೩೦ ವರ್ಷಗಳ ಹಳೇ ಸಮಸ್ಯೆ ಆಟೋನಗರ ಯೋಜನೆ ಬಗ್ಗೆ ದಿನಾಂಕ ೨೩-೦೫-೨೦೧೪ ರಂದು ನಗರಸಭೆಯಲ್ಲಿ ಸಭೆ ನಡೆಸಿ ಉಚ್ಛ ನ್ಯಾಯಾಲಯದ ಆದೇಶದಂತೆ ಆಟೋನಗರ ಅಭಿವೃದ್ಧಿಪಡಿಸುವ ತೀರ್ಮಾನ ತೆಗೆದುಕೊಂಡ ಜಿಲ್ಲಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ಭಾರದ್ವಾಜ್ ತಿಳಿಸಿದ್ದಾರೆ.
೧೯೮೪ ರಲ್ಲಿ ಪ್ರಾರಂಭವಾದ ಈ ಯೋಜನೆ ೧೯೯೨ ರಲ್ಲಿ ಫಲಾನುಭವಿಗಳನ್ನು ಗುರುತಿಸಿ ಮಂಜೂರು ಮಾಡಿ ಹಣ ಸಂದಾಯಿಸಕೊಳ್ಳಲಾಗಿದೆ. ಮೂಲಭೂತ ಸೌಕರ್ಯಗಳಿಲ್ಲದೇ ಫಲಾನುಭವಿಗಳು ಆಟೋನಗರಕ್ಕೆ ಸ್ಥಳಾಂತರಿಸಲು ಆಗಲಿಲ್ಲ. ನಂತರದ ದಿನಗಳಲ್ಲಿ ಬಂದ ಸರ್ವಾಧಿಕಾರಿ ಜಿಲ್ಲಾಧಿಕಾರಿ ತುಳಸಿಮದ್ದಿನೇನಿ ಯೋಜನೆ ರದ್ದಿಗಾಗಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿದರು. ಸದಸ್ಯರು ಉಚ್ಛ ನ್ಯಾಯಾಲಯದಲ್ಲಿ ದಾವೆ ಹೂಡಿದ ಪರಿಣಾಮ ನ್ಯಾಯಾಲಯದ ಆದೇಶದಂತೆ ಆಟೋನಗರವನ್ನು ಅಭಿವೃದ್ಧಿಪಡಿಸಿ ಹಳೇ ಸದಸ್ಯರಿಗೆ ನಿವೇಶನ ಹಂಚಲು ತೀರ್ಮಾನವಾಗಿದೆ. ಇದು ಆಟೋನಗರದ ಸದಸ್ಯರ ಹೋರಾಟಕ್ಕೆ ಗೆಲುವಾಗಿದೆ ಎಂದಿದ್ದಾರೆ.

ನಗರಸಭೆ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಆದೇಶದಂತೆ ಒಂದು ತಿಂಗಳ ಒಳಗಾಗಿ ಆಟೋನಗರ ನಿವೇಶನಗಳನ್ನು ಸದಸ್ಯರಿಗೆ ನೋಂದಾಯಿಸಬೇಕೆಂದು ಭಾರದ್ವಾಜ್ ಒತ್ತಾಯಿಸಿದ್ದಾರೆ.
0 comments:
Post a Comment