-ಕೊಪ್ಪಳ ಜಿಲ್ಲೆ ಶಹಪುರ ಗ್ರಾಮದಲ್ಲಿ ಶ್ರೀ ವಿಠ್ಠಲ ಗೋಂಧಳಿ ಸಮುದಾಯದ ಶ್ರೀ ರುಕ್ಮಿಣಿ ಸಮೇತ ಶ್ರೀ ಪಾಂಡುರಂಗ ದೇವಸ್ಥಾನದಲ್ಲಿ ಇದೇ ಮೇ ೧೨ರಿಂದ ೩ ದಿನಗಳ ಕಾಲ ಶ್ರೀಹರಿ ಪಾಂಡುರಂಗಸ್ವಾಮಿಯ ಸಪ್ತಾಹ ಆಚರಿಸಲಾಗುತ್ತಿದೆ.
ಮೇ ೧೨ರಂದು ಸೋಮವಾರ ಸಂಜೆ ೪ ಗಂಟೆಗೆ ಪೋತಿ ಸ್ಥಾಪನೆ, ಸಂಜೆ ೫ ಗಂಟೆಯಿಂದ ವಾರಕರಿ ಸಂತರಿಂದ ಪ್ರವಚನ ಮತ್ತು ನಾಮ ಜಪ. ಸಂಜೆ ೬-೩೦ರಿಂದ ಕೀರ್ತನೆ,ಬಳಿಕ ಮಹಾಪ್ರಸಾದ ಇರುತ್ತದೆ. ಮೇ ೧೩ರಂದು ಪ್ರಾತಃಕಾಲ ೫ ಗಂಟೆಗೆ ಕಾಕಡಾರತಿ, ಮರಾಠಿ ಅಭಂಗಗಳ ಪಾವಲ್ ಭಜನೆ, ಹರಿದಾಸರ ಕೀರ್ತನೆ, ಬೆಳಿಗ್ಗೆ ೧೧ರಿಂದ ಸಂತರಿಂದ ಪ್ರವಚನ, ಮಧ್ಯಾಹ್ನ ಪ್ರಸಾದ ವ್ಯವಸ್ಥೆ ಇರುತ್ತದೆ. ಸಂಜೆ ೫-೩೦ರಿಂದ ಹರಿದಾಸ ಪರಂಪರೆಯ ಸಂತರಿಂದ ಪ್ರವಚನ, ನಾಮಜಪ. ೬-೩೦ರಿಂದ ಹರಿದಾಸ ಕೀರ್ತನೆ ನಡೆಯುವುದು. ಮೇ ೧೪ರಂದು ಬೆಳಿಗ್ಗೆ ೫ ಗಂಟೆಗೆ ಕಾಕಡಾರತಿ, ೮ ಗಂಟೆಗೆ ದಿಂಡಿಯೊಂದಿಗೆ ಗ್ರಾಮ ಪ್ರದಕ್ಷಿಣೆ, ಮಹಾಮಂಗಳಾರತಿ ನಂತರ ಮಹಾಪ್ರಸಾದ ಇರುತ್ತದೆ.
ಈ ಸಪ್ತಾಹ ಆಚರಣೆಗೆ ಕೊಪ್ಪಳ ಜಿಲ್ಲೆಯ ಕುಷ್ಟಗಿ, ಕೊಪ್ಪಳ, ಸಿಂದೋಗಿ, ಹಾವೇರಿ ಜಿಲ್ಲೆಯ ಲಕ್ಷ್ಮೇಶ್ವರ, ಬಳ್ಳಾರಿ ಜಿಲ್ಲೆಯ ಹಂಪಾಪಟ್ಟಣ, ಗದಗ ಜಿಲ್ಲೆಯ ಮುಂಡರಿಗಿ ಸೇರಿದಂತೆ ಇತರೆ ಭಾಗಗಳಿಂದ ಹರಿದಾಸ ಪರಂಪರೆಯ ಸಂತರು, ವಾರಕರಿ ಸಂಪ್ರದಾಯದ ಸದ್ಭಕ್ತರು ಭಾಗವಹಿಸಲಿದ್ದಾರೆ. ಸರ್ವರೂ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀಹರಿ ವಿಠ್ಠಲನ ಕೃಪೆಗೆ ಪಾತ್ರರಾಗುವಂತೆ ಗೋಂಧಳಿ ಸಮಾಜದ ಹಿರಿಯರಾದ ಕೋಳೂರಪ್ಪ ಗೋಗರೆ, ವೀರಣ್ಣ ಜೋಷಿ, ಫಕ್ಕಿರಪ್ಪ ನಾಯ್ಕಲ್, ಲಂಕೆಪ್ಪ ನಾಯ್ಕಲ್, ಯುವ ಮುಖಂಡರಾದ ಡಾ.ದಯಾನಂದ್ ಕಿನ್ನಾಳ್, ಎಂ.ಬಿ. ಜೋಷಿ, ಶಂಕರ್ ಸಿಂಧೆ, ಮಲ್ಲೇಶ್ ಪರಸಪ್ಪ ಗೋಗರೆ, ಲಕ್ಷ್ಮಣ್ ವಾಘಮೋರೆ, ದುರ್ಗೇಶ್ ವಾಘಮೋರೆ, ಮಂಜುನಾಥ್ ಶೆಟ್ಟೆಪ್ಪ ಗೋಗರೆ, ಮುನೇಶ್ ಹನುಮಂತಪ್ಪ ಜೋಷಿ, ಭೀಮಪ್ಪ ವಾಘಮೋರೆ, ಫಕ್ಕಿರಪ್ಪ ಗ್ಯಾನಪ್ಪ ಗೋಗರೆ, ಸಂತರಾದ ಯಮುನಪ್ಪ ನಾಯ್ಕಲ್ ಕೋರಿದ್ದಾರೆ.
0 comments:
Post a Comment