PLEASE LOGIN TO KANNADANET.COM FOR REGULAR NEWS-UPDATES

 .
ಮಾನವನಿಗೆ ದೈಹಿಕ ರೋಗಗಳಿಗಿಮತ ಇಂದು ಮನರೋಗ ತುಂಬಾ ಜಾಸ್ತಿಯಾಗುತ್ತಿರುವದು ಶತಮಾನದ ಆತಂಕಕಾರಿ ಸಂಗತಿ ಎಂದು ಖ್ಯಾತ ಶಿಕ್ಷಣ ತಜ್ಞ ಟಿ. ವಿ. ಮಾಗಳದ ಆತಂಕವ್ಯಕ್ತಪಡಿಸಿದರು.
ಅವರು ನಗರದ ಕಿನ್ನಾಳ ರಸ್ತೆಯ ಬಸವ ಮಂಟಪದ ಆವರಣದಲ್ಲಿ ರಾಷ್ಟ್ರೀಯ ಬಸವದಳ, ಲಿಂಗಾಯತ ಧರ್ಮ ಮಹಾಸಭಾ ಹಾಗೂ ಅಕ್ಕನಾಗಲಾಂಬಿಕಾ ಮಹಿಳಾ ಗಣಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ೮೮೧ನೇ ಬಸವ ಜಯಂತಿಯ ನಿಮಿತ್ಯ ಏರ್ಪಡಿಸಿರುವ ಬಸವತತ್ವ ಕಮ್ಮಟದ ಮೂರನೆ ದಿನದಂದು ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಬಸವಣ್ಣ ೧೨ ನೇ ಶತಮಾನದಲ್ಲಿ ಮಾಡಿದ ಕ್ರಾಂತಿಯ ದ್ಯೋತಕವಾಗಿ ಪಂಚಮಹಾಸೂತಕಗಳಿಮದ ಬಂಧಿಯಾಗಿದ್ದ ಮಹಿಳೆಗೂ ಸ್ವಾತಂತ್ರ್ಯ ಲಭಿಸಿತ್ತು, ಆ ಕಾರಣದಿಂದಲೇ ವಿಶ್ವದಲ್ಲೇ ಪ್ರಥಮಬಾರಿಗೆ ಒಂದು ಶತಮಾನದಲ್ಲಿ ೩೬ ಮಹಾನ ದಾರ್ಶನಿಕ ಮಹಿಳಾ ಕವಿಗಳನ್ನು (ವಚನಕಾರ್ತಿಯರನ್ನು) ಕಂಡದ್ದು ಕೇವಲ ಭಾರತ ಮಾತ್ರ ಎಂದ ಅವರು, ೩೬ ಮಹಿಳೆಯರೂ ಸಹ ವಿಭಿನ್ನವಾದ ಹಾಗೂ ಕೆಳಸ್ಥರದಿಂದ ಬಂದ ಮೇಧಾವಿಗಳು, ಅವರ ವಚನಗಳು ಇಂದಿಗೂ ಆದರ್ಶಪ್ರಾಯ. 
ಬಸವಣ್ಣನವರನ್ನ ನಮ್ಮ ಪಾಲಿಗೆ ಉಳಿಸಿಕೊಟ್ಟಿದ್ದು ಅಕ್ಕ ನಾಗಲಾಂಬಿಕೆ ಮತ್ತು ಉಳಿವಿ ಚನ್ನಬಸವಣ್ಣನವರು, ಈಗ ಸಿಕ್ಕಿರುವ ವಚನಗಳಿಗಿಂತ ಅದೆಷ್ಟುಪಟ್ಟು ನಾಶಮಾಡಲಾಗಿದೆ, ಶರಣ ಸಂಸ್ಕೃತಿ ಮುಂದೆ ತಂದೊಡ್ಡಬಹುದಾದ ಆತಂಕವನ್ನು ಅಂದೇ ಊಹಿಸಿಕೊಮಡಿದ್ದರು, ಈಗಲಾದರೂ ನಾವು ಬಸವಣ್ಣ ಹಾಗೂ ಶರಣರ ಮಾರ್ಗದರ್ಶನದಂತೆ ಬದುಕು ಕಟ್ಟಿಕೊಳ್ಳಬೇಕು ಇಲ್ಲವಾದರೆ ನಾಶ ಶತಸಿದ್ಧ ಎಂದವರು ಅಭಿಪ್ರಾಯಪಟ್ಟರು. 
