ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ಕೊಪ್ಪಳ ವ್ಯಾಪ್ತಿಯಲ್ಲಿ ಬರುವ ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಗಿರಿಜನ ಉಪಯೋಜನೆ ಅಡಿಯಲ್ಲಿ ಪ್ರತ್ಯೇಕವಾಗಿ ವಿವಿಧ ವಾಹನಗಳ ವರ್ಗಗಳಿಗೆ ಅನ್ವಯಿಸುವಂತೆ ವಾಹನ ಚಾಲನಾ ತರಬೇತಿ ನೀಡಲಿದ್ದು, ಅರ್ಹ ಅಭ್ಯರ್ಥಿಗಳಿಂದ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಆಟೋರೀಕ್ಷಾ ಕ್ಯಾಬ್ : ಪರಿಶಿಷ್ಟ ಜಾತಿ (೦೪), ಪರಿಶಿಷ್ಟ ಪಂಗಡ (೦೩), ಬಿಳಿಯ ಹಾಳೆಯಲ್ಲಿ ದೃಢೀಕರಿಸಿದ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಲಘು ಮೋಟಾರು ವಾಹನ (ಸಾರಿಗೇತರ) ಚಾಲನಾ ಅನುಜ್ಞಾ ಪತ್ರ ಪಡೆದು ಒಂದು ವರ್ಷ ಪೂರ್ಣವಾಗಿರಬೇಕು. ೮ ನೇ ತರಗತಿ ಉತ್ತೀರ್ಣರಾಗಿರಬೇಕು, ಅಭ್ಯರ್ಥಿಯು ಅರ್ಜಿ ಸಲ್ಲಿಸುವ ವೇಳೆಯಲ್ಲಿ ೨೦ ವರ್ಷಗಳ ವಯೋಮಿತಿ ಹೊಂದಿರಬೇಕು. ಸಂಬಂಧಿಸಿದ ಜಾತಿ ಪ್ರಮಾಣ ಪತ್ರ ಹೊಂದಿರಬೇಕು.
ಲಘು ಮೋಟಾರ್ ವಾಹನ (ಎಲ್.ಎಮ್.ವಿ.): ಪರಿಶಿಷ್ಟ ಜಾತಿ (೧೨), ಪರಿಶಿಷ್ಟ ಪಂಗಡ (೦೭), ಬಿಳಿಯ ಹಾಳೆಯಲ್ಲಿ ಅರ್ಜಿ ಸಲ್ಲಿಸಬೇಕು. ಅಭ್ಯರ್ಥಿಯು ಅರ್ಜಿ ಸಲ್ಲಿಸುವ ವೇಳೆಯಲ್ಲಿ ೧೮ ವರ್ಷಗಳ ವಯೋಮಿತಿ ಹೊಂದಿರಬೇಕು. ವಿಳಾಸ ಪುರಾವೆ, ಜನನ ಪ್ರಮಾಣ ಪತ್ರ ಮತ್ತು ಜಾತಿ ಪ್ರಮಾಣ ಪತ್ರಗಳನ್ನು ಹೊಂದಿರಬೇಕು.
ಭಾರಿ ಸಾರಿಗೆ ವಾಹನ : ಪರಿಶಿಷ್ಟ ಜಾತಿ (೦೩), ಪರಿಶಿಷ್ಟ ಪಂಗಡ (೦೨), ಬಿಳಿಯ ಹಾಳೆಯಲ್ಲಿ ದೃಢೀಕರಿಸಿದ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಲಘು ಮೋಟಾರು ವಾಹನ (ಸಾರಿಗೇತರ) ಚಾಲನಾ ಅನುಜ್ಞಾ ಪತ್ರ ಪಡೆದು ಒಂದು ವರ್ಷ ಪೂರ್ಣವಾಗಿರಬೇಕು. ೮ನೇ ತರಗತಿ ಉತ್ತೀರ್ಣರಾಗಿರಬೇಕು, ಅಭ್ಯರ್ಥಿಯು ಅರ್ಜಿ ಸಲ್ಲಿಸುವ ವೇಳೆಯಲ್ಲಿ ೨೦ ವರ್ಷಗಳ ವಯೋಮಿತಿ ಹೊಂದಿರಬೇಕು. ಸಂಬಂಧಿಸಿದ ಜಾತಿ ಪ್ರಮಾಣ ಪತ್ರ ಹೊಂದಿರಬೇಕು.
ಅರ್ಜಿ ಸಲ್ಲಿಸಲು ಜುಲೈ-೩೧ ಕೊನೆಯ ದಿನವಾಗಿರುತ್ತದೆ. ಚಾಲನಾ ತರಬೇತಿಗೆ ಆಯ್ಕೆಯಾದ ಫಲಾನುಭವಿಗಳು ತರಬೇತಿಗೆ ತಗಲುವ ವೆಚ್ಚದ ಶೇ.೨೫ ಮೊತ್ತವನ್ನು ಭರಿಸಬೇಕಾಗುತ್ತದೆ .
0 comments:
Post a Comment