PLEASE LOGIN TO KANNADANET.COM FOR REGULAR NEWS-UPDATES

 ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಬಾಲ ಭವನ ಸೂಸೈಟಿ ಬೆಂಗಳೂರು ಮತ್ತು ಮಹಿಳಾ ಮತ್ತು ಮಕ್ಕಳ ಅಬಿವೃಧ್ಧಿ ಇಲಾಖೆ, ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಕೊಪ್ಪಳ ತಾಲೂಕಿನ ಭಾಗ್ಯನಗರ ರಸ್ತೆಯಲ್ಲಿರುವ ಬಾಲಕರ ಬಾಲ ಮಂದಿರದಲ್ಲಿ ಜಿಲ್ಲಾ ಮಟ್ಟದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಶುಕ್ರವಾರದಂದು ಯಶಸ್ವಿಯಾಗಿ ಜರುಗಿತು.  
ಮುಖ್ಯ ಅತಿಥಿಗಳಾಗಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾದ ಶೇಖರಗೌಡ ರಾಮತ್ನಾಳರವರು ಆಗಮಿಸಿ ಮಾತನಾಡಿ, ಬೇಸಿಗೆ ಶಿಬಿರ ಎಂದರೆ ಸ್ಥಿತಿವಂತವರ ಮಕ್ಕಳಿಗಾಗಿ ಮಾತ್ರ ಎಂದು ಕೊಂಡಿರುವಂತಹ ಸಂದರ್ಭದಲ್ಲಿ, ಇಲಾಖೆಯು ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗಾಗಿ ಆಯೋಜಿಸಿರುವ ಈ ಬೇಸಿಗೆ ಶಿಬಿರವು ಸಮಯೋಚಿತವಾಗಿದೆ.  ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪಠ್ಯ ಚಟುವಟಿಕೆಗಳೊಂದಿಗೆ ಪಠ್ಯೇತರ ಚಟುವಟಿಕೆಗಳು ಅವಶ್ಯಕವಾಗಿದೆ.ಈ ರೀತಿಯ ಶಿಬಿರಗಳು ಇನ್ನು ಹೆಚ್ಚಾಗಿ ಆಯೋಜಿಸಿ ಮಕ್ಕಳನ್ನು ಕ್ರೀಯಾಶಿಲರನ್ನಾಗಿಸಬೇಕೆಂದು ತಿಳಿಸಿದರು. ನಂತರ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ಮಹಾಲಿಂಗಪ್ಪ ದೋಟಿಹಾಳರವರು ಮಕ್ಕಳಿಗೆ ಅವರ ಹಕ್ಕುಗಳಾದ ಅಭಿವೃದ್ಧಿ ಮತ್ತು ವಿಕಾಸಹೊಂದುವ ಹಾಗೂ ಭಾಗವಹಿಸುವ ಹಕ್ಕುಗಳನ್ನು ಅವರಿಗೆ ದೂರಕಿಸಿಕೂಡಲು ಈ ರೀತಿಯ ಬೇಸಿಗೆ ಶಿಬಿರಗಳು ಅತ್ಯವಶ್ಯಕವಾಗಿವೆ ಎಂದರು. ನಂತರ ಇಂದಿರಾ ಭಾವಿಕಟ್ಟಿಯವರು ಮಾತನಾಡಿ, ಶಿಕ್ಷಣದಿಂದಲೇ ಅಭಿವೃದ್ಧಿ ಸಾಧ್ಯ ಆದ್ದರಿಂದ ಮಕ್ಕಳು ಉತ್ತಮ ಶಿಕ್ಷಣವನ್ನು ಪಡೆಯುವುದು ಅವಶ್ಯಕ. ಅಲ್ಲದೇ ಪಠೇತರ ಚಟುವಟಿಕೆಗಳು ಮಕ್ಕಳ ಬೆಳವಣಿಗೆಗೆ ಪೂರಕ ವಾತಾವರಣವನ್ನು ಕಲ್ಪಿಸುತ್ತದೆ. ಮಕ್ಕಳ ಸರ್ವತೋಮಖ ಬೆಳವಣಿಗೆಗಾಗಿ ಸಂಸ್ಥೆಯು ಇಲಾಖೆಗೆ ಅಗತ್ಯ ನೆರವನ್ನು ನೀಡುವುದಾಗಿ ತಿಳಿಸಿದರು. 
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಮತ್ತು ಮಕ್ಕಳ ಅಬಿವೃದ್ಧಿ ಇಲಾಖೆ ಉಪನಿರ್ದೇಶಕರಾದ ವಸಂತಪ್ರೇಮಾ ಅವರು ಮಾತನಾಡು, ಜಿಲ್ಲಾ ಮಟ್ಟದ ಬೇಸಿಗೆ ಶಿಬಿರವನ್ನು ಆಯೋಜಿಸಿದ್ದು, ಈ ಶಿಬಿರದ ಮುಖ್ಯ ಉದ್ದೇಶ ಎಂದರೆ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅವರನ್ನು ಉತ್ತೇಜಿಸಿ, ಕೌಶಲ್ಯವನ್ನು ವೃದ್ಧಿಸುವುದಾಗಿದೆ. ಈ ಶಿಬಿರದಲ್ಲಿ ಮಕ್ಕಳು ಕರಾಟೆ, ನೃತ್ಯ, ಗೊಂಬೆ ತಯಾರಿಕೆ ಮತ್ತು ವೈಚಾರಿಕ ಮನೋಭಾವನೆಯನ್ನು ಬೆಳಸಿಕೊಂಡಿದ್ದು ಅದು ಮುಂದೊಂದು ದಿನ ಜೀವನದಲ್ಲಿ ಉಪಯೋಗವಾದರೇ ಈ ಶಿಬಿರದ ಸಾರ್ಥಕ್ಯವಾದಂತೆ ಎಂದು ತಿಳಿಸಿದರು.
ಸಿಂಧು ಯಲಿಗಾರ ಸ್ವಾಗತಿಸಿದರು, ರವಿಕುಮಾರ ಪವಾರ ನಿರೂಪಿಸಿದರು, ಇಮಾಲಪ್ಪರವರು ವಂದಿಸಿದರು. ಈ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಬಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಬಾಲಕರ ಬಾಲ ಮಂದಿರ ಮತ್ತು ವಂದೇ ಮಾತರಂ ಶಿಕ್ಷಣ ಸೇವಾ ಸಂಸ್ಥೆಯ ಸಿಬ್ಬಂದಿಗಳು ಹಾಗೂ ಮಕ್ಕಳು ಭಾಗವಹಿಸಿದ್ದರು.

Advertisement

0 comments:

Post a Comment

 
Top