ಸಮೀಪದ ಮಾದಿನೂರು ಗ್ರಾ.ಪಂ. ವ್ಯಾಪ್ತಿಯ ದೇವಲಾಪೂರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮೇಲೆ ವಿದ್ಯುತ್ ತಂತಿ ಆಯ್ದು ಹೋಗಿದ್ದು ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಆತಂಕಗೊಂಡಿದ್ದಾರೆ.
ಪ್ರಸಕ್ತ ಶೈಕ್ಷಣಿಕ ವರ್ಷ ಆರಂಭಗೊಳ್ಳುತ್ತಿದ್ದು ಈ ಹಿಂದೆ ಬೇಸಿಗೆ ರಜೆಯಲ್ಲಿಯೇ ಇಲ್ಲಿನ ವಿದ್ಯುತ್ ತಂತಿಗಳನ್ನು ತೆರವುಗೊಳಿಸುವಂತೆ ಮನವಿ ಮಾಡಲಾಗಿದೆ. ಶಾಲಾ ಆವರಣದಲ್ಲಿ ಮಕ್ಕಳು ಆಟವಾಡುವ ಸಂದರ್ಭ ಅಥವಾ ಇತರೆ ಸಂದರ್ಭಗಳಲ್ಲಿ ಅವಘಡ ಸಂಭವಿಸುವ ಆತಂಕ ಜನತೆಯದ್ದಾಗಿದೆ. ಶಾಲಾ ಆವರಣದಲ್ಲಿ ಗಿಡಮರಗಳಿದ್ದು ವಿದ್ಯುತ್ ತಂತಿ ಗಿಡಕ್ಕೆ ತಾಗಿದಲ್ಲಿ ಬಾರಿ ಅನಾಹುತ ಸಂಭವಿಸಬಹುದಾಗಿದೆ. ಈ ಕುರಿತು ಹಲವು ಬಾರಿ ಜೆಸ್ಕಾಂ ಅಧಿಕಾರಿಗಳಿಗೆ ಮಾದಿನೂರು ಗ್ರಾ.ಪಂ. ಮೂಲಕ ಸಾಕಷ್ಟು ಲಿಖಿತ ಹಾಗೂ ಮೌಖಿಕವಾಗಿ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲವೆಂದು ಸ್ಥಳೀಯ ನಾಗರಿಕರು ದೂರಿದ್ದಾರೆ. ಅಲ್ಲದೇ ಅಧಿಕಾರಿಗಳು ಅವಘಡ ಸಂಬಂಧಿಸದ ಮೇಲೆ ಸ್ಥಳಕ್ಕೆ ಆಗಮಿಸುವರೆಂದು ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂತಹ ಅಹಿತಕರ ಘಟನೆ ನಡೆದಲ್ಲಿ ಜೆಸ್ಕಾಂ ಅಧಿಕಾರಿಗಳೇ ನೇರ ಹೊಣೆಯಾಗಲಿದೆ ಎಂದು ಮಾದಿನೂರು ಗ್ರಾ.ಪಂ. ಅಧ್ಯಕ್ಷರಾದ ಗೌರಮ್ಮ ಚಂಡೂರು, ಉಪಾಧ್ಯಕ್ಷರಾದ ಪರಸಪ್ಪ ರಾಠೋಡ, ಸದಸ್ಯರಾದ ವಿರುಪಾಕ್ಷಗೌಡ ಇಳಿಗೇರ ಇತರರು ತಿಳಿಸಿದ್ದಾರೆ.
0 comments:
Post a Comment