ವಿಧಾನಪರಿಷತ್ ಈಶಾನ್ಯ ಶಿಕ್ಷಕರ ಮತ ಕ್ಷೇತ್ರ ಚುನಾವಣೆಗೆ ಸಂಬಂಧಿಸಿದಂತೆ ಮತದಾನ ಪ್ರಕ್ರಿಯೆ ಜೂ. ೨೦ ರಂದು ಬೆಳಿಗ್ಗೆ ೮ ಗಂಟೆಯಿಂದ ಸಂಜೆ ೦೪ ಗಂಟೆಯವರೆಗೆ ನಡೆಯಲಿದ್ದು, ಕೊಪ್ಪಳ ಜಿಲ್ಲಾ ವ್ಯಾಪ್ತಿಯಲ್ಲಿ ೧೦ ಮತಗಟ್ಟೆಗಳಲ್ಲಿ ೨೫೪೮ ಮತದಾರರು ಮತ ಚಲಾಯಿಸಲಿದ್ದಾರೆ.
ವಿಧಾನಪರಿಷತ್ ಚುನಾವಣೆಗಾಗಿ ಸ್ಥಾಪಿಸಲಾಗಿರುವ ಮತಗಟ್ಟೆ ಹಾಗೂ ಮತದಾರರ ಸಂಖ್ಯೆ ವಿವರ ಇಂತಿದೆ. ಗಂಗಾವತಿಯ ಸರ್ಕಾರಿ ಪಿ.ಯು. ಕಾಲೇಜು ಮತಗಟ್ಟೆಯಾಗಿದ್ದು- ಮತದಾರರ ಸಂಖ್ಯೆ ೫೮೩. ಕಾರಟಗಿಯ ವಿಶೇಷ ತಹಸಿಲ್ದಾರರ ಕಚೇರಿ ಮತಗಟ್ಟೆಯಾಗಿದ್ದು ಮತದಾರರ ಸಂಖ್ಯೆ- ೧೨೯. ಅಳವಂಡಿ ಗ್ರಾ.ಪಂ. ಕಾರ್ಯಾಲಯ, ಮತದಾರರ ಸಂಖ್ಯೆ- ೬೩. ಇರಕಲ್ಲಗಡ ಗ್ರಾ.ಪಂ. ಕಚೇರಿ, ಮತದಾರರ ಸಂಖ್ಯೆ- ೫೨. ಕೊಪ್ಪಳದ ಸಿಡಿಪಿಓ ಕಚೇರಿ, ಮತದಾರರ ಸಂಖ್ಯೆ- ೫೨೫. ಮುನಿರಾಬಾದ್ ಡ್ಯಾಂ ಗ್ರಾ.ಪಂ. ಕಚೇರಿ, ಮತದಾರರ ಸಂಖ್ಯೆ- ೭೧. ಹನುಮಸಾಗರ ಗ್ರಾ.ಪಂ. ಕಚೇರಿ ಮತದಾರರ ಸಂಖ್ಯೆ- ೧೫೦. ಕುಷ್ಟಗಿ ತಹಸಿಲ್ದಾರರ ಕಚೇರಿ, ಮತದಾರರ ಸಂಖ್ಯೆ- ೩೨೮. ಕುಕನೂರು ಗ್ರಾ.ಪಂ. ಕಚೇರಿ, ಮತದಾರರ ಸಂಖ್ಯೆ- ೩೪೨. ಹಾಗೂ ಯಲಬುರ್ಗಾ ತಹಸಿಲ್ದಾರರ ಕಚೇರಿ, ಮತದಾರರ ಸಂಖ್ಯೆ- ೩೦೫.
ವಿಧಾನಪರಿಷತ್ ಈಶಾನ್ಯ ಶಿಕ್ಷಕರ ಮತ ಕ್ಷೇತ್ರ ಚುನಾವಣೆಗೆ ಮತದಾನ ಪ್ರಕ್ರಿಯೆ ಬ್ಯಾಲೆಟ್ ಪೇಪರ್ ಮೂಲಕ ನಡೆಯಲಿದ್ದು, ಬೆಳಿಗ್ಗೆ ೮ ರಿಂದ ಸಂಜೆ ೦೪ ರವರೆಗೆ ನಡೆಯಲಿದೆ. ಮತ ಎಣಿಕೆ ಕಾರ್ಯ ಗುಲಬರ್ಗಾ ಜಿಲ್ಲಾ ಕೇಂದ್ರದಲ್ಲಿ ಜೂ. ೨೪ ರಂದು ನಡೆಯಲಿದೆ
0 comments:
Post a Comment