ದಾನ ಸಂಸ್ಕೃತಿ ಸರಿಸಿ ದಾಸೋಹ ಸಂಸ್ಕೃತಿ ಬೆಳೆಸಿದ ಬಸವಣ್ಣ ಕಟ್ಟಿದ ಅನುಭವ ಮಂಟಪವೊಂದು ಆದರ್ಶ ವಿಶ್ವವಿದ್ಯಾಲಯವಿದ್ದಂತೆ, ಅಲ್ಲಿ ಪದವಿ ಪಡೆದವರು ಅನಕ್ಷರಸ್ಥರು, ಆದರೆ ಅವರು ಕೊಟ್ಟ ವಚನ ಸಾಹಿತ್ಯವೇ ಒಂದು ಮಹಾನ್ ಕೊಡುಗೆ, ಅನುಭವ ಮಂಟಪ ಎಲ್ಲರಿಗೂ ಅವಕಾಶ ನೀಡಿದ ಪಾರ್ಲಿಮೆಂಟ್ ಆಗಿತ್ತು ಅಲ್ಲಿ ಬಿಸಿಗಿಂತ ಬೆಳಕು ಜಾಸ್ತಿ ಇರುತ್ತಿತ್ತು, ಆದರೆ ಇಂದಿನ ಪಾರ್ಲಿಮೆಂಟ್‌ನಲ್ಲಿ ಬೆಳಕಿಗಿಂತ ಬಿಸಿ ತುಂಬಾನೆ ಜಾಸ್ತಿಯಾಗಿ, ತಾಪಮಾನ ಜನರಿಗೆ ನೀರು ಇಳಿಸುತ್ತಿದೆ ಎಂದವರು ಕುಟುಕಿಯಾಡಿದರು. ಬಸವಣ್ಣನ ಕುರಿತು ಜಾಗೃತಿ ಮೂಡಿರುವದು ಸಂತೋಷ ಆದರೆ, ಬಸವಣ್ಣನನ್ನು ಮತ್ತು ಅವರ ಆದರ್ಶಗಳನ್ನು ಅರ್ಥಮಾಡಿಕೊಳ್ಳುತ್ತಿಲ್ಲ ಎಂಬುದು ಸೋಜಿಗದ ಸಂಗತಿ ಎಂದರು. 
ಸಮಾರಂಭದ ಅಧ್ಯಕ್ಷತೆಯನ್ನು ಕೂಡಲಸಂಗಮ ಬಸವಧರ್ಮ ಪೀಠದ ಗಣನಾಯಕ ಕೆ. ವೀರಣ್ಣ ಲಿಂಗಾಯತ್ ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಪಿಎಸೈ ಬಸವರಾಜ ಗುಮಗೇರಾ, ರ್ಶರೀನಿವಾಸ ರಾಠೋಡ್, ದಲಾಲಿ ವರ್ತಕ ಪರಮೇಶ ಚಕ್ಕಿ ಇತರರು ವೇದಿಕೆ ಮೇಲಿದ್ದರು.
ಈಶ್ವರ ಲಿಂಗಾಯತ್ ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು. ಕೆ. ವಿಜಯಲಕ್ಷ್ಮೀ ಈಶ್ವರ ಲಿಂಗಾಯತ್ ರವರು ನೆನಹು ಎಂಬ ಗಾಯನ ಹಾಗೂ ಬಸವತತ್ವ ತರಬೇತಿ ಕಮ್ಮಟದ ಮೂರನೆ ದಿನದ ಕಾರ್ಯಕ್ರಮ ನಡೆಸಿಕೊಟ್ಟರು. ಶಂಕ್ರಪ್ಪ ಗೋಂದಕರ್ ಧರ್ಮಶಾಸ್ತ್ರ ನಿಷ್ಠೆ ಕುರಿತು ಮಾತನಾಡಿದರು, ನಿವೃತ್ತ ಉಪನ್ಯಾಸಕ ಈಶಪ್ರಭು ಅಂಗಡಿ ಕಾಯಕ ದಾಸೋಹ ನಿಷ್ಠೆ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಯ್ದಕ್ಕಿ ಲಕ್ಕಮ್ಮ ಹಾಗೂ ಮಾರಯ್ಯನವರ ಪ್ರಸಂಗ ಎಂಬ ರೂಪಕವನ್ನು ಕೆ, ವಿಜಯಲಕ್ಷ್ಮೀಯವರ ಸಾರಥ್ಯದಲ್ಲಿ ಮನಮೋಹಕವಾಗಿ ಅಭಿನಯಿಸಿದರು.
ಸತೀಶ ಮಂಗಳೂರು ಸ್ವಾಗತಿಸಿದರು, ಸಂಗಣ್ಣ ಮೇಟಿ ಹಾಗೂ ಮಂಜುನಾಥ ಹಾದಿಮನಿ ಕಾರ್ಯಕ್ರಮ ನಿರೂಪಿಸಿದರು, ಕೊನೆಯಲ್ಲಿ ನೀಲಪ್ಪ ಪಡತಪ್ಪನವರ ವಂದಿಸಿದರು.

Advertisement

0 comments:

Post a Comment

 
Top