PLEASE LOGIN TO KANNADANET.COM FOR REGULAR NEWS-UPDATES

ಗುಜರಾತ್‌ನಲ್ಲಿ ಏನು ಅಭಿವೃದ್ಧಿಯಾಗಿದೆ ಎಂದು ಯಾರಿಗೂ ಗೊತ್ತಿಲ್ಲ. ಯಾರೂ ಅಲ್ಲಿ ಹೋಗಿ ನೋಡಿ ಬಂದಿಲ್ಲ. ‘ಹೋಗಿ ನೋಡಿ ಬಂದಿದ್ದೇವೆ’ ಎಂದು ಹೇಳುವವರೂ ಅಹ್ಮದಾಬಾದ್, ಬರೋಡಾ, ಭಾವನಗರ, ಸೂರತ್‌ನಂಥ ನಗರಗಳಿಗೆ ಹೋಗಿ ಬಂದಿರುವುದಾಗಿ ಹೇಳುತ್ತಾರೆ. ಯಾರೂ ಅಲ್ಲಿನ ಹಳ್ಳಿಗಾಡಿಗೆ ಹೋಗಿಲ್ಲ. ಆದರೂ ಈ ಅಭಿವೃದ್ಧಿಯ ಪವಾಡ ಪುರುಷ ನರೇಂದ್ರ ಮೋದಿ ಎಂದು ಎಲ್ಲರನ್ನೂ ನಂಬಿಸುವ, ಒಪ್ಪಿಸುವ ಹುನ್ನಾರವೊಂದು ಈ ದೇಶದಲ್ಲಿ ನಡೆದಿದೆ. ದೇಶದ ಯಾವುದೇ ಮೂಲೆಗೆ ಹೋದರೂ ಈ ಪವಾಡ ಪುರುಷನ ಭಿತ್ತಿಪತ್ರಗಳು ಕಟೌಟ್‌ಗಳು ಕಾಣುತ್ತವೆ. ಕಾರ್ಪೊರೇಟ್ ಕಾಸಿನಲ್ಲಿ ಸಂಘಪರಿವಾರ ಇಂಥದೊಂದು ವಂಚನೆಯ ವ್ಯಾಪಾರ ಪ್ರಚಾರ ನಡೆಸಿದೆ.
ಯಾರಿಗೂ ಈಗ ಒಂದು ಸಂಘಟನೆಯ, ಒಬ್ಬ ವ್ಯಕ್ತಿಯ ಚರಿತ್ರೆಯನ್ನು ಅವಲೋಕಿಸುವ ವ್ಯವಧಾನವಿಲ್ಲ

. ಮಹಾತ್ಮಾ ಗಾಂಧೀಜಿ ಹತ್ಯೆ, ಬಾಬರಿ ಮಸೀದಿ ಧ್ವಂಸ, ಗುಜರಾತ್ ಹತ್ಯಾಕಾಂಡ, ಮೀಸಲಾತಿ ವಿರೋಧಿ ಚಳವಳಿ, ಕರ್ನಾಟಕದ ಬಿಜೆಪಿ ಸರಕಾರದ ಭ್ರಷ್ಟಾಚಾರ ಹಗರಣ, ಗಣಿಲೂಟಿ, ಸದನದಲ್ಲಿ ಬ್ಲೂಫಿಲಂ ವೀಕ್ಷಣೆ, ಹೀಗೆ ಯಾವುದೂ ಕೂಡ ಜನರ ನೆನಪಿಗೆ ಬಾರದಂತೆ ಮರೆ ಮಾಚಿ ಈ ಪವಾಡ ಪುರುಷನನ್ನು ಪ್ರಧಾನಿಯನ್ನಾಗಿ ಮಾಡಲು, ಸಂಘ ಪರಿವಾರ ಷಡ್ಯಂತ್ರ ರೂಪಿಸಿದೆ. ಇದಕ್ಕಾಗಿ ಎಷ್ಟಾದರೂ ಖರ್ಚಾಗಲಿ ಎಂದು ಅಂಬಾನಿ, ಅದಾನಿ, ಮಿತ್ತಲ್‌ರಂಥ ಕಾರ್ಪೊರೇಟ್ ಬಂಡವಾಳಿಗರು ತಮ್ಮ ತಿಜೋರಿಯ ಬಾಗಿಲು ತೆರೆದು ನಿಂತಿದ್ದಾರೆ.
