PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ :  ವಿದ್ಯೆ ಪಡೆಯಲು ಜಾತಿ ಮತ ಬೇದವಿಲ್ಲ ಆದ್ದರಿಂದ ವಿದ್ಯಾರ್ಥಿಗಳು ಬದುಕಿನ ಯಶಸ್ಸಿಗೆ ಸದ್ಗುಣಗಳನ್ನು ಆದರಿಸಿಕೊಂಡು ಮನೆಯನಕ್ಕೂ ಸಮಾಜಕ್ಕೂ ಗೌರವ ತಂದು ಕೊಟ್ಟು ಆದರ್ಶ ವಿದ್ಯಾರ್ಥಿಗಳಾಗಿರಿ. ಸರಕಾರ ಶಿಕ್ಷಣಕ್ಕಾಗಿ ಆಧ್ಯತೆ ಕೊಟ್ಟು ಸೌಲಬ್ಯಗಳನ್ನು ನೀಡುತ್ತಿದೆ. ಸರಕಾರದ ಸೌಲಬ್ಯಗಳು ಬದುಕನ್ನು ರೂಪಿಸಿಕೊಳ್ಳಲು ಸಹಕಾರಿಯಾಗಲಿ ಎಂದು ತಾಲೂಕ ಪಂಚಾಯತಿ ಮಾಜಿ ಅಧ್ಯಕ್ಷ ವೆಂಕನಗೌಡ ಹಿರೇಗೌಡರ ಹೇಳಿದರು. ಅವರು ಕೊಪ್ಪಳ ತಾಲುಕಿನ ಕಾತರಕಿ ಗ್ರಾಮದ ಜಗಜೀವನರಾಮ್  ಕಾಲೋನಿಯಲ್ಲಿ ಸರಕಾರಿ ಕಿರಿಯ ಪ್ರಾಥಮಿಕ  ಶಾಲೆಯಲ್ಲಿ ಆಯೋಜಿಸಿದ್ದ ಅಕ್ಷರ ದಾಸೋಹ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಬಳಿಕ ಸಂಗಪ್ಪ ಕಣಗಾಲ ಮಾತನಾಡಿ ಶಿಕ್ಷಣ ವೆಂದರೆ ಕೇವಲ ಓದು ಅಲ್ಲ, ಆರೋಗ್ಯ ಮತ್ತು ಶಿಕ್ಷಣ ಅತ್ಯಗತ್ಯ, ಶಾರೀರಿಕವಾಗಿ, ಮಾನಸಿಕವಾಗಿ, ಬೌದಿಕವಾಗಿ ಶಿಕ್ಷಣ ಸಮನಾಗಿ ದೊರೆತರೆ ಅತ್ಯುತ್ತಮವಾದ ವ್ಯಕ್ತ್ತಿತ್ವ ರೂಪಿಸಿಕೊಳ್ಳಲು ಸಾದ್ಯವೆಂದರು. ಶಾಲಾ ಮುಖ್ಯೋಪಾದ್ಯಾಯ ಕೊಟ್ರಪ್ಪ ಏಳಬಾವಿ ಪ್ರಾಸ್ತಾವಿಕ ಮಾತನಾಡಿ, ಕಾತರಕಿಯು ತುಂಗಬದ್ರಾ ನದಿಗೆ ಮುಳುಗಡೆಯಾದ ಗ್ರಾಮವಾಗಿದ್ದು ಶಾಲೆಗೆ ಮೈದಾನದ ಸಮಸ್ಯೆಯಿದೆ. ಶಾಲಾ ಮಕಳಿಗೆ ಸರ್ವತೋಮುಖ ಅಭಿವೃದ್ದಿಯಾಗಬೇಕಾದರೆ ಕ್ರೀಡಾಂಗಣ ಮುಖ್ಯ ಆದ್ದರಿಂದ ಹೆಚ್ಚುತ್ತಿರುವ ಮಕ್ಕಳ ಸಂಖ್ಯೆ ಗನುಗುಣವಾಗಿ ಎರಡು ಕೊಟ್ಟಡಿಗಳ ಅವಸ್ಯಕತೆಯಿದ್ದು ಮಕ್ಕಳ ಆಟಕ್ಕಾಗಿ ಆಟದ ಮೈದಾನ ಕಲ್ಪಿಸಿಕೊಡಬೇಕೆಂದು ಗ್ರಾ. ಪಂ. ಅಧ್ಯಕ್ಷರಲ್ಲಿ ಮನವಿ ಮಾಡಿಕೊಂಡರು. 
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ. ಪಂ ಅಧ್ಯಕ್ಷ ಯಲ್ಲನಗೌಡ ಮಾಲಿಪಾಟೀಲ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಎಸ್.ಡಿ.ಎಂ.ಸಿ ಅಧ್ಯಕ್ಷ ನಿಂಗಪ್ಪ ದೇವರಮನಿ ಗ್ರಾ. ಪಂ ಸದಸ್ಯ ಮೈಲಪ್ಪ ದೇವರಮನಿ, ರಾಮಣ್ಣ ತಿಪ್ಪಣ್ಣವರ. ಎಸ್.ಡಿ.ಎಂ.ಸಿ ಅಧ್ಯಕ್ಷ ಮಲ್ಲಯ್ಯ ಸಾಲಿಮಠ, ರಾಜು ಹಿರೇಮಠ, ಪೊಲೀಸ್ ಅಧಿಕಾರಿ ವೀರಬಸಪ್ಪ ಬಣಕಾರ, ಶಿಕ್ಷಕ ಶರಣಪ್ಪ, ಮುಖ್ಯೋಪಾದ್ಯಾಯ ವಾಸುದೇವ ಕುಲಕರ್ಣೀ, ಎಸ್.ಡಿ.ಎಂ.ಸಿ ಸದಸ್ಯರಾದ ಲಕ್ಷ್ಮಣ್ಣ ಮ್ಯಾಗಳಮನಿ, ಯಮನೂರಪ್ಪ ಶಾವಂತ್ರವ್ವನವರ, ಯುವ ಮುಂದಾಳು ಜಗದಯ್ಯ ಸಾಲಿಮಠ ಇತರರು ವೇದಿಕೆ ಮೇಲಿದ್ದರು, 
ಶಿಕ್ಷಕ ಚಳ್ಳಪ್ಪ ನಿರೂಪಿಸಿದರೆ . ಸುರೇಶ ಅರಕೇರಿ ಸ್ವಾಗತಿಸಿದರು. ಶಿಕ್ಷಕ ಕುಮಾರ ನಾಯಕ ವಂದಿಸಿದರು. 

Advertisement

0 comments:

Post a Comment

 
Top