PLEASE LOGIN TO KANNADANET.COM FOR REGULAR NEWS-UPDATES

 ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಭಾವಚಿತ್ರವಿರುವ ಮತದಾರರ ಗುರುತಿನ ಚೀಟಿ ಇಲ್ಲದೇ ಇರುವವರು, ತಮ್ಮ ಗುರುತು ಸಾಬೀತಿಗೆ ಚುನಾವಣಾ ಆಯೋಗ ಪರ್ಯಾಯವಾಗಿ ೧೧ ದಾಖಲೆಗಳನ್ನು ಸೂಚಿಸಿದ್ದು, ಈ ೧೧ ದಾಖಲೆಗಳಲ್ಲಿ ಯಾವುದಾದರೂ ಒಂದು ದಾಖಲೆ ಇದ್ದರೆ ಸಾಕು, ಮತದಾರರು ತಮ್ಮ ಮತ ಚಲಾಯಿಸಬಹುದಾಗಿದೆ.
  ಲೋಕಸಭೆ ಚುನಾವಣೆಗೆ ಏ. ೧೭ ರಂದು ಬೆಳಿಗ್ಗೆ ೭ ಗಂಟೆಯಿಂದ ಸಂಜೆ ೬ ಗಂಟೆಯವರೆಗೆ ಮತದಾನ ಮಾಡಲು ಅವಧಿ ನಿಗದಿಪಡಿಸಲಾಗಿದ್ದು, ಮತದಾರರು ತಮ್ಮ ಹಕ್ಕು ಚಲಾಯಿಸಲು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಕಡ್ಡಾಯವಾಗಿ ಇರಬೇಕು. ಬೂತ್ ಮಟ್ಟದ ಅಧಿಕಾರಿಗಳು ನೀಡುವ ಮತದಾರರ ಗುರುತಿನ ಚೀಟಿ ಹೊಂದಿದ್ದರೆ ಸಾಕು, ಇತರೆ ಯಾವುದೇ ದಾಖಲೆಗಳಿಲ್ಲದೇ ಇದ್ದರೂ ತಮ್ಮ ಮತವನ್ನು ಚಲಾಯಿಸಬಹುದು.  ಮತದಾರರ ಭಾವಚಿತ್ರವಿರುವ ಗುರುತಿನ ಚೀಟಿ ಹೊಂದಿರಬೇಕು ಅಥವಾ  ಮೇಲಿನ ಎರಡೂ ದಾಖಲೆಗಳು ಇಲ್ಲದೇ ಇರುವವರಿಗೂ ಮತ ಚಲಾಯಿಸಲು ಚುನಾವಣಾ ಆಯೋಗ ಪರ್ಯಾಯವಾಗಿ ೧೧ ಬಗೆಯ ದಾಖಲೆಗಳನ್ನು ನಿಗದಿಪಡಿಸಿದ್ದು, ಈ ೧೧ ದಾಖಲೆಗಳ ಪೈಕಿ ಯಾವುದಾದರೂ ಒಂದು ದಾಖಲೆಗಳಿದ್ದಲ್ಲಿ, ಮತ ಚಲಾಯಿಸಬಹುದಾಗಿದೆ.  ಪಾಸ್‌ಪೋರ್ಟ್, ವಾಹನ ಚಾಲನ ಪರವಾನಿಗೆ ಪತ್ರ, ಆಧಾರ್ ಕಾರ್ಡ್, ಪಾನ್ ಕಾರ್ಡ್, ನೌಕರರ ಗುರುತಿನ ಚೀಟಿ, ಬ್ಯಾಂಕ್ ಅಥವಾ ಅಂಚೆ ಇಲಾಖೆ ಖಾತೆ ಪುಸ್ತಕ, ಪಿಂಚಣಿ ಪುಸ್ತಕ,  ಉದ್ಯೋಗಖಾತ್ರಿ ಗುರುತಿನ ಚೀಟಿ,  ಕಾರ್ಮಿಕ ಇಲಾಖೆ ನೀಡಿರುವ ಆರೋಗ್ಯ ವಿಮಾ ಪ್ರಮಾಣ ಪತ್ರ, ಆರ್‌ಜಿಐ ನೀಡಿರುವ ಸ್ಮಾರ್ಟ್ ಕಾರ್ಡ್ ಸೇರಿದಂತೆ ೧೧ ದಾಖಲಾತಿಗಳಲ್ಲಿ ಯಾವುದಾದರೂ ಒಂದು ದಾಖಲೆ ತೋರಿಸಿ ಮತದಾನ ಮಾಡಬಹುದಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.


Advertisement

0 comments:

Post a Comment

 
Top