ಸ್ವತಂತ್ರ ಭಾರತದ ಆರೂವರೆ ದಶಕ ಗಳಲ್ಲಿ ಒಂದು ಪಕ್ಷ ಒಬ್ಬ ವ್ಯಕ್ತಿಯನ್ನು ಪ್ರಧಾನಿ ಮಾಡಲು ಇಷ್ಟೊಂದು ಭಾರೀ ಪ್ರಮಾಣದ ಹಣವನ್ನು ಹಿಂದೆಂದೂ ವ್ಯಯಿಸಿರಲಿಲ್ಲ. ಅಂಬೇಡ್ಕರ್ ರೂಪಿ ಸಿದ ಸಂವಿಧಾನವನ್ನು ಸಮಾಧಿ ಮಾಡಿ ಹಿಂದೂ ರಾಷ್ಟ್ರ ನಿರ್ಮಾಣ ಮಾಡಲು ಇದೊಂದು ಅಪೂರ್ವ ಅವಕಾಶ ಎಂದು ತಿಳಿದ ಆರೆಸ್ಸೆಸ್ ಸಾವಿರಾರು ಕೋಟಿ ರೂ.ಗಳನ್ನು ಬಂಡವಾಳಿಗ ರಿಂದ ಸಂಗ್ರಹಿಸಿ ನೀರಿನಂತೆ ವ್ಯಯಿಸುತ್ತಿದೆ. ಹೆಲಿಕಾಪ್ಟರ್ ಹಾರಾಟ, ಮಾಧ್ಯಮಗಳಲ್ಲಿ ಜನಮತ ಸಮೀಕ್ಷೆಗೆ ದಕ್ಷಿಣೆ ಹೀಗೆ ನೂರಾರು ಕೋಟಿ ರೂ. ಚೆಲ್ಲುತ್ತಿದೆ.
ಈ ಪವಾಡ ಪುರುಷನ ಮತ್ತು ಆತನ ಹಿಟ್ಲರ್ ಪರಿವಾರದ ಚರಿತ್ರೆಯನ್ನು ಜನರ ಮುಂದೆ ಇಡಬೇಕಾದ ಕಾಂಗ್ರೆಸ್ ಪಕ್ಷದ ಸಂಘಟನಾ ಯಂತ್ರಕ್ಕೆ ತುಕ್ಕು ಹಿಡಿದಿದೆ. ಎಡಪಕ್ಷಗಳು ಈತನ ಜಾತಕ ಬಿಚ್ಚಿಡು ತ್ತಿದ್ದರೂ, ಆ ಪಕ್ಷಗಳ ದನಿಯನ್ನೇ ಯಾರೂ ಕೇಳಿಸದಂತೆ ಫ್ಯಾಸಿಸಂನ ಅಬ್ಬರ ಈ ದೇಶದಲ್ಲಿ ನಡೆದಿದೆ. ಅನಂತಮೂರ್ತಿ, ಚಂಪಾ, ಗಿರೀಶ್ ಕಾರ್ನಾಡ್, ಮರುಳಸಿದ್ದಪ್ಪ, ಜಿ.ಕೆ.ಗೋವಿಂದ ರಾವ್‌ರಂಥ ಚಿಂತಕರು ಗಾಂಧಿ ಹಂತಕ ಪರಿವಾರದ ಚರಿತ್ರೆಯ ಪುಟಗಳನ್ನು ಓದಿ ಹೇಳತೊಡಗಿ ದರೆ ಅವರನ್ನು ಹೆದರಿಸಿ ದನಿ ಯನ್ನು ಅಡಗಿಸುವ ಗೂಂಡಾಗಿರಿ ನಡೆದಿದೆ.
