PLEASE LOGIN TO KANNADANET.COM FOR REGULAR NEWS-UPDATES

 ವಿಧಾನಪರಿಷತ್ ಈಶಾನ್ಯ ಶಿಕ್ಷಕರ ಮತ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಡೆದ ಚುನಾವಣೆಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಶೇ. 66. 60 ರಷ್ಟು ಮತದಾನವಾಗಿದೆ.  ಜಿಲ್ಲೆಯ 2104 ಪುರುಷ, 474 ಮಹಿಳೆ ಸೇರಿದಂತೆ ಒಟ್ಟು 2578 ಮತದಾರರ ಪೈಕಿ 1392-ಪುರುಷ, 325- ಮಹಿಳೆ ಸೇರಿದಂತೆ ಒಟ್ಟು 1717 ಜನ ತಮ್ಮ ಮತ ಚಲಾಯಿಸಿದ್ದಾರೆ.
  ಕೊಪ್ಪಳ ಜಿಲ್ಲೆಯಲ್ಲಿ ನಡೆದ ಚುನಾವಣೆಯಲ್ಲಿ ಮತಗಟ್ಟೆವಾರು ಮತದಾನ ವಿವರ ಇಂತಿದೆ.  ಗಂಗಾವತಿಯ ಸರ್ಕಾರಿ ಪಿ.ಯು
. ಕಾಲೇಜು ಮತಗಟ್ಟೆ- 583 ಮತದಾರರ ಪೈಕಿ, ಮತ ಚಲಾಯಿಸಿದವರು 411 (ಶೇ. 70. 5).  ಕಾರಟಗಿಯ ವಿಶೇಷ ತಹಸಿಲ್ದಾರರ ಕಚೇರಿ ಮತಗಟ್ಟೆ- 129 ಮತದಾರರ ಪೈಕಿ 79 ಜನ ಮತ ಚಲಾಯಿಸಿದ್ದಾರೆ (ಶೇ. 61. 24).  ಅಳವಂಡಿ ಗ್ರಾ.ಪಂ. ಕಾರ್ಯಾಲಯ- 68 ಮತದಾರರ ಪೈಕಿ 49 ಜನ ಮತ ಚಲಾಯಿಸಿದ್ದಾರೆ (ಶೇ. 72. 06).  ಇರಕಲ್ಲಗಡ ಗ್ರಾ.ಪಂ. ಕಚೇರಿ- 52 ಮತದಾರರ ಪೈಕಿ 24 ಜನ ಮತ ಚಲಾಯಿಸಿದ್ದಾರೆ (ಶೇ. 46. 15).  ಕೊಪ್ಪಳದ ಸಿಡಿಪಿಓ ಕಚೇರಿ- 550 ಮತದಾರರ ಪೈಕಿ 376 ಜನ ತಮ್ಮ ಹಕ್ಕು ಚಲಾಯಿಸಿದ್ದಾರೆ (ಶೇ. 68. 36).  ಮುನಿರಾಬಾದ್ ಡ್ಯಾಂ ಗ್ರಾ.ಪಂ. ಕಚೇರಿ- 71 ಮತದಾರರ ಪೈಕಿ 42 ಜನ ಮತ ಚಲಾಯಿಸಿದ್ದಾರೆ (ಶೇ. 59. 15).  ಹನುಮಸಾಗರ ಗ್ರಾ.ಪಂ. ಕಚೇರಿ- 150 ಮತದಾರರ ಪೈಕಿ 101 ಜನ ಮತ ಚಲಾಯಿಸಿದ್ದಾರೆ (ಶೇ. 67. 33).  ಕುಷ್ಟಗಿ ತಹಸಿಲ್ದಾರರ ಕಚೇರಿ- 328 ಮತದಾರರ ಪೈಕಿ 216 ಜನ ಮತ ಚಲಾಯಿಸಿದ್ದಾರೆ (ಶೇ. 65. 85).  ಕುಕನೂರು ಗ್ರಾ.ಪಂ. ಕಚೇರಿ- 342 ಮತದಾರರ ಪೈಕಿ 213 ಜನ ಮತ ಚಲಾಯಿಸಿದ್ದಾರೆ (ಶೇ. 62. 28).  ಹಾಗೂ ಯಲಬುರ್ಗಾ ತಹಸಿಲ್ದಾರರ ಕಚೇರಿ ಮತಗಟ್ಟೆಯಲ್ಲಿ- 305 ಮತದಾರರ ಪೈಕಿ 206 ಜನ ತಮ್ಮ ಹಕ್ಕು ಚಲಾಯಿಸಿದ್ದು ಶೇ. 67. 54 ರಷ್ಟು ಮತದಾನವಾಗಿದೆ .

Advertisement

0 comments:

Post a Comment

 
Top