PLEASE LOGIN TO KANNADANET.COM FOR REGULAR NEWS-UPDATES

 ೧೨೦ಕ್ಕೂ ಅಧಿಕ ವರ್ಷ ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷದ  ಬೃಹತ್ ಸಮುದ್ರದ ಅಲೆ ಮುಂದೆ ಮೋದಿ ಸೇರಿ ಯಾವ ಅಲೆಗೂ ಇಲ್ಲಿ ನೆಲೆ ಸಿಗುವುದಿಲ್ಲ ಕೊಪ್ಪಳ ಕ್ಷೇತ್ರದಲ್ಲಿರುವುದು ಕೇವಲ ಕಾಂಗ್ರೆಸ್ ಅಲೆ ಮಾತ್ರ ಬೇರೊಂದಿಲ್ಲ ಎಂದು ಕಾಂಗ್ರೆಸ್ ಮುಖಂಡ ಕೆ.ಎಂ.ಸೈಯದ್ ಹೇಳಿದರು.
  ಅವರು ತಾಲೂಕಿನ ಅಗಳಕೇರಿ ಗ್ರಾಮದಲ್ಲಿಂದು ಲೋಕಸಭಾ ಚುನಾವಣೆ ಕೊಪ್ಪಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಬಸವರಾಜ್ ಹಿಟ್ನಾಳ ರವರ ಪರ ಏರ್ಪಡಿಸಿದ ಬಹಿರಂಗ ಮತಯಾಚನೆ ಸಮಾರಂಭದಲ್ಲಿ ಪಾಲಗೊಂಡು ಮಾತನಾಡಿದರು.
  ಮುಂದುವರೆದು ಮಾತನಾಡಿದ ಅವರು ಹಿಂದುಳಿದ ಹೈದ್ರಾಬಾದ್ ಕರ್ನಾಟಕ ಪ್ರದೇಶದ ಸಮಗ್ರ ಅಭಿವೃದ್ದಿಗಾಗಿ ಕೇಂದ್ರದ ಯುಪಿಎ ಸರ್ಕಾರ ಸಂವಿಧಾನದ ೩೭೧ನೇ (ಜೆ) ಕಲಂ ಜಾರಿಗೆ ತಂದು ಈ ಭಾಗದ ಜನತೆಗೆ ಅನುಕೂಲತೆ ದೊರಕಿಸಿ ಕೊಟ್ಟಿದ್ದು ಈ ಕಲಂ ಜಾರಿಗೆಯಾಗಿರುವುದು ಯುಪಿಎ ಕೊಡುಗೆ ಈ ಭಾಗದ ಜನತೆಗೆ ಸಿಕ್ಕಿದೆ ಈ ಹಿನ್ನಲೆಯಲ್ಲಿ ೧೬ನೇ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಈ ಬಾರಿ ಈ ಭಾಗದ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಲಿದೆ ಎಂದು  ಹೇಳಿದರು.
  ಈ ಹಿಂದೆ ೨೦೦೯ ರ ೧೫ನೇ ಲೋಕಸಭೆ ಚುನಾವಣೆಯಲ್ಲಿ ಶೈನಿಂಗ್ ಇಂಡಿಯಾ ಅಡ್ವಾಣಿ ಪ್ರಧಾನಿ ಎಂದು ಹೇಳಿದ್ದ ಬಿಜೆಪಿ ಹೀನಾಯ ಸೋಲುಂಡು ಈಗ ಮೋದಿ ಅಲೆ ಎಂದು ಹೇಳಲು ಹೊರಟಿರುವ ಬುಜೆಪಿಗೆ ಈ ಬಾರಿ ಕೊಡಾ ನಿರಾಸೆ ಕಾದಿದೆ ಅವರ ಈ ತಂತ್ರ ಫಲಿಸುವುದಿಲ್ಲ ಎಂದು ಕೆ.ಎಂ.ಸ್ಯಯದ್ ಹೇಳಿದರು.
      
   ಈ ಸಂದರ್ಭದಲ್ಲಿ ಹಿಟ್ನಾಳ ಜಿ.ಪಂ.ಸದಸ್ಯ ಕೆ.ರಮೇಶ ಹಿಟ್ನಾಳ, ತಾ.ಪಂ.ಮಾಜಿ ಅಧ್ಯಕ್ಷ ಪ್ರಭುರಾಜ ಪಾಟೀಲ್, ಭೂಸನೂರ್‌ಮಠ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು.

ಕೆ.ಎಂ.ಸೈಯದ್ ರಿಂದ ಅಂಬೇಡ್ಕರ್ ಭಾವಚಿತ್ರಕ್ಕೆ ಗೌರವಾರ್ಪಣೆ

 ಕೊಪ್ಪಳ,ಏ,೧೪: ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.

ಬಿ.ಆರ್.ಅಂಬೇಡ್ಕರ್ ರವರ ೧೨೩ನೇ ಜನ್ಮದಿನವನ್ನು ಅವರ ಭಾವಚಿತ್ರಕ್ಕೆ  ಸೈಯದ್ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಕೆ.ಎಂ.ಸ್ಯಯದ್ ರವರು ಸೋಮವಾರ ಬೆಳಿಗ್ಗೆ ಮಾಲಾರ್ಪಣೆಮಾಡಿ ಗೌರವ ಸಲ್ಲಿಸಿ ಅಂಬೇಡ್ಕರ್ ರವರ ೧೨೩ ನೇ ಜಯಂತಿ ಆಚರಿಸಿದರು.
      ನಂತರ ಅವರು ಮಾತನಾಡಿ ಸಾಮಾಜಿಕ ನ್ಯಾಯ ಪ್ರಜಾಪ್ರಭುತ್ವದ ವ್ಯವಸ್ಥೆ ಗಟ್ಟಿಗೊಳಿಸಲು ಜಾತ್ಯಾತೀತ ಶಕ್ತಿ ಒಗ್ಗಟ್ಟಾಗಬೇಕು ಶೋಷಿತರ ದನಿಯಾಗಿ ಅವರ ಪಾಲಿಗೆ ಸಂಜೀವಿಯಾಗಿದ್ದ ಅವರ ಆದರ್ಶ ಈ ದೇಶದ ಪ್ರತಿಯೊಬ್ಬ ಪ್ರಜೆ ಪಾಲಿಸಬೇಕು ಅವರು ಯಾವುದೇ ಒಂದು ಜಾತಿ ಜನಾಂಗಕ್ಕೆ ಸೀಮಿತವಾಗಿಲ್ಲ ಸರ್ವಜನಾಂಗಕ್ಕೆ ಸಂಭಂದಿಸಿದ i ಹಾನ್ ನಾಯಕರಾಗಿದ್ದರು ಎಂದು ಸೈಯದ್ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಕೆ.ಎಂ.ಸ್ಯಯದ್ ಹೇಳಿದರು.
    ಈ ಸಂದರ್ಭದಲ್ಲಿ ಅವರೊಂದಿಗೆ ಈ ಭಾಗದ ಅಲ್ಪಸಂಖ್ಯಾತ ಮುಖಂಡ ಸಮಾಜ ಸೇವಕ ಹಾಜಿ ಸೈಯದ್ ಹಜರತ್ ಪಾಷಾ ಖಾದ್ರಿ, ಯುವ ನಾಯಕ ಮಹೇಬೂಬ್ ಮುಲ್ಲಾ ಹನಮಸಾಗರ ಸೇರಿದಂತೆ ಟ್ರಸ್ಟಿನ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು.


Advertisement

0 comments:

Post a Comment

 
Top