ಮೋದಿ ಮುಂದಿನ ಪ್ರಧಾನಿ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕು ಎಂಬ ಹಠ ಮತ್ತು ಫ್ಯಾಸಿಸ್ಟ್ ಮನೋವ್ಯಾಧಿಯನ್ನು ಎಲ್ಲೆಡೆ ಹರಡುವ ಯತ್ನ ನಡೆದಿದೆ. ಸಿದ್ದರಾಮಯ್ಯ, ಪರಮೇಶ್ವರ್ ಅಪ್ಪಿತಪ್ಪಿ ಏನಾದರೂ ಮಾತಾಡಿದರೆ ಅದಕ್ಕೆ ಬಣ್ಣಕಟ್ಟಿ ಟಿವಿಗಳಲ್ಲಿ ಇಡೀ ದಿನ ಚರ್ಚೆ ಮಾಡಿ ತೇಜೋವಧೆ ಮಾಡಲಾಗುತ್ತದೆ. ಗಿರೀಶ್ ಕಾರ್ನಾಡ್ ಕಾಂಗ್ರೆಸ್ಸಿನ ನಿಲೇಕಣಿ ಪರ ಪ್ರಚಾರ ಮಾಡಿದರೆ ಅದನ್ನು ದೊಡ್ಡ ಅಪರಾಧ ಎಂಬಂತೆ ಕನ್ನಡದ ಟಿವಿ ಚಾನಲ್ ಒಂದು ಬಿಂಬಿಸಲು ಯತ್ನಿಸಿತು. ಚಂಪಾ, ಕೋಟಗಾನಹಳ್ಳಿ, ಜೇಸುನಾರನ್ನು ಚರ್ಚೆಗೆ ಕರೆದು ಅವರಿಂದ ಕಾರ್ನಾಡ್‌ರನ್ನು ನಿಂದಿಸುವ ವಿಫಲ ಯತ್ನವನ್ನು ಬಿಜೆಪಿ ಕೃಪಾಪೋಷಿತ ಈ ಚಾನಲ್ ನಡೆಸಿತು.
ಆದರೆ ಎಸ್.ಎಲ್. ಭೈರಪ್ಪ ಮೋದಿ ಪರವಾಗಿ ಹೇಳಿಕೆ ನೀಡಿದರೆ ಯಾವುದೇ ವಿವಾದವಿಲ್ಲದೆ ಅದನ್ನೊಂದು ಸಹಜ ಸುದ್ದಿ ಎಂಬಂತೆ ಪ್ರಕಟಿಸಿ ಪ್ರಸಾರ ಮಾಡಲಾ ಯಿತು. ಬಿಜೆಪಿ ನಾಯಕ ಈಶ್ವರಪ್ಪ, ಬೀದರ್‌ನಲ್ಲಿ ಮಾತಾಡಿ ‘‘ನಮ್ಮ ಸೈನಿಕರನ್ನು ಪಾಕಿಗಳು ಕೊಂದು ಹೆಣ ಕಳಿಸಿದಾಗ ಸುಮ್ಮನಿದ್ದ ಸೋನಿಯಾ ತನ್ನ ಮಗ ರಾಹುಲ್‌ನ ಹೆಣ ಬಂದಿದ್ದರೆ ಸುಮ್ಮನಾಗು ತ್ತಿದ್ದರೆ’’ ಎಂದು ಅವಿವೇಕಿಯಂತೆ ಮಾತಾ ಡಿದ್ದು ಖಾಸಗಿ ಟಿವಿ ಚಾನಲ್‌ಗಳ ಪಂಡಿತರ ಪಾಲಿಗೆ ವಿವಾದವೇ ಅಲ್ಲ.
ಚಿಕ್ಕಬಳ್ಳಾಪುರ ದಿಂದ ಸ್ಪರ್ಧಿಸಿದ ಬಿಜೆಪಿ ನಾಯಕ ‘‘ಗಿರೀಶ್ ಕಾರ್ನಾಡ್‌ರಿಗೆ ಜ್ಞಾನಪೀಠ ಪ್ರಶಸ್ತಿ ಕೊಟ್ಟವರು ಯಾರು? ಆತ ಅಯೋಗ್ಯ’’ ಎಂದು ಟೀಕಿಸಿದಾಗಲೂ ಚಾನಲ್‌ಗಳು ತೆಪ್ಪಗಿದ್ದವು. ಜಗದೀಶ್ ಶೆಟ್ಟರ್‌ರವರು ಕಾರ್ನಾಡ್, ಅನಂತಮೂರ್ತಿ ಅವರನ್ನು ಬಾಯಿಗೆ ಬಂದಂತೆ ತೆಗಳಿದಾಗಲೂ ಅದು ವಿವಾದವಾಗಲಿಲ್ಲ. ಮೈಸೂರಿನ ನಾರಾಯಣಾ ಚಾರಿ (ಚಂಪಾ ಭಾಷೆಯಲ್ಲಿ ನಾರೊಹೆಣಾಚಾರಿ) ಎಂಬ ವೈದಿಕ ವಾಲ್ಮಿಕಿ ಬೇಡನಲ್ಲ ಬ್ರಾಹ್ಮಣ ಎಂದು ಪುಸ್ತಕ ಬರೆದರೆ ಈ ಟಿವಿ ಮನುವಾದಿಗಳಿಗೆ ಅದು ವಿವಾದವೆನ್ನಿಸಲಿಲ್ಲ.
