ಕೊಪ್ಪಳ-೨೭, ನಗರದ ಜಿಲ್ಲಾ ಪಶು ಚಿಕಿತ್ಸಾಲಯ ಆವರಣದಲ್ಲಿ ಜಿಲ್ಲಾ ಸಂಚಾರಿ ಪಶು ಚಿಕಿತ್ಸಾಲಯ ವಾಹನವನ್ನು ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರು ಲೋಕಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಪ್ರಸನ್ನ ಗಡಾದ, ಈಶಪ್ಪ ಮಾದಿನೂರು, ಇಬ್ರಾಹಿಂ ಅಡ್ಡೇವಾಲೆ, ಅಮ್ಜದ ಪಟೇಲ, ಯಮನೂರಪ್ಪ ನಾಯಕ ವಿರುಪಾಕ್ಷಗೌಡ ಬಿಸರಳ್ಳಿ, ಪಶು ವೈಧ್ಯಧಿಕಾರಿಗಳಾದ ಡಾ|| ಸಾಲಿ, ಇನ್ನೂ ಅನೇಕರು ಉಪಸ್ಥಿತರಿದ್ದರು
ಓವರ್ ಹೆಡ್ ಕುಡಿಯುವ ನೀರಿನ ಟ್ಯಾಂಕ್‌ನ ಕಾಮಗಾರಿಗೆ ಶಾಸಕರಿಂದ ಭೂಮಿ ಪೂಜೆ
ಕೊಪ್ಪಳ-೨೭, ಮಾದಿನೂರು ಗ್ರಾಮದಲ್ಲಿ ಎನ್.ಆರ್.ಡಬ್ಲ್ಯೂ.ಪಿ ಯೋಜನೆಯ ಅನುದಾನದ ಅಡಿಯಲ್ಲಿ ರೂ.೩೫ ಲಕ್ಷದ, ೦೧ ಲಕ್ಷ ನೀರಿನ ಸಾಮರ್ಥವುಳ್ಳ ಓವರ್ ಹೆಡ್ ಕುಡಿಯುವ ನೀರಿನ ಟ್ಯಾಂಕ್‌ಗೆ ಕೊಪ್ಪಳದ ಜನಪ್ರಿಯ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರು ಭೂಮಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಸದಸ್ಯ ವನೀತಾ ಗಡಾದ, ಪ್ರಸನ್ನ ಗಡಾದ, ಅಮರೇಶ ಉಪಲಾಪೂರು, ಮಾದಿನೂರು ಗ್ರಾಮ ಪಂಚಾಯತಿಯ
ಅಧ್ಯಕ್ಷರು, ಸದಸ್ಯರು, ಹಾಗೂ ಗ್ರಾಮದ ಗುರು-ಹಿರಿಯರು ಉಪಸ್ಥಿತರಿದ್ದರು.
ಮಾದಿನೂರು ಗ್ರಾಮದಲ್ಲಿ ಎ.ಆರ್.ಓ ಫಿಲ್ಟರ್ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಶಾಸಕರಿಂದ ಚಾಲನೆ.
ಕೊಪ್ಪಳ-೨೭, ಮಾದಿನೂರು ಗ್ರಾಮದಲ್ಲಿ ೨೦೧೩-೧೪ ಹಣಕಾಸಿನ ಶಾಸಕರ ಅನುದಾನದ ಅಡಿಯಲ್ಲಿ ಸುಮಾರು ಅಂದಾಜು ರೂ. ೮ ಲಕ್ಷದ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಕೊಪ್ಪಳ ನಗರದ ಜನಪ್ರಿಯ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಸದಸ್ಯ ವನೀತಾ ಗಡಾದ, ಪ್ರಸನ್ನ ಗಡಾದ, ಅಮರೇಶ ಉಪಲಾಪೂರು, ಮಾದಿನೂರು ಗ್ರಾಮ ಪಂಚಾಯತಿಯ ಅಧ್ಯಕ್ಷರು, ಸದಸ್ಯರು, ಹಾಗೂ ಗ್ರಾಮದ ಗುರು-ಹಿರಿಯರು ಉಪಸ್ಥಿತರಿದ್ದರು.
.
0 comments:
Post a Comment