ಕೊಪ್ಪಳ : ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿಗೆ ಮಹಿಳಾ ಕಾಲೇಜಿಗೆ ಬಿ.ಎ, ಬಿ.ಕಾಂ ಹಾಗೂ ಬಿ.ಎಸ್ಸಿ ಕೋರ್ಸಗಳ ಆರಂಭಕ್ಕೆ ಕಾಲೇಜು ಶಿಕ್ಷಣ ಇಲಾಖೆ ಮತ್ತು ಬಿಜಾಪುರ ಮಹಿಳಾ ವಿಶ್ವವಿದ್ಯಾಲಯದ ಸಂಲಗ್ನತೆಯೊಂದಿಗೆ ಸದರಿ ಕೋರ್ಸಗಳಿಗೆ ಪ್ರವೇಶಾತಿ ಪಡೆಯಲು ಅನುಮತಿ ದೊರೆತಿದೆ. ಹಾಗೇಯೇ ೧೫ ಬೋಧಕ ಹಾಗೂ ೧೦ ಬೋಧಕೇತರ ಹುದ್ಧೆಗಳನ್ನು ಮಂಜೂರು ಮಾಡಿ ಆದೇಶ ಹೊರಡಿಸಿದೆ. ೨೦೧೪-೧೫ ನೇ ಸಾಲಿನ ಶೈಕ್ಷಣಿಕ ಪ್ರವೇಶಾತಿ ಪ್ರಕ್ರಿಯೆಯೂ ಜೂನ್ ತಿಂಗಳಿನಿಂದ ಆರಂಭಗೊಳ್ಳಲಿದೆ. ಸರ್ಕಾರಿ ಬಾಲಿಕಿಯರ ಪದವಿಪೂರ್ವ ಕಾಲೇಜಿನ ಆವರಣದಲ್ಲಿರುವ ಕಾಲೇಜಿನ ಕಾರ್ಯಾಲಯದಲ್ಲಿ ಪ್ರವೇಶಾತಿ ಆರಂಭಗೊಳ್ಳಲಿದೆ. ಈ ಪ್ರವೇಶಾತಿಯೂ ಕೇವಲ ವಿದ್ಯಾರ್ಥಿನಿಯರಿಗೆ ಮಾತ್ರ ಮೀಸಲಾಗಿದ್ದು ಕೊಪ್ಪಳ ನಗರ ಹಾಗೂ ವಿವಿಧ ಹಳ್ಳಿಗಳ ವಿದ್ಯಾರ್ಥಿನಿಯರು ಇದರ ಪ್ರಯೋಜನ ಪಡೆಯಬೇಕೆಂದು ಪ್ರಾಂಶುಪಾಲರಾದ ಪ್ರೊ .ಪ್ರಭುರಾಜ ನಾಯಕ ಪತ್ರಿಕಾ ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲರ ಮೊಬೈಲ್ ನಂ. ೯೪೮೨೧೨೪೩೭೬ ಸಂಪರ್ಕಿsಸಬಹುದು
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರ ಗ್ರಾಮಕ್ಕೆ ಜೂನ್ ತಿಂಗಳಿನಿಂದ ಪ್ರವೇಶಾತಿ ಪ್ರಾರಂಭ
ಕೊಪ್ಪಳ : ಯಲಬುರ್ಗಾ ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಾ. ಮಂಗಳೂರ ಗ್ರಾಮಕ್ಕೆ ಬಿ.ಎ, ಹಾಗೂ ಬಿ.ಕಾಂ ಕೋರ್ಸಗಳ ಆರಂಭಕ್ಕೆ ಕಾಲೇಜು ಶಿಕ್ಷಣ ಇಲಾಖೆ ಮತ್ತು ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಂಲಗ್ನತೆಯೊಂದಿಗೆ ಸದರಿ ಕೋರ್ಸಗಳಿಗೆ ಪ್ರವೇಶಾತಿ ಪಡೆಯಲು ಅನುಮತಿ ದೊರೆತಿದೆ. ಹಾಗೇಯೇ ೧೨ ಬೋಧಕ ಹಾಗೂ ೧೦ ಬೋಧಕೇತರ ಹುದ್ಧೆಗಳನ್ನು ಮಂಜೂರು ಮಾಡಿ ಆದೇಶ ಹೊರಡಿಸಿದೆ. ೨೦೧೪-೧೫ ನೇ ಸಾಲಿನ ಶೈಕ್ಷಣಿಕ ಪ್ರವೇಶಾತಿ ಪ್ರಕ್ರಿಯೆಯೂ ಮಂಗಳುರಿನ ಸರ್ಕಾರಿ ಪ್ರೌಡ ಶಾಲೆಯ ಆವರಣದಲ್ಲಿರುವ ಕಾಲೇಜಿನ ಕಾರ್ಯಾಲಯದಲ್ಲಿ ಜೂನ್ ತಿಂಗಳಿನಿಂದ ಆರಂಭಗೊಳ್ಳಲಿದೆ. ಈ ಪ್ರವೇಶಾತಿಯ ಪ್ರಯೋಜನವನ್ನು ಮಂಗಳೂರು ಹಾಗೂ ಸುತ್ತಮುತ್ತಲಿನ ಎಲ್ಲ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಇದರ ಪ್ರಯೋಜನ ಪಡೆಯಬೇಕೆಂದು ಪ್ರಾಂಶುಪಾಲರಾದ ಡಾ.ಡಿ.ಎಚ್.ನಾಯಕ್ ಪತ್ರಿಕಾ ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲರ ಮೊಬೈಲ್ ನಂ. ೯೪೪೮೮೭೭೦೮೫ ಸಂಪರ್ಕಿಸಬಹುದು.
0 comments:
Post a Comment