ಆ ಬಗ್ಗೆ ಚರ್ಚೆ ನಡೆಸಲಿಲ್ಲ. ಈ ಕೊಳಕು ಆಚಾರಿಯ ಅಂಕಣಗಳಲ್ಲಿ ಮುಸಲ್ಮಾನರು ಮತ್ತು ಕ್ರೈಸ್ತರ ವಿರುದ್ಧ ವಾಂತಿ ಮಾಡಿಕೊಂಡಿ ರುತ್ತಾನೆ. ಅದು ಈ ದಂಡಪಿಂಡರಿಗೆ ತಪ್ಪೆಂದು ಎಂದೂ ಕಾಣಿಸಲಿಲ್ಲ. ಆದರೆ ಅನಂತ ಮೂರ್ತಿ, ಕಾರ್ನಾಡ್ ಮೋದಿ ಯನ್ನು, ಬಿಜೆಪಿಯನ್ನು ಫ್ಯಾಸಿಸ್ಟ್ ಎಂದು ಕರೆದರೆ ಇವರಿಗೆ ಮೈತುಂಬ ಕೆರೆತ ಶುರುವಾಗುತ್ತದೆ. ಸಂಘಪರಿವಾರದ ಹಿಂದೂ ಭಯೋ ತ್ಪಾದಕರ ಬಗ್ಗೆ ಈ ಮಾಧ್ಯಮಗಳು ಎಂದೂ ಬೆಳಕು ಚೆಲ್ಲುವುದಿಲ್ಲ.
ಅಲ್ಪಸಂಖ್ಯಾತ ಸಮುದಾಯದ ಯುವಕರನ್ನು ಭಯೋತ್ಪಾದಕ ರೆಂದು ಕತೆ ಕಟ್ಟಿ ದಾರಿತಪ್ಪಿಸುವ ಕೆಲಸ ಮಾಡುತ್ತ ಬಂದಿವೆ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ‘‘ಕೆಲ ಬಿಜೆಪಿ ನಾಯಕರ ಹತ್ಯೆಗೆ ಭಯೋತ್ಪಾದಕರ ಸಂಚು’ ಎಂಬ ಪ್ರಚಾರವನ್ನು ಈ ಮಾಧ್ಯಮಗಳು ಅತಿರಂಜಿತವಾಗಿ ಮಾಡಿದವು. ಆದರೆ ಅವರೆಲ್ಲ ನಿರ್ದೋಷಿಗಳಾಗಿ ಹೊರಗೆ ಬಂದರು. ಆದರೆ ಹುಬ್ಬಳ್ಳಿ ಕೋರ್ಟಿನಲ್ಲಿ ಸ್ಫೋಟಗೊಳಿಸಿದ ಚಡ್ಡಿ ಭಯೋತ್ಪಾದಕರ ಸುದ್ದಿಯನ್ನು ಮುಚ್ಚಿ ಹಾಕಿದವು.
