PLEASE LOGIN TO KANNADANET.COM FOR REGULAR NEWS-UPDATES

 ಜಿಲ್ಲೆಯಲ್ಲಿ ದಲಿತರ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿದ್ದು, ಇತ್ತಿಚಿಗೆ ಮರಕುಂಬಿಯಲ್ಲಿ ನಡೆದ ಘಟನೆ ಇಡೀ ಜಿಲ್ಲಾದ್ಯಂತ ಹಳ್ಳಿಗಳಲ್ಲಿ ದಲಿತರ ಶೋಷಣೆ ನಡೆದಿದೆ. ದಲಿತರಾದ ಜಿಲ್ಲಾ ಉಸ್ತುವಾರಿ ಸಚಿವರು ದಲಿತ ಸಂಘಟನೆಗಳ ಮತ್ತು ಪ್ರಗತಿಪರರ ಸಭೆ ಕರೆದು ದಲಿತರ ಮೇಲಾಗುತ್ತಿರುವ ದೌರ್ಜನ್ಯಗಳ ಬಗ್ಗೆ ಪರಿಹಾರ ಹುಡಕಬೇಕೆಂದು ಭಾರದ್ವಾಜ್  ಒತ್ತಾಯಿಸಿದ್ದಾರೆ.

ಕೊಪ್ಪಳ ಜಿಲ್ಲೆಯಲ್ಲಿ ಅದರಲ್ಲಿಯೂ ಹೆಚ್ಚಾಗಿ ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ದಲಿತರಿಗೆ ಕಿರುಕುಳ ಹೆಚ್ಚಾಗಿದೆ. ಇಲ್ಲಿಯ ದಲಿತರು ನಿತ್ಯ ಭಯಬೀತಿಯಿಂದ ಜೀವನ ಸಾಗಿಸುತ್ತಿದ್ದಾರೆ. ಮರಕುಂಬಿ ಗ್ರಾಮದಲ್ಲಿ ದಲಿತರ ಕ್ಷೌರ ಮಾಡದ ಕ್ಷೌರಿಕರ ವಿರುದ್ಧ ಕ್ರಮ ಜರುಗಿಸಿಲ್ಲ. ಹೊಸ್ಕೇರಾ ಸವಳಕ್ಯಾಂಪ್‌ನಲ್ಲಿ ಯಾನಾದಿ ನಾಯಕ ಜನಾಂಗದ ಮೇಲೆ ವಲಸಿಗರ ದೌರ್ಜನ್ಯ ಈ ಎಲ್ಲಾ ವಲಸಿಗರು ಜಿಲ್ಲಾ ಉಸ್ತುವಾರಿ ಸಚಿವರಾದ ತಂಗಡಗಿಯವರ ಗಮನಕ್ಕೆ ಇದ್ದರೂ ಸಚಿವರು ದಲಿತರಿಗೆ ನ್ಯಾಯ ಕೊಡಿಸದೇ ಇರುವುದು ಅವರ ದಲಿತ ವಿರೋಧಿ ನೀತಿಗೆ ಕೈಗನ್ನಡಿಯಾಗಿದೆ. 

ದಲಿತರಿಗೆ ದೇವಾಲಯ ಪ್ರವೇಶ, ಕ್ಷೌರ ಮಾಡದೇ ಜಾತಿ ತಾರತಮ್ಯ, ಹೋಟೆಲ್‌ಗಳಲ್ಲಿ ದಲಿತರಿಗೆ ಪ್ರತ್ಯೇಕ ಸ್ಥಾನ ಈ ಮೂರು ಶೋಷಣೆಯ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಗಮನಹರಿಸಿ ರಾಜ್ಯದಿಂದ ನಿರ್ಮೂಲನೆ ಮಾಡದಿದ್ದರೂ ತಮ್ಮ ಕ್ಷೇತ್ರದಲ್ಲಾದರೂ ಈ ತಾರತಮ್ಯ ನಡೆಯದಂತೆ ನೋಡಿಕೊಳ್ಳಬೇಕು.

ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ದಲಿತರ ಮೇಲೆ ಆಗುತ್ತಿರುವ ಶೋಷಣೆಗಳ ಬಗ್ಗೆ ಚರ್ಚಿಸಲು, ದಲಿತ ಸಂಘಟನೆಗಳು, ಕಮುನಿಷ್ಟ್ ಪಕ್ಷಗಳು ಮತ್ತು ಪ್ರಗತಿಪರ ಬುದ್ಧಿಜೀವಿಗಳನ್ನೊಳಗೊಂಡು ಸಭೆ ಕರೆದು, ಚರ್ಚಿಸಿ ದಲಿತರ ಮೇಲೆ ಆಗುತ್ತಿರುವ ಶೋಷಣೆಗಳನ್ನು ತಡೆಗಟ್ಟಲು ಕಾರ್ಯಾಚರಣೆಗೆ ಮುಂದಾಗಬೇಕೆಂದು, ಇಲ್ಲದಿದ್ದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ಪಿ.ಯು.ಸಿ.ಎಲ್. ನೇತೃತ್ವದಲ್ಲಿ ಜಿಲ್ಲಾದ್ಯಂತ ಸಂಚರಿಸಿ ದಲಿತರ ಮೇಲಾಗುತ್ತಿರುವ ದೌರ್ಜನ್ಯಗಳ ಬಗ್ಗೆ ಸತ್ಯ ಶೋಧನಾ ವರದಿ ತಯಾರಿ ಮಾಡಿ ಸರಕಾರಕ್ಕೆ ಸಲ್ಲಿಸುತ್ತದೆ ಎಂದು ಭಾರದ್ವಾಜ್  ತಿಳಿಸಿದ್ದಾರೆ. 

Advertisement

0 comments:

Post a Comment

 
Top