಇಲ್ಲಿಯ ಕವನಗಳು ಮೌನದಲ್ಲಿ ಹೋರಾಡುತ್ತವೆ. ಮಾನವಿಯ ಅಂತಕರಣದ ನೆಲೆಯಲ್ಲಿ ಕವನಗಳಿವೆ. ಕಾವ್ಯದಲ್ಲಿ ಆದ್ರತೆ,ವಿಷಾದ ಮತ್ತು ಪ್ರತಿರೋಧವಿದೆ ಎಂದರು. 
ಹಿರಿಯ ಸಾಹಿತಿಗಳಾದ ವಿಠ್ಠಪ್ಪ ಗೋರಂಟ್ಲಿ ಹಾಗೂ ಪತ್ರಕರ್ತ ಸೋಮರಡ್ಡಿ ಅಳವಂಡಿ ಮಾತನಾಡಿ ಸಾಹಿತಿ ಮತ್ತು ಸಾಹಿತ್ಯದ ಸಾಮಾಜಿಕ ಜವಾಬ್ದಾರಿಯ ಕುರಿತು ಮಾತನಾಡಿದರು. ವೇದಿಕೆಯ ಮೇಲೆ ಡಾ.ಆರ್.ಕೆ.ಕುಲಕರ್ಣಿ,ಡಾ.ವಿ.ಬಿ.ರಡ್ಡೇರ್, ವೀರಣ್ಣ ನಿಂಗೋಜಿ, ಜಗನ್ನಾಥ ಹುನಗುಂದ, ಶಾಂತಾದೇವಿ ಹಿರೇಮಠ, ಅನಸೂಯಾ ಜಾಗೀರದಾರ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಹೆಚ್.ಎಸ್.ಪಾಟೀಲ್ ವಹಿಸಿಕೊಂಡಿದ್ದರು. 
ಪ್ರಾಸ್ತಾವಿಕವಾಗಿ ಪ್ರಕಾಶಕ ಕೃಷ್ಣಶಾಸ್ತ್ರಿ ಅಳವಂಡಿ ಮಾತನಾಡಿದರು. ಸ್ವಾಗತವನ್ನು ಮಹೇಶ ಬಳ್ಳಾರಿ ವಂದನಾರ್ಪಣೆಯನ್ನು ಪ್ರಕಾಶ ಬಳ್ಳಾರಿ ಮಾಡಿದರೆ ವಿಜಯಲಕ್ಷ್ಮಿ ಮಠದ (ಕೊಟಗಿ) ಕಾರ್‍ಯಕ್ರಮ ನಡೆಸಿಕೊಟ್ಟರು. ಕಾರ್‍ಯಕ್ರಮದಲ್ಲಿ ಡಾ.ವಿಶ್ವನಾಥ ವಂಶಾಂಕೃತಮಠ,ಡಾ.ಆರ್.ಕೆ.ಕುಲಕರ್ಣಿ ಹಾಗೂ ಡಾ.ಜಾಜಿ ದೇವೇಂದ್ರಪ್ಪನವರಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು. ಕೊಪ್ಪಳದ ಸಾಹಿತ್ಯಾಸಕ್ತರು,ಬರಹಗಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. 

Advertisement

0 comments:

Post a Comment

 
Top