ಮಂಗಳೂರಿನಲ್ಲಿ ಟಿ.ವಿ. ಚಾನಲ್‌ವೊಂದು ಮತದಾರರು ಮತ್ತು ಅಭ್ಯರ್ಥಿಗಳ ಮುಖಾ ಮುಖಿ ಕಾರ್ಯಕ್ರಮ ನಡೆಸಿದಾಗ ‘ಕಲ್ಲಡ್ಕ ಪ್ರಭಾಕರ ಭಟ್ಟರನ್ನು ಬಂಧಿಸಿಲ್ಲ ಏಕೆ?’ ಎಂದು ಸಚಿವ ರಮಾನಾಥ ರೈಗಳನ್ನು ಕೇಳಿದ ವ್ಯಕ್ತಿಯ ಮೇಲೆ ಹಲ್ಲೆ ನಡೆದು, ಕುರ್ಚಿಗಳನ್ನು ಬಿಸಾಡಿ, ಈ ಕಾರ್ಯಕ್ರಮವೇ ಅಪೂರ್ಣಗೊಂಡಿತು. ಮೋದಿಯನ್ನು ಟೀಕಿಸಿದ ತಪ್ಪಿಗಾಗಿ ಅರವಿಂದ ಕೇಜ್ರಿವಾಲ್ ಮೇಲೆ ಪದೇ ಪದೇ ಹಲ್ಲೆ ನಡೆಯುತ್ತಲೇ ಇದೆ. ಯೋಗೇಂದ್ರ ಯಾದವ್ ಮುಖಕ್ಕೆ ಮಸಿ ಬಳಿಯಲಾಯಿತು. ದಕ್ಷಿಣ ಕನ್ನಡದಲ್ಲಿ ಕಲ್ಲಡ್ಕ ಭಟ್ಟರ ಹೆಸರೆತ್ತಿದ ವರು ಜೀವಂತ ಬದುಕಿ ಬರುವುದು ಕಷ್ಟ.
ದೇಶದಲ್ಲಿ ಮೋದಿಯನ್ನು ಟೀಕಿಸಿ ದಕ್ಕಿಸಿಕೊಳ್ಳುವುದು ಸುಲಭವಲ್ಲ. ಇತ್ತೀಚೆಗೆ ಉತ್ತರ ಪ್ರದೇಶದ ಹಳ್ಳಿಯೊಂದರ ದಲಿತ ಕಾಲನಿಗೆ ಹೋದ ಸಿಎನ್‌ಎನ್-ಐಬಿಎನ್ ಚಾನಲ್‌ನ ವರದಿಗಾರ್ತಿಯೊಬ್ಬಳು, ಚುನಾವಣೆಯಲ್ಲಿ ನಿಮ್ಮ ಮತ ಯಾರಿಗೆ ಎಂದು ಕೇಳಿದಳು. ಅಲ್ಲಿ ಸೇರಿದ ಜನ ಉತ್ತರಿಸುವ ಮುನ್ನವೇ, ‘ಮೋದಿಗೆ ಅಲ್ಲವೇ’ ಎಂದು ತಾನೇ ಉತ್ತರಿಸಿದಳು. ‘ಮುಂದಿನ ಪ್ರಧಾನಿ ಯಾರಾಗಬೇಕು’ ಎಂದು ಕೇಳಿದಳು. ಜನ ಉತ್ತರಿಸುವ ಮುನ್ನವೇ ‘ಮೋದಿ’ ಎಂದು ಹೇಳಿ ಜನರ ಒಲವು ಮೋದಿ ಪರವಾಗಿದೆ ಎಂದು ತೆರೆಯ ಮೇಲೆ ಸುದ್ದಿ ಮಾಡಿದಳು.
ಈ ಟಿವಿ ಚಾನಲ್‌ಗಳು ಬದುಕುತ್ತಿರು ವುದು ದೇಶವನ್ನು ಕೊಳ್ಳೆ ಹೊಡೆಯು ತ್ತಿರುವ ಕಾರ್ಪೊರೇಟ್ ಬಂಡವಾಳ ಶಾಹಿಯ ಅನ್ನದ ಋಣದಲ್ಲಿ. ಒಂದು ಲಕ್ಷ ಕೋಟಿ ಸಂಪತ್ತನ್ನು ಹೊಂದಿದ ಮುಖೇಶ್ ಅಂಬಾನಿ ಪೆಟ್ರೋಲ್, ತೈಲ, ಪಾಲಿಸ್ಟರ್ ಬಟ್ಟೆ, ಆಹಾರ ಸಾಮಗ್ರಿಗಳ ಮಾರಾಟ ಮಳಿಗೆ, ಶಾಲೆ-ಕಾಲೇಜು, ಹೊಟೇಲು ಹೀಗೆ ಎಲ್ಲ ದಂಧೆಯ ರೂವಾರಿ. ಈತ ಈಚೆಗೆ ಇನ್ಫೋಟೆಲ್ ಟಿವಿ ಸಮೂಹ ಸಂಸ್ಥೆಯಲ್ಲಿ ಶೇ.95ರಷ್ಟು ಶೇರುಗಳನ್ನು ಖರೀದಿಸಿದ್ದಾನೆ. ಸಿಎನ್‌ಎನ್-ಐಬಿಎನ್, ಲೈವ್, ಸಿಎನ್‌ಬಿಸಿ, ಲೋಕಮತ ಹಾಗೂ ಈಟಿವಿಯ ಎಲ್ಲ ಚಾನಲ್‌ಗಳು ಸೇರಿ 27 ಚಾನಲ್‌ಗಳನ್ನು ನಿಯಂತ್ರಿಸುತ್ತಿದ್ದಾನೆ.
