ತಾಲೂಕಿನ ಹಟ್ಟಿ ಗ್ರಾಮದ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಮಕ್ಕಳ ರಕ್ಷಣಾ ಯೋಜನೆ ಯುನಿಸೇಫ್ - ಕೊಪ್ಪಳ ಹಾಗೂ ಅಳವಂಡಿ ಪೋಲಿಸ್ ಸ್ಟೇಷನ್ ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ ೩೦-೦೧-೨೦೧೪ ರ ಗುರುವಾರದಂದು ತೆರೆದ ಮನೆ ಕಾರ್ಯಕ್ರಮ ನಡೆಯಿತು.
ಮೊದಲಿಗೆ ವಿದ್ಯಾರ್ಥಿನಿಯರಿಗೆ ತೆರೆದ ಮನೆ ಕಾರ್ಯಕ್ರಮ ಮಾಡುವುದರ ಉದ್ದೇಶ ಬಯವನ್ನು ಹೋಗಲಾಡಿಸುವುದಕ್ಕಾಗಿ ಮತ್ತು ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ ಜೀತಪದ್ದತಿ ಶಾಲೆ ಬಿಟ್ಟಮಕ್ಕಳು ನಿರ್ಗತಿಕ ಮಕ್ಕಳು ಬಿಕ್ಷೆ ಬೇಡುವ ಮಕ್ಕಳು ಚಿಂದಿ ಆಯುವ ಮಕ್ಕಳು ನಿರ್ಗತಿಕ ಮಕ್ಕಳ ಸಹಾಯವಾಣಿ ೧೦೯೮ ಹಾಗೂ ೯೪೪೮೪೭೬೯೬೫ ಉಚಿತಕರೆ ಹಾಗೇಯೇ ಮಹಿಳಾ ಸಹಾಯವಾಣಿ ೧೦೯೧ ಗೆ ಇದುಕೂಡಾ ಉಚಿತ ಕರೆ ಈ ನಂಬರಗಳಿಗಗೆ ತಿಳಿಸಲುಯ ಮಕ್ಕಳ ವಿಶೇಷ ಠಾಣೆಯ ಅಧಿಕಾರಿಗಳಾದ ಶ್ರೀ ಪ್ರಭಾಕರ್ ಯು ಮಕ್ಕಳಿಗೆ ತಿಳಿಸಿದರು.
ಮಕ್ಕಳ ಹಕ್ಕುಗಳ ರಕ್ಷಣೆ ಲೈಂಗಿಕ ದೌರ್ಜನ್ಯಗಳ ಬಗ್ಗೆ ಕಾನೂನು ಸಂಘರ್ಷಕ್ಕೆ ಒಳಗಾದ ಮಕ್ಕಳ ರಕ್ಷಣೆಗೆ ಪೊಲೀಸ ಇಲಾಖೆಯು ಕಾರ್ಯಚಟುವಟಿಕೆ ಕುರಿತು ವಾಯರಲೆಸ್ ವಾಕಿಟಾಕಿ, ಗನ್ ಬಂದೂಕು, ರೈಪಲ್ ಎಸ್.ಎಲ್.ಆರ್ ರೈಪಲ್ , ಪರೇಡಗಳ ಬಗ್ಗೆ ಅಶೃವಾಯು, ಹೊಗೆಯಮೂಲಕ ಹಾರಿಸುವುದು, ಜಲಪಿರಂಗಿ, ಲಾಟಿಚಾರ್ಚ, ಯಾವ ಸಮಯದಲ್ಲಿ ಹೇಗೆ ಮಾಡುವುದು. ಬೀಟ್ ಗಳ ಬಗ್ಗೆ ಪೋಲಿಸ್ ಇಳಾಖೆಯ ಆಡಳಿತ ವೈಕರಿಯ ಬಗ್ಗೆ ಮಕ್ಕಳ ವಿಶೇಷ ಪೋಲೀಸ್ ಅಧಿಕಾರಿಪ್ರಭಾಕರ ಮಕ್ಕಳಿಗೆ ಮಾಹಿತಿ ನೀಡುವುದರ ಜೊತೆಗೆ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿದರು.
ಹಾಗೇಯೇ ಬಂದಿಖಾನೆ ಲಾಟಿ, ರಸ್ತೆ ನಿಯಮಗಳು ದಾಖಲೆಗಳ ಕೊಠಡಿಗಳು, ಅಪರಾದಿಗಳ ಕೊಠಡಿಗಳು. ಬಗ್ಗೆ ತಮ್ಮನಗೌಡ್ರ ಹೆಚ್ ತಿಳಿಸಿದರು.
ಹಿರಿಯ ಪೊಲೀಸ್ ಅಧಿಕಾರಿಗಳಾದ ಪ್ರಕಾಶ ಮೂಳೆ, ಮತ್ತು ಭೀಮಣ್ಣ ನಾಯಕ, ಹಾಗೂ ಸರಕಾರಿ ಪ್ರೌಢಶಾಲೆ ಹಟ್ಟಿ ಯ ದೈಹಿಕ ಶಿಕ್ಷಕಿಯಾದ ಶರಾವತಿ ಬಿ. ಹೆಚ್. ಮತ್ತು ನಾಗರಾಜ ಪೂಜಾರ, ಉಪಸ್ಥಿತರಿದ್ದರು. ಮಕ್ಕಳ ರಕ್ಷಣೆಯ ಯೋಜನೆಯ ಯುನಿಷೆಫ್‌ನ ಹಟ್ಟಿ ಗ್ರಾಮ ಪಂಚಾಯತಿಯ ಸಮುದಾಯ ಸಂಗಟಕರಾದ ರಂಗಪ್ಪ ಚನ್ನಪ್ಪ ಹಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
0 comments:
Post a Comment