PLEASE LOGIN TO KANNADANET.COM FOR REGULAR NEWS-UPDATES

 ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಶುಕ್ರವಾರದಂದು ನಡೆದ ಪ್ರಥಮ ಭಾಷೆ ಕನ್ನಡ ವಿಷಯದ ಪರೀಕ್ಷೆಗೆ ಜಿಲ್ಲೆಯ ೧೫೮೯೭ ವಿದ್ಯಾರ್ಥಿಗಳು ಹಾಜರಾಗಿದ್ದು, ೪೪೯ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.  ಯಾವುದೇ ಡಿಬಾರ್ ಪ್ರಕರಣ ವರದಿಯಾಗಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
  ಎಸ್.ಎಸ್.ಎಲ್.ಸಿ. ಪರೀಕ್ಷೆಯ ಕನ್ನಡ ವಿಷಯಕ್ಕೆ ಬಾಲಕರು-೮೯೯೬, ಬಾಲಕಿಯರು- ೭೩೫೦ ಸೇರಿದಂತೆ ಒಟ್ಟು ೧೬೩೪೬ ವಿದ್ಯಾರ್ಥಿಗಳು ದಾಖಲಾಗಿದ್ದರು. ಇದರಲ್ಲಿ ಬಾಲಕರು- ೮೭೨೪, ಬಾಲಕಿಯರು- ೭೧೭೩ ಸೇರಿದಂತೆ ಒಟ್ಟು ೧೫೮೯೭ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು,   ೨೭೨-ಬಾಲಕರು, ೧೭೭- ಬಾಲಕಿಯರು ಗೈರು ಹಾಜರಾಗಿದ್ದಾರೆ. 
ಕೊಪ್ಪಳ ತಾಲೂಕಿನಲ್ಲಿ ೫೨೮೦ ವಿದ್ಯಾರ್ಥಿಗಳ ಪೈಕಿ ೫೦೮೫ ವಿದ್ಯಾರ್ಥಿಗಳು ಹಾಜರಾಗಿದ್ದಾರೆ.  ಗಂಗಾವತಿ ತಾಲೂಕಿನಲ್ಲಿ ೫೩೪೦ ವಿದ್ಯಾರ್ಥಿಗಳ ಪೈಕಿ ೫೨೨೫, ಕುಷ್ಟಗಿ ತಾಲೂಕಿನಲ್ಲಿ ೨೬೮೫ ವಿದ್ಯಾರ್ಥಿಗಳ ಪೈಕಿ ೨೬೦೫, ಯಲಬುರ್ಗಾ ತಾಲೂಕಿನಲ್ಲಿ ೩೦೪೧ ವಿದ್ಯಾರ್ಥಿಗಳ ಪೈಕಿ ೨೯೮೨ ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಕೊಪ್ಪಳ ತಾಲೂಕಿನಲ್ಲಿ ೧೯೫, ಗಂಗಾವತಿ- ೧೧೫, ಕುಷ್ಟಗಿ-೮೦ ಮತ್ತು ಯಲಬುರ್ಗಾ ತಾಲೂಕಿನಲ್ಲಿ ೫೯ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ .

Advertisement

0 comments:

Post a Comment

 
Top