ಈ ಮುಖೇಶ್ ಅಂಬಾನಿಯ ಗುರಿ ಒಂದು ಲಕ್ಷ ಕೋಟಿ ಸಂಪತ್ತನ್ನು ಹತ್ತು ಲಕ್ಷ ಕೋಟಿ ರೂ.ಗೆ ಹೆಚ್ಚಿಸುವುದು. ಈ ಗುರಿ ಸಾಧಿಸ ಬೇಕಾದರೆ ದೇಶದ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಸಂಪೂರ್ಣ ಹಿಡಿತ ಸಾಧಿಸಬೇಕು. ಈ ಸಂಪನ್ಮೂಲ ವಶೀಕರಣಕ್ಕೆ ಸರಕಾರದಿಂದ ಯಾವುದೇ ಅಡೆತಡೆ ಬರಬಾರದೆಂದಿದ್ದರೆ ನರೇಂದ್ರ ಮೋದಿ ದೇಶದ ಪ್ರಧಾನಿಯಾಗ ಬೇಕು. ಇದಕ್ಕೆ ಪೂರಕವಾದ ವಾತಾವರಣವನ್ನು ಸೃಷ್ಟಿಸಲು ಮಾಧ್ಯಮದ ಮೇಲೆ ನಿಯಂತ್ರಣ ವಿರಬೇಕು. ಅಂಬಾನಿ, ಮಾತ್ರವಲ್ಲ ಇನ್ನು ಕೆಲ ಬಂಡಾವಳಿಗರಿಗೂ ಮೋದಿ ಬೇಕು.
ಅವರೂ ಇದಕ್ಕೆ ಬಳಸಿಕೊಳ್ಳುವುದು ಮಾಧ್ಯಮವನ್ನು ಎಂಬುದು ಎಲ್ಲರಿಗೂ ಗೊತ್ತಿದೆ. ಈ ಟಿವಿ ಚಾನಲ್‌ಗಳಲ್ಲಿ ಮೂಡಿಬರುತ್ತಿರುವ ಚುನಾವಣಾ ಸಮೀಕ್ಷೆಗಳು, ಭವಿಷ್ಯಗಳಲ್ಲಿ ಕಾರ್ಪೊರೇಟ್ ಬಂಡವಾಳದ ಅಮೇಧ್ಯವಿದೆ. ಮೋದಿ ಪರವಾದ ವಾತಾವರಣವನ್ನು ಸೃಷ್ಟಿಸಲು ನಿತ್ಯವೂ ಮೋದಿ ಭಜನೆ ನಡೆದಿದೆ. ಹೀಗಾಗಿ ಜನಸಾಮಾನ್ಯರನ್ನು ಬಾಧಿಸುತ್ತಿರುವ ಯಾವ ಸಮಸ್ಯೆಗಳೂ ಇಲ್ಲಿ ಚರ್ಚೆಯಾಗುವುದಿಲ್ಲ. ಈ ಚಾನಲ್‌ಗಳಲ್ಲಿ ಪ್ರಗತಿಪರರೆಂದು ತಮ್ಮನ್ನು ತಾವು ಕರೆದುಕೊಳ್ಳುವವರು ಇದ್ದರೂ ಅವರು ತಮ್ಮ ಮಾಲಕರ ಅನ್ನದ ಋಣದಲ್ಲಿದ್ದಾರೆ.
ಅಲ್ಲಿ ದೊರಕುವ ಲಕ್ಷ ಲಕ್ಷ ಸಂಬಳ ಅವರ ವೇಷವನ್ನು ಕಳಚಿ ಹಾಕಿದೆ. ಆರೆಸ್ಸೆಸ್‌ಗೆ ತನ್ನ ಮನುವಾದಿ ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಮೋದಿ ಎಂಬ ಸ್ವಯಂ ಸೇವಕಬೇಕು. ಅಂಬಾನಿಗಳು ದೇಶವನ್ನು ಲೂಟಿ ಮಾಡಲಿ, ಕೊಳ್ಳೆ ಹೊಡೆಯಲಿ ಹಿಂದುತ್ವದ ಪಂಜು ಉರಿಯಲು ಅವರು ತೈಲ ಸುರಿದರೆ ಅವರೆಲ್ಲ ರಾಷ್ಟ್ರಭಕ್ತರು! ಇದು ಇಂದಿನ ಸ್ಥಿತಿ. ಮೋದಿಯ ಗುಜರಾತ್‌ನ ಭಯಾನಕ ಸತ್ಯಗಳ ಬಗ್ಗೆ ಸಾಕಷ್ಟು ಅಂಕಿ-ಅಂಶಗಳು ಬೆಳಕಿಗೆ ಬರುತ್ತಿವೆ. ಅಲ್ಲಿನ ಬಡತನ, ನಿರುದ್ಯೋಗ, ಪೌಷ್ಟಿಕಾಂಶ ಕೊರತೆ, ನಿರಕ್ಷರತೆ, ಹೀಗೆ ಎಲ್ಲ ಸತ್ಯಸಂಗತಿಗಳು ಅಧಿಕೃತ ಅಂಕಿ-ಅಂಶಗಳೊಂದಿಗೆ ಬಯಲಾಗಿದ್ದರೂ ಅವು ಜನರನ್ನು ತಲುಪುತ್ತಿಲ್ಲ.
ಆದರೆ ಭಾರತದ ಜನ ಬುದ್ಧಿವಂತರು. ಈ ಮೋದಿ ಬ್ರಾಂಡ್ ಎಂಬ ಮಾರುಕಟ್ಟೆ ಸರಕಿನ ಬಗ್ಗೆ ಅವರಿಗೆ ಗೊತ್ತಿದೆ. ಆದರೆ ಅವರು ಮಾತಾಡುತ್ತಿಲ್ಲ. ಮೋದಿಯನ್ನು ಪ್ರಧಾನಿ ಎಂದು ಈಗಲೇ ಆಯ್ಕೆ ಮಾಡಿರುವ ಈ ಕಾರ್ಪೊರೇಟ್ ಮಾಧ್ಯಮಗಳು 2004 ಮತ್ತು 2009ರಲ್ಲಿ ಇದೇ ರೀತಿ ಸುಳ್ಳು ಭವಿಷ್ಯ ನುಡಿದಿದ್ದವು. ಭಾರತವನ್ನು ಹೊಳೆಯುವಂತೆ ಮಾಡಿದ ವಾಜಪೇಯಿ ಪಕ್ಷ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದಿದ್ದವು. ಆದರೆ ಆಗ ಯಾರು ಸೋತರು, ಯಾರು ಗೆದ್ದರು ಎಂದು ಎಲ್ಲರಿಗೂ ಗೊತ್ತಿದೆ. ಈ ಬಾರಿಯೂ ಮೋದಿ ಬಾಯಿಗೆ ಬಂದ ತುತ್ತು ಇನ್ಯಾರಿಗೋ ಹೋದರೆ ಅಚ್ಚರಿಪಡಬೇಕಾಗಿಲ್ಲ.
ಇದರರ್ಥ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆಂದಲ್ಲ. ಆದರೆ ಸಂವಿಧಾನದ ಮೇಲೆ ನಂಬಿಕೆ ಇರುವ ಜಾತ್ಯತೀತ ಪಕ್ಷಗಳೇ ಒಟ್ಟುಗೂಡಿ ಅಧಿಕಾರಕ್ಕೆ ಬರಬಹುದು. ಮೇ 16ರಂದು ಈ ಕಾರ್ಪೊರೇಟ್ ಕಮ್ಯೂನಲ್ ಬಲೂನು ತಾನು ಸೇರಬೇಕಾದ ಜಾಗವನ್ನು ಸೇರಬಹುದು.                                                         courtsey : Varthabharati   Photos : Internet

Advertisement

0 comments:

Post a Comment

 
Top