PLEASE LOGIN TO KANNADANET.COM FOR REGULAR NEWS-UPDATES

 ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿ ಹಾಗೂ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಕಾನೂನು ಮಹಾವಿದ್ಯಾಲಯ ಕೊಪ್ಪಳ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ಜಿಲ್ಲಾ ವಕೀಲರ ಸಂಘ ಹಾಗೂ   ರಾಷ್ಟ್ರೀಯ ಸೇವಾ ಯೋಜನೆಯ  ವತಿಯಿಂದ ದಿನಾಂಕ ೨೮-೦೩-೨೦೧೪ ರಂದು ಹಲಗೇರಿ ಗ್ರಾಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ವಾರ್ಷಿಕ ಶಿಬಿರದ ಆರನೇ ದಿನದಂದು ಮಹಿಳೆ ಮತ್ತು ಮಕ್ಕಳ ಹಕ್ಕು  ರಕ್ಷಣೆ ಕುರಿತು ಕಾನೂನು ಅರಿವು ಕಾರ್ಯಕ್ರಮದಲ್ಲಿ                       ವಿಶೇಷ ಉಪನ್ಯಾಸವನ್ನು ಹಮ್ಮಿಕೊಳ್ಳಲಾಗಿತ್ತು. 
                                    ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಜಿಲ್ಲಾ ನ್ಯಾಯಧೀಶರಾದ    ಶ್ರೀಕಾಂತ ದಾ. ಬಬಲಾದಿ ಆಗಮಿಸಿ ತಮ್ಮ ಉದ್ಘಾಟನ ಭಾಷಣದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ವ್ಯಾಜ್ಯವುಡಲು ಹಣಕಾಸಿನ ನೆರವು ವಕೀಲರ ನೇಮಕಾತಿ ಮತ್ತು ಉಚಿತ ಕಾನೂನಿನ ನೆರವನ್ನು ಸಹ ನೀಡುತ್ತದೆ. ಜನರು ಪ್ರಾದಿಕಾರವನ್ನು ಸಂಪರ್ಕಿಸಿ ಸದುಪಯೋಗಪಡಿಸಿಕೊಳ್ಳಬೇಕೆಂದು  ಹೇಳಿದರು. ೧೪ ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಪಡೆಯುವ ಹಕ್ಕಿದ್ದು ಈ ಹಕ್ಕನ್ನು ಖಾಸಗಿ ಶಾಲೆಗಳಲ್ಲಿಯು ಸಹ ಅವರು ಉಚಿತ ಶಿಕ್ಷಣ ಪಡೆಯುವ ಮೂಲಕ ಚಲಾಯಿಸಬಹುದು ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ.ರಾಜ್ಯ ವಕೀಲರ ಪರಿಷತ್ತಿನ ಸದಸ್ಯರಾದ ಶ್ರೀಮತಿ ಸಂಧ್ಯಾ ಮಾದಿನೂರುರವರು ಎನ್.ಎಸ್.ಎಸ್.ಎಂಬ ಕಾರ್ಯಕ್ರಮವು ವಿಧ್ಯಾರ್ಥಿಗಳ ಒಳಕಣ್ಣನ್ನು ತೆರೆಸುವ ಕಾರ್ಯಕ್ರಮವೆಂದು ಹೇಳಿದರು ಹಾಗೆಯೆ ಪ್ರತಿಯೊಬ್ಬರಿಗೆ ನಿರ್ದಿಷ್ಟ ಗುರಿ ಇರಬೇಕು ಅಂದರೆ ಮಾತ್ರ ಬದುಕು ಸಾರ್ಥಕವಾಗುತ್ತದೆಂದು ವಿಧ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಇನ್ನೋರ್ವ ಅತಿಥಿಗಳಾದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ  ಎ.ವಿ.ಕಣವಿಯವರು ಸಮಾಜದ ವ್ಯವಸ್ಥೆಯನ್ನು ಬದಲಾಯಿಸಬೇಕೆಂದರೆ ಪ್ರತಿಯೊಬ್ಬರು ಕಾನೂನನ್ನು ತಿಳೀದುಕೊಳ್ಳಬೇಕು ಹಾಗೂ ಕೇವಲ ಕಾನೂನಿಂದ ಮಾತ್ರ ಮೂಲಭೂತ ಹಕ್ಕುಗಳು ಮತ್ತು ಇತರ ಹಕ್ಕುಗಳನ್ನು ರಕ್ಷಣೆ ಮಾಡಲು ಸಾಧ್ಯವಾಗುವುದಿಲ್ಲ. ಕಾನೂನಿನ ಅರಿವಿನ ಜೊತೆಗೆ ಸಾಮಾಜಿಕ ಪ್ರಜ್ಞೆಯಿದ್ದರೆ ಮಾತ್ರ ಇವುಗಳನ್ನು ರಕ್ಷಿಸ ಹುದೆಂದು ಹೇಳಿದರು. ಕಾರ್ಯಕ್ರಮಕ್ಕೆ ಉಪನ್ಯಾಸಕರಾಗಿ ಆಗಮಿಸಿದ ಹಿರಿಯ ವಕೀಲರಾದ  ವಿ. ಎಮ್. ಭೂಸನೂರಮಠ ಇವರು ಜನಸಾಮನ್ಯರಿಗಾಗಿ ಕಾನೂನು ಎನ್ನುವ ವಿಷಯದಡಿ ಹಲವಾರು ಕಾನೂನುಗಳ ಬಗ್ಗೆ ಜನರಿಗೆ ಮಾಹಿತಿಯನ್ನು ನೀಡಿದರು. ಇನ್ನೋರ್ವ ಉಪನ್ಯಾಸಕರಾದ  ಎಸ್.ಎಮ್. ಪಾಟೀಲ ವಕೀಲರು  ಬ್ರೂಣ ಹತ್ಯೆ ನೀಷೆದ ಕಾಯ್ದೆಯ ಬಗ್ಗೆ ಉಪನ್ಯಾಸ ನೀಡಿದರು.  ಇನ್ನೋರ್ವ ವಕೀಲರಾದ  ಎಸ್.ಬಿ.ಪಾಟೀಲ್ ರವರು ವರದಕ್ಷಿಣೆ ನಿಷೇಧ ಕಾಯ್ದೆಯ ಬಗ್ಗೆ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿದ  ಕೆ.ನಾಗಬಸಯ್ಯ ಉಪನ್ಯಾಸಕರು ಕಾನೂನು ಮಹಾವಿಧ್ಯಾಲಯ ಇವರು ವರದಕ್ಷಿಣೆ ಇಲ್ಲದೆ ಮದುವೆಯಾಗುವುದಾಗಿ ಯುವಕರು ಸಂಕಲ್ಪ ಮಾಡಿಕೊಳ್ಳಬೇಕೆಂದು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಹೇಳಿದರು. ಕಾರ್ಯಕ್ರಮದಲ್ಲಿ ವಕೀಲರಾದ ಎಮ್.ಎಸ್.ಚಂಡೂರುರವರು ಸ್ವಾಗತವನ್ನು ಕೋರಿದರು. ಸುರೇಶ ಹಳ್ಳಿಕೇರಿ  ನಿರೂಪಿಸಿದರು. ಹಾಗೂ ಸುನಿತಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು.ಹಾಗೂ  ರಮೇಶ ಗಾಯಕವಾಡರವರು ವಂದಿಸಿದರು. 
            ಹಿರಿಯ ಶ್ರೇಣಿ ನ್ಯಾಯಧೀಶರಾದ  ದಶರಥ ಇವರು ಆಗಮಿಸಿದ್ದರು.  ಕಾರ್ಯಕ್ರಮದಲ್ಲಿ  ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧೀಕಾರಿಯಾದ   ಬಸವರಾಜ .ಎಸ್.ಎಮ್.ಹಾಗೂ ಕಾನೂನು ಮಹಾವಿಧ್ಯಾಲಯದ ಪ್ರಾಚಾರ್ಯರಾದ  ಡಾ.ಬಿ.ಎಸ್.ಹನಸಿಯವರು ಹಾಗೂ ಶಿಬಿರಾರ್ಥಿಗಳು,ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗ ಭಾಗವಹಿಸಿದ್ದರು.     

Advertisement

0 comments:

Post a Comment

 
Top