ಪ.ಜಾ./ಪ.ಪಂಗಡ ಜನಾಂಗದ್ದು ಈಗ ದಯನೀಯ ಸ್ಥಿತಿಯಾಗಿದೆ, ಅವರು ಪೂರ್ಣಪ್ರಮಾಣದ ಮಾಹಿತಿ ಪಡೆದು ಜಾಗೃತರಾದರೆ ಮಾತ್ರ ದಲಿತರ ಉಳಿವು ಎಂದು ಸಿಮಾಸ್ಕ್ ರಾಜ್ಯ ಸಂಚಾಲಕಿ ಪಿ. ಯಶೋಧಾ ಅಭಿಪ್ರಾಯಪಟ್ಟರು.
ಅವರು ನಗರದ ಶ್ರೀ ವಾಲ್ಮೀಕಿ ಭವನದಲ್ಲಿ ಪ.ಜಾ./ಪ.ಪಂಗಡ ದೌರ್ಜನ್ಯ ತಡೆ ಕಾಯ್ದೆ ಮೇಲ್ವಿಚಾರಣಾ ಮತ್ತು ಬಲವರ್ಧನಾ ಸಮಿತಿ (ಸಿ-ಮಾಸ್ಕ್) ನೇತೃತ್ವದಲ್ಲಿ ಡಾ|| ಬಿ. ಆರ್. ಅಂಬೇಡ್ಕರ್ ಕಲಾ ಸಂಸ್ಥೆ, ಕೊಪ್ಪಳ ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತು, ಸಮತಾ ಸೈನಿಕ ದಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಪ. ಜಾತಿ ಪ. ಪಂಗಡ ದೌರ್ಜನ್ಯ ತಡೆ ಕಾಯ್ದೆಯ ಮಾಹಿತಿ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಪ.ಜಾ./ಪ.ಪಂಗಡ ದೌರ್ಜನ್ಯ ತಡೆ ಕಾಯ್ದೆ ೧೯೮೯ ಮತ್ತು ನಿಯಮಗಳು ೧೯೯೫ ಕುರಿತು ರಾಜ್ಯ ಸಂಚಾಲಕಿ ಪಿ. ಯಶೋಧಾರವರು ಸವಿಸ್ತಾರವಾಗಿ ತರಬೇತಿ ನೀಡಿದರು, ಅದರ ಜೊತೆಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಜನರ ಸಮಸ್ಯೆಗಳ ಕುತಿರು ಚರ್ಚಿಸಿ ಪರಿಹಾರ ಮಾರ್ಗಗಳನ್ನು ತಿಳಿಸಿದರು. ಜಿಲ್ಲಾ ವಾಲ್ಮೀಕಿ ನೌಕರರ ಸಂಘದ ಅಧ್ಯಕ್ಷ ರಾಜಕುಮಾರ ನಾಯಕ, ಭರಮಪ್ಪ ಬೆಲ್ಲದ, ಡಾ|| ಜ್ಞಾನಸುಂದರ, ವೀರೇಶ ತಾವರಗೇರಾ ಕಿನ್ನಾಳ, ವೀರಣ್ಣ ಹುಣಸಿಮರದ, ಅಂದಪ್ಪ ಮಂಗಳೂರು, ಗಂಗಾಧರ ಈಚನಾಳ, ರಮೇಶ ಕೋಟೆ, ಪ್ರಕಾಶ ಮಂಗಳೂರ, ಚಂದ್ರು ಸೂಡಿ ಇತರರು ಇದ್ದರು. ದಲಿತ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಪ್ರಸ್ತಾವಿಕವಾಗಿ ಮಾತನಾಡಿ, ವೈಜ್ಞಾನಿಕ ಯುಗ ತಲುಪಿರುವ ಮಾನವ ಸಮಾಜದಲ್ಲಿ ಈಗಲೂ ದಲಿತರ ಬದುಕು ಅಸಹನೀಯವಾಗಿರುವದು ದುಃಖಕರ ಸಂಗತಿ, ದಲಿತರು ಒಗ್ಗಟ್ಟಾಗಬೇಕು, ವಿದ್ಯಾವಂತರಾಗಬೇಕು ಅಂದಾಗ ಮಾತ್ರ ಬದಲಾವಣೆ ಸಾಧ್ಯವೆಂದರು. ಅಲ್ಲದೇ ಇನ್ನುಮುಂದೆ ಅತ್ಯಾಚಾರ ಹಾಗೂ ದೌರ್ಜ್ಯನ್ಯದಿಂದ ಸಾವು ಸಂಭವಿಸಿದ ಸಂದರ್ಭದಲ್ಲಿ ಸತ್ತವ್ಯಕ್ತಿಯ ದೇಹವನ್ನು ಯಾವುದೇ ಕಾಋಣಕ್ಕೂ ಸುಡಬಾರದು, ಅದನ್ನು ಮಣ್ಣಲ್ಲಿ ಹೂಳಬೇಕು ಇಲ್ಲವಾದಲ್ಲಿ ಸಾಕ್ಷಿ ನಾಸವಾಗುತ್ತೆ ಎಂದರು. ಡಾ|| ಬಿ. ಆರ್. ಅಂಬೇಡ್ಕರ್ ಕಲಾ ಸಂಸ್ಥೆ ಅಧ್ಯಕ್ಷ ಮಂಜುನಾಥ ಕೋಳೂರ ನಿರೂಪಿಸಿದರು, ಸಮತಾ ಸೈನಿಕ ದಳ ಜಿಲ್ಲಾಧ್ಯಕ್ಷ ಜೆ. ಶಂಕರ ಸ್ವಾಗತಿಸಿದರು, ಮಲ್ಲಿಕಾರ್ಜುನ ಹುಲ್ಲೂರ ಕ್ರಾಂತಿ ಗೀತೆ ಹಾಡಿದರು.
0 comments:
Post a Comment