PLEASE LOGIN TO KANNADANET.COM FOR REGULAR NEWS-UPDATES

 ನಗರದ ಶ್ರೀಗವಿಮಠದಲ್ಲಿ ದಿನಾಂಕ ೨೮-೦೫-೨೦೧೪ ಬುಧವಾರ ಸಂಜೆ ೬.೩೦ ಕ್ಕೆ ಶ್ರೀಮಠದ ಕೆರೆಯ ದಡದಲ್ಲಿ ೫೭ ನೇ ಬೆಳಕಿನೆಡೆಗೆ  ಮಾಸಿಕ ಕಾರ್ಯಕ್ರಮ ಜರುಗಿತು. 
                        ಪ್ರವಚನಕಾರರಾಗಿ ಯಳವಂತಗಿಯ ಮಾತೋಶ್ರೀ
ಶ್ರೀಆನಂದಮಯಿ ತಾಯಿಯವರು ಆಗಮಿಸಿ ಮಾತನಾಡಿ ಜಗದ ಜೀವಿಗಳಿಗೆ ಜನ್ಮ ಕೊಟ್ಟು ಅಭ್ಯುದಯಕ್ಕೆ ಕಾರಣನಾದವನು ಪರಮಾತ್ಮ.  ಆತನಿಂದ ಸೃಷ್ಟಿಯಾದ  ಮಾನವನ ಜನ್ಮವು ಎಂಬತ್ನಾಲ್ಕನೆಯ ಜನ್ಮವಾಗಿದೆ. ಆ ಜನ್ಮವನ್ನು ಇಂದು ಸಾರ್ಥಕಮಾಡಿಕೊಳ್ಳಲು  ಧರ್ಮ, ನ್ಯಾಯ, ನೀತಿ, ಸದ್ಗುಣ, ಸದ್ಭಕ್ತಿ, ಶ್ರದ್ಧೆ ಇವೆಲ್ಲವುಗಳನ್ನು  ನಾವು ರೂಡಿಸಿಕೊಳ್ಳುವ ಅಗತ್ಯವಿದೆಯೆಂದರು.  ಅಧ್ಯಕ್ಷತೆಯನ್ನು ಕೊಪ್ಪಳದ ಶಿವಪ್ಪ ಶೆಟ್ಟರ್  ವಹಿಸಿ ಮಾತನಾಡಿದರು.  ಹೊಂಬಳದ ಶ್ರೀಬಸವರಾಜ ಬನ್ನಿಕೊಪ್ಪ ಇವರಿಂದ ಸಂಗೀತ ಸೇವೆ ಜರುಗಿತು.  ಭಕ್ತಿ ಸೇವೆ ಶ್ರೀ ಲಿಂಗಯ್ಯ ವೀರಭದ್ರಯ್ಯ ಕಲ್ಮಠ ವಹಿಸಿದ್ದರು

Advertisement

0 comments:

Post a Comment

 
Top