ಕೊಪ್ಪಳ ತಾಲೂಕಿನ ಕೂಕನಪಳ್ಳಿ ಗ್ರಾಮದಲ್ಲಿ ಪ್ರತಿ ಶುಕ್ರವಾರ ನಡೆಯುವ ಕುರಿ ಮತ್ತು ದನದ ಸಂತೆಯನ್ನು ಸಾರ್ವಜನಿಕ ಹಿತದೃಷ್ಠಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಕರ್ನಾಟಕ ಪೊಲೀಸ್ ಅಧಿನಿಯಮ ೧೯೬೩ ಕಲಂ ೩೫ ರ ಪ್ರಕಾರ ನಿಷೇದಾಜ್ಞೆಯನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿ ಕೆ.ಪಿ.ಮೋಹನರಾಜ್ ರಾಜ್ ಅವರು ಆದೇಶ ಹೊರಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಕೂಕನಪಳ್ಳಿ ಗ್ರಾಮದಲ್ಲಿ ಪ್ರತಿ ಶುಕ್ರವಾರ ಕುರಿ ಮತ್ತು ದನದ ಸಂತೆ ನಡೆಯುತ್ತಿದ್ದು, ಈ ಸಂತೆಗೆ ಸುಮಾರು ೧೦೦ ಕಿ.ಮೀ. ದೂರದಿಂದ ಜನರು ಬರುತ್ತಿದ್ದು, ಸುಮಾರು ೧೫೦೦೦ ರಿಂದ ೨೦೦೦೦ ಜನರು ಸೇರುತ್ತಾರೆ. ಅಲ್ಲದೇ ವಣಬಳ್ಳಾರಿ ಹಾಗೂ ಕೂಕನಪಳ್ಳಿ ಗ್ರಾಮದ ಗ್ರಾಮಸ್ಥರಿಗೆ ರಾಜಕೀಯ ವೈಶಮ್ಯ ಉಂಟಾಗಿದ್ದು, ಇದರಿಂದಾಗಿ ಶುಕ್ರವಾರ ನಡೆಯುವ ಕುರಿ ಮತ್ತು ದನದ ಸಂತೆಯಲ್ಲಿ ಜಗಳವಾಗಿ ಸಾರ್ವಜನಿಕ ಆಸ್ತಿ-ಪಾಸ್ತಿ ಹಾಗೂ ಜೀವ ಹಾನಿಯಾಗುವ ಸಂಭವವಿರುವುದರಿಂದ ೧೫ ದಿನಗಳ ಕಾಲ ಈ ಸಂತೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಕೆ.ಪಿ.ಮೋಹನರಾಜ್ ಅವರು ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.
0 comments:
